ನವದೆಹಲಿ:ಸಿಎಂ ಅರವಿಂದ್​ ಕೇಜ್ರಿವಾಲ್​ ನೇತೃತ್ವದ ದೆಹಲಿ ಸರ್ಕಾರವು ಈ ಹಿಂದೆ ಜಾರಿಗೆ ತರಲು ಉದ್ಧೇಶಿಸಿದ್ದ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಅಕ್ರಮಕ್ಕೆ ಸಂಬಂಧಿಸಿದಂತೆ 17 ತಿಂಗಳು ಸೆರೆವಾಸದಲ್ಲಿದ್ದ ಉಪಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ಅವರಿಗೆ ಸುಪ್ರೀಂ ಕೋರ್ಟ್​ ಶುಕ್ರವಾರ (ಆಗಸ್ಟ್​ 09) ಷರತ್ತುಬದ್ಧ ಜಾಮೀನನ್ನು ಮಂಜೂರು ಮಾಡಿದೆ.
ಅಬಕಾರಿ ನೀತಿ ಜಾರಿಗೆ ಸಂಬಂಧಿಸಿದಂತೆ ನಡೆದಿತ್ತು ಎನ್ನಲಾದ ಬಹುಕೋಟಿ ಅಕ್ರಮಕ್ಕೆ ಸಂಬಂಧಿಸಿದಂತೆ 2023ರ ಫೆಬ್ರವರಿ ತಿಂಗಳಲ್ಲಿ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಮನೀಷ್​ ಸಿಸೋಡಿಯಾರನ್ನು ಬಂಧಿಸಿತ್ತು. ಸಿಸೋಡಿಯಾ ಬಂಧಮುಕ್ತರಾಗುತ್ತಿದ್ದಂತೆ ಎಎಪಿ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲುಮುಟ್ಟಿದ್ದು,  ಮೆರವಣಿಗೆ ನಡೆಸಿ, ಹೂವಿನ ಮಳೆಗೆರೆದು ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಇತ್ತ ಸಿಸೋಡಿಯಾ ಮಹಾತ್ಮ ಗಾಂಧಿ ಸಮಾಧಿ ರಾಜ್​ಘಾಟ್​, ಹನುಮಾನ್​ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಬಳಿಕ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
#WATCH| Delhi: AAP leader and former Deputy CM Manish Sisodia says, "… These tears have given me strength…I was hoping that justice would be delivered in 7-8 months. It took 17 months but honesty and truth have won…"pic.twitter.com/IXDgO8to0z
ಇದನ್ನೂ ಓದಿ:ಬಾಂಗ್ಲಾ ನಂತರ ಭಾರತದಲ್ಲೂ ಜನರು ಪ್ರಧಾನಿ ವಿರುದ್ಧ ದಂಗೆ ಏಳುತ್ತಾರೆ: ಕಾಂಗ್ರೆಸ್​ ನಾಯಕ ಸಜ್ಜನ್​ ಸಿಂಗ್​
17-18 ತಿಂಗಳಿಗಿಂತ ಮುಂಚಿತವಾಗಿಯೇ ನಾವು ಈ ಹೋರಾಟವನ್ನು ಮಾಡುತ್ತಿದ್ದೇವೆ. ನಾನು ಜೈಲಿನಲ್ಲಿದ್ದೆ, ಅರವಿಂದ್​ ಈಗ ಜೈಲಿನಲ್ಲಿದ್ದಾರೆ. ಈಗಲೂ ನಿವೂ ಹೋರಾಟ ಮಾಡುತ್ತಿದ್ದೀರಿ. ನಮ್ಮ ಪರ ಕೆಲಸ ಮಾಡುತ್ತಿರುವ ವಕೀಲರು ದಣಿವರಿಯದೆ ನ್ಯಾಯಾಲಯಗಳನ್ನು ಸುತ್ತುತ್ತಿದ್ದಾರೆ. ಅಭಿಷೇಕ್​ ಮನು ಸಿಂಘ್ವಿ ನನಗೆ ದೇವರಿದ್ದಂತೆ ಅರವಿಂದ್​ ಕೇಜ್ರಿವಾಲ್​ ಅವರು ಶೀಘ್ರ ಬಂಧಮುಕ್ತರಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಚಿವ ಸೌರಭ್​ ಭಾರಧ್ವಾಜ್​ ಮಾತನಾಡಿ, ಎಎಪಿ ಸಂಕಷ್ಟದಲ್ಲಿರುವ ಪ್ರತಿಬಾರಿಯೂ ಹನುಮಂತ ನಮ್ಮನ್ನು ಕಾಪಾಡಿದ್ದೇನೆ. ಶೀಘ್ರದಲ್ಲೇ ಸಂಕಷ್ಟಗಳು ದೂರಾಗಲಿವೆ ಎಂದು ಸೌರಭ್​ ಹೇಳಿದ್ದಾರೆ.
जेल से निकलने के बाद राजघाट पर राष्ट्रपिता महात्मा गांधी जी को श्रद्धांजलि। LIVEhttps://t.co/f2uj06qSND
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + nineteen =
Remember me
