ನವದೆಹಲಿ:ಕಳೆದ ಎರಡು ತಿಂಗಳಿನಿಂದ ದೇಶದ ಹಲವು ರಾಜ್ಯಗಳಲ್ಲಿ ಟೊಮ್ಯಾಟೊ ಬೆಲೆ ಗಗನಕ್ಕೇರಿತ್ತು. ಕೆಜಿಗೆ ಬರೋಬ್ಬರಿ 190-250 ರೂ. ಏರಿಕೆಯಾಗುವ ಮೂಲಕ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದ್ದ ಟೊಮ್ಯಾಟೊ ದರದಲ್ಲಿ ಇದೀಗ ಕೊಂಚ ಇಳಿಕೆ ಕಾಣುತ್ತಿದೆ.
ಇದನ್ನೂ ಓದಿ:ಯುಪಿಎಸ್​​ಸಿ ಇಎಸ್​​ಇ ಮೇನ್ಸ್ ಡಿಎಎಫ್ ಬಿಡುಗಡೆ, ಅರ್ಜಿ ಭರ್ತಿ ಮಾಡಲು ನೇರ ಲಿಂಕ್ ಇಲ್ಲಿದೆ…
ದುಬಾರಿಯಾಗಿರುವ ಟೊಮ್ಯಾಟೊ ಬೆಲೆಯ ಹೊರೆಯನ್ನು ಕಡಿತಗೊಳಿಸಲು ಕೇಂದ್ರ ಸರ್ಕಾರ ನೆರವು ನೀಡಲು ಸೂಕ್ತ ಕ್ರಮ ಕೈಗೊಂಡಿದೆ. ಈ ಭಾಗವಾಗಿ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ನ್ಯಾಷನಲ್ ಕೋ-ಆಪರೇಟಿವ್ ಕನ್ಸ್ಯೂಮರ್ಸ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (NCCF) ಪ್ರತಿ ಕೆಜಿಗೆ 70 ರೂ.ಗೆ ಟೊಮ್ಯಾಟೊ ನೀಡಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಹೇಳಿದರು.
ಈ ಕುರಿತು ಮಾತನಾಡಿದ ನಿರ್ಮಲಾ ಸೀತಾರಾಮನ್, ಎನ್‌ಸಿಸಿಎಫ್ ರಾಷ್ಟ್ರೀಯ ರಾಜಧಾನಿಯಾದ್ಯಂತ ಪ್ರತಿ ಕೆಜಿಗೆ 70 ರೂ.ಗೆ ಟೊಮ್ಯಾಟೊ ಕೊಡಲಿದೆ. ಮನೆಗೆ ಬಳಸುವ ದಿನನಿತ್ಯದ ಸಾಮಾಗ್ರಿಗಳನ್ನು ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳ ಎನ್​ಸಿಸಿಎಫ್​ (NCCF) ಮತ್ತು ಎನ್​​ಎಎಫ್​​ಇಡಿ (NAFED) ನಂತಹ ಸಹಕಾರಿ ಸಂಸ್ಥೆಗಳ ಮೂಲಕ ಖರೀದಿಸಲಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ:ಅತ್ತಿಗುಪ್ಪೆ ವಾರ್ಡ್ ಮಾಜಿ ಕಾರ್ಪೋರೇಟರ್ ದೊಡ್ಡಣ್ಣ ಅವರ ಪುತ್ರ ಆತ್ಮಹತ್ಯೆ; ಗುತ್ತಿಗೆದಾರ ಅಲ್ಲ ಪಾಲಕರು ಸ್ಪಷ್ಟನೆ
ಬಿಹಾರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತು ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಜುಲೈ 14 ರಿಂದ ಇದೇ ರೀತಿಯ ಕ್ರಮಗಳನ್ನು ಮಾಡಲಾಗಿದೆ. ಆಮದು ಮೇಲಿನ ಮಿತಿಗಳನ್ನು ಸಡಿಲಿಸಿದ ನಂತರ ಸರ್ಕಾರವು ನೇಪಾಳದಿಂದ ಟೊಮ್ಯಾಟೊಗಳನ್ನು ಆಮದು ಮಾಡಿಕೊಳ್ಳಲು ಪ್ರಾರಂಭಿಸಿದೆ ಎಂದು ಸಚಿವೆ ಹೇಳಿದರು. ಶುಕ್ರವಾರದ ವೇಳೆಗೆ ವಾರಣಾಸಿ, ಲಕ್ನೋ ಮತ್ತು ಕಾನ್ಪುರಕ್ಕೆ ಟೊಮ್ಯಾಟೊ ಮೊದಲ ಸಾಗಣೆಯು ಬರುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ,(ಏಜೆನ್ಸೀಸ್).
‘ಜವಾನ್’​ ಚಿತ್ರದಲ್ಲಿ ಸಮಾಜಕ್ಕೆ ಏನಾದರೂ ಸಂದೇಶವಿದ್ಯಾ?; ಅಭಿಮಾನಿ ಪ್ರಶ್ನೆಗೆ ಶಾರೂಖ್​ ಕೊಟ್ಟ ಉತ್ತರವೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
