ಗಾಂಧಿನಗರ:ದೇಶದ ಪ್ರಪ್ರಥಮ ಸೀಪ್ಲೇನ್​ಗೆ ನಾಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ. ಸರ್ದಾರ್ ವಲ್ಲಭಭಾಯಿ ಪಟೇಲ್​ ಅವರ 145ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಅವರು ಈ ಮೂಲಕ ಗೌರವ ಸಲ್ಲಿಸಲಿದ್ದಾರೆ.
ದೇಶದ ಪ್ರಪ್ರಥಮ ಸೀಪ್ಲೇನ್​ ಸ್ಟ್ಯಾಚ್ಯೂ ಆಫ್​ ಯುನಿಟಿ ಸ್ಥಳದಿಂದ ಅಹಮದಾಬಾದ್​ನ ಸಬರಮತಿ ನಡುವೆ ಸಂಚರಿಸಲಿದೆ. ಅವರು ಶನಿವಾರ ಸಂಜೆ ಸರ್ದಾರ್ ಸರೋವರ್ ಡ್ಯಾಮ್ ಬಳಿ ಮೂರನೇ ಸರೋವರದ ಬಳಿ ತೆರಳಲಿದ್ದು, ಅಲ್ಲಿ ಸೀಪ್ಲೇನ್​ಗೆ ಚಾಲನೆ ನೀಡಲಿದ್ದಾರೆ.
ಏನಿದು ಸೀಪ್ಲೇನ್​?: ನೀರಿನ ಮೇಲೆ ಟೇಕಾಫ್​ ಹಾಗೂ ಲ್ಯಾಂಡಿಂಗ್ ಆಗುವಂಥ ಏರೋಪ್ಲೇನ್​ ಥರದ ವಾಹನಕ್ಕೆ ಸೀಪ್ಲೇನ್​ ಎನ್ನುತ್ತಾರೆ. ಸದ್ಯ ಸ್ಪೈಸ್​​ಜೆಟ್​ ಕಂಪನಿ ಈ ಸೀಪ್ಲೇನ್​ ಸರ್ವೀಸ್​ ನೀಡಲಿದೆ. ಕೇಂದ್ರ ಸರ್ಕಾರದ ಉಡಾನ್​ ಯೋಜನೆಯಡಿ ಈ ಸೇವೆ ನೀಡಲಾಗುತ್ತಿದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
