ಆಂಧ್ರಪ್ರದೇಶ:ದೇಶದಲ್ಲಿ ಟೊಮ್ಯಾಟೊ ಬೆಲೆ ದಿಢೀರ್​ ಏರಿಕೆ ಕಂಡ ಬಳಿಕ ಅನೇಕ ರೈತರು ಲಕ್ಷದಿಂದ ಕೋಟಿ ರೂ.ಗಳ ಆದಾಯವನ್ನು ಗಳಿಸಿದ್ದಾರೆ. ಆ ಸಾಲಿಗೆ ಮತ್ತೊಬ್ಬರು ಸೇರ್ಪಡೆಗೊಂಡಿದ್ದು, ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ರೈತನೊಬ್ಬ ತಾನು ಬೆಳೆದ 40,000 ಬಾಕ್ಸ್ ಟೊಮ್ಯಾಟೊ ಮಾರಾಟ ಮಾಡಿ 45 ದಿನಗಳ ಅವಧಿಯಲ್ಲಿ ಬರೋಬ್ಬರಿ 4 ಕೋಟಿ ರೂ. ಪಡೆದಿದ್ದಾರೆ.
ಇದನ್ನೂ ಓದಿ:Bommai Slams CM Siddaramaiah: ಮುಖ್ಯಮಂತ್ರಿಗಳು ವಿಡಿಯೋ ಕಾನ್ಫರೆನ್ಸ್ ಮಾಡೋದು ಬಿಟ್ರೆ ಬೇರೆ ಏನು ಮಾಡಿಲ್ಲ: ಬೊಮ್ಮಾಯಿ
22 ಎಕರೆ ಕೃಷಿ ಭೂಮಿ ಹೊಂದಿರುವ ಟೊಮ್ಯಾಟೊ ಕೃಷಿಕ ಚಂದ್ರಮೌಳಿ ಅವರು, ಏಪ್ರಿಲ್​ನ ಮೊದಲ ವಾರದಲ್ಲಿ ಅಪರೂಪದ ಟೊಮ್ಯಾಟೊ ಗಿಡವನ್ನು ಬಿತ್ತಿದ್ದಾರೆ. ಉತ್ತಮ ಇಳುವರಿಯನ್ನು ಅಲ್ಪಾವಧಿಯಲ್ಲಿ ಪಡೆಯಲು ಸೂಕ್ಷ್ಮ ನೀರಾವರಿ ವಿಧಾನಗಳನ್ನು ಅನುಸರಿಸಿದ್ದಾರೆ. ಜೂನ್ ಅಂತ್ಯದ ವೇಳೆಗೆ ತಾವು ನಿರೀಕ್ಷಿಸಿದಂತೆ ಲಾಭದಾಯಕ ಇಳುವರಿ ಪಡೆದಿದ್ದರಿಂದ ಈ ಪ್ರಯತ್ನದಲ್ಲಿ ಅವರು ಯಶಸ್ವಿಯಾಗಿದ್ದಾರೆ.
ತಾವು ಬೆಳೆದ ಬೆಳೆಯನ್ನು ಕರ್ನಾಟಕದ ಕೋಲಾರ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದಾರೆ. ಕಳೆದ 45 ದಿನಗಳಲ್ಲಿ 40,000 ಬಾಕ್ಸ್‌ಗಳನ್ನು ಮಾರಾಟ ಮಾಡಿದಾಗ ಮಾರುಕಟ್ಟೆಯಲ್ಲಿ 15 ಕೆಜಿ ಕ್ರೇಟ್ ಟೊಮ್ಯಾಟೊ ಬೆಲೆ 1,000- 1,500 ರೂ. ಇತ್ತು ಎಂದು ಸಂತಸ ವ್ಯಕ್ತಪಡಿಸಿದ ಚಂದ್ರಮೌಳಿ, “ಇಲ್ಲಿಯವರೆಗೆ ನಾನು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಕೊಟ್ಟಾಗ 4 ಕೋಟಿ ರೂ. ಆದಾಯ ಬಂದಿದೆ. ಅದರಲ್ಲಿ 1 ಕೋಟಿ ರೂ. ಕಮಿಷನ್ ಮತ್ತು ಸಾರಿಗೆ ಶುಲ್ಕಕ್ಕಾಗಿ ಕಡಿತಗೊಂಡಿದೆ. ಆದ್ದರಿಂದ, ಲಾಭವು 3 ಕೋಟಿ ರೂ. ಲಭಿಸಿದೆ” ಎಂದು ಹೇಳಿದ್ದಾರೆ,(ಏಜೆನ್ಸೀಸ್).
ಬಾಲಿವುಡ್​ನ ಈ ಸಿನಿಮಾ ಇಸ್ರೇಲ್​ಗೆ ಸಿಟ್ಟು ತರಿಸಿದ್ಯಾಕೆ? 60 ಲಕ್ಷ ಜನರ ಸಾವನ್ನು ಕ್ಷುಲ್ಲಕವಾಗಿ ತೋರಿಸಿದ್ರಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 1 =
Remember me
