ನವದೆಹಲಿ:“ಕ್ಯಾ ಜೆಂಡರ್, ಏಜ್, ಪ್ರೊಫೆಷನ್ ಪೂಚ್ ಕರ್ ಗುನಾ ತೆಯ್ ಹೋಗಾ?” – ಇದು ಟೂಲ್​ಕಿಟ್​ ಪ್ರಕರಣದ ಆರೋಪಿ ದಿಶಾ ರವಿಯ ಚಿಕ್ಕ ವಯಸ್ಸಿನ ಬಗ್ಗೆ ಎತ್ತಿದ ಪ್ರಶ್ನೆಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ನೀಡಿದ ಪ್ರತಿಕ್ರಿಯೆ. ದಿಶಾ ಕೇವಲ 22 ವಯಸ್ಸಿನವಳಾಗಿದ್ದಾಳೆ ಎಂದು ಅವಳ ಬಂಧನವನ್ನು ಕೆಲವರು ಖಂಡಿಸುತ್ತಿರುವ ಹಿನ್ನೆಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, “ಲಿಂಗ, ವಯಸ್ಸು, ವೃತ್ತಿ ಕೇಳಿಕೊಂಡು ಅಪರಾಧ ನಿರ್ಧಾರ ಆಗುತ್ತಾ..?” ಎಂದು ಷಾ ಪ್ರಶ್ನೆ ಹಾಕಿದ್ದಾರೆ.
ಟೂಲ್​ಕಿಟ್​ ಪ್ರಕರಣದಲ್ಲಿ ದಿಶಾ ರವಿ ಮೇಲೆ ದೆಹಲಿ ಪೊಲೀಸರ ಕ್ರಮವನ್ನು ಸಮರ್ಥಿಸಿಕೊಂಡಿರುವ ಷಾ, “ವ್ಯಕ್ತಿಯ ವಯಸ್ಸಿನ ಮೇಲೆ ಅಪರಾಧ ಮಾಡಿದ್ದಾರಾ ಇಲ್ಲವಾ ಎಂದು ಹೇಳೋಕೆ ಆಗಲ್ಲ. ಯಾವುದೇ ಕೇಸಿನ ವಿಷಯವಾಗಿ ಆರೋಪಿಗಳ ವೃತ್ತಿ ಮತ್ತು ವಯಸ್ಸಿನ ಬಗ್ಗೆ ಜನರು ಮಾತನಾಡಲು ಶುರು ಮಾಡುವುದು ಯಾವ ರೀತಿ ಟ್ರೆಂಡ್?!” ಎಂದಿದ್ದಾರೆ. ದೆಹಲಿ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ ಎಂದರೆ ಏನಾದರೂ ಪುರಾವೆ ಇರಬೇಕು ಎಂದಿರುವ ಷಾ, ಬಂಧನದ ವಿರುದ್ಧ ಪ್ರಶ್ನೆಗಳನ್ನು ಎತ್ತುವುದು ಸುಲಭ. ಆದರೆ ಏನಾದರೂ ಕೆಟ್ಟದ್ದಾದರೆ ಜವಾಬ್ದಾರಿ ತೆಗೆದುಕೊಳ್ಳುವವರು ಯಾರು ?” ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಗ್ರೆಟಾ ಟೂಲ್​ಕಿಟ್​​ ಪ್ರಕರಣ : ವಕೀಲೆ ನಿಕಿತಾ ಜೇಕಬ್​ಗೆ ನಿರೀಕ್ಷಣಾ ಜಾಮೀನು
ಟೂಲ್​ಕಿಟ್​ ಪ್ರಕರಣದಲ್ಲಿ ಯಾವುದೇ ರಾಜಕೀಯ ಒತ್ತಡ ಇಲ್ಲ; ದೆಹಲಿ ಪೊಲೀಸರಿಗೆ ಮುಕ್ತವಾಗಿ ಕಾರ್ಯಾಚರಣೆ ನಡೆಸಲು ಅವಕಾಶ ನೀಡಲಾಗಿದೆ ಎಂದು ಷಾ ಹೇಳಿದ್ದಾರೆ. “ಪ್ರಕರಣದ ಮೆರಿಟ್ಸ್ ಬಗ್ಗೆ ನಾನು ಏನೂ ಹೇಳಲು ಇಚ್ಛಿಸುವುದಿಲ್ಲ. ಒಂದು ಪಕ್ಷ ತನಿಖೆಯಲ್ಲಿ ಯಾವುದಾದರೂ ಲೋಪವಾಗಿದ್ದಲ್ಲಿ, ಕೇಸನ್ನು ರದ್ದು ಮಾಡಲು ನ್ಯಾಯಾಲಯಗಳ ಮೊರೆ ಹೋಗಿ ಪರಿಹಾರ ಪಡೆಯುವ ಅವಕಾಶವಿದೆ” ಎಂದಿದ್ದಾರೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಮಾನನಷ್ಟ ಮೊಕದ್ದಮೆ : ಅಮಿತ್​ ಷಾಗೆ ಬಂಗಾಳ ಕೋರ್ಟ್ ಸಮನ್ಸ್

ಏನೋ ಮಾಡಲು ಹೋಗಿ ಮಾಡಬಾರದ್ದನ್ನು ಮಾಡಿ ದಿಶಾಳನ್ನು ಸಂಕಷ್ಟಕ್ಕೆ ಸಿಲುಕಿಸಿದ ಗ್ರೇಟಾ ಮಾಡಿದಳೊಂದು ಟ್ವೀಟ್‌…

ಕರೊನಾ ನಿವಾರಣೆಗೆ ಪಣತೊಟ್ಟ ಸರ್ಕಾರ… ಲಸಿಕೆ ನಿರಾಕರಿಸಿದವರಿಗೆ ಶಿಕ್ಷೆ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − three =
Remember me
