ನವದೆಹಲಿ:ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ ಗ್ರೆಟಾ ಥನ್​ಬರ್ಗ್​ಳ ಟೂಲ್​ಕಿಟ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪರಿಸರ ಹೋರಾಟಗಾರ್ತಿ ದಿಶಾ ರವಿಯನ್ನು ಬಂಧಿಸಿದ ನಂತರ ಇದೀಗ ಇನ್ನಿಬ್ಬರಿಗೆ ವಾರಂಟ್​ ನೀಡಲಾಗಿದೆ. ನಿಕಿತಾ ಜೇಕಬ್​ ಹೆಸರಿನ ವಕೀಲೆಯೂ ಟೂಲ್​ಕಿಟ್​ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾಗಿ ತಿಳಿಸಲಾಗಿದೆ.
ವಕೀಲೆ ನಿಕಿತಾ ಜೇಕಬ್​ ಮತ್ತು ಶಾಂತನು ಅವರ ವಿರುದ್ಧ ಜಾಮೀನು ರಹಿತ ವಾರಂಟ್​ ಹೊರಡಿಸಲಾಗಿದೆ. ಟೂಲ್​ಕಿಟ್​ ಹಿಂದೆ ‘ಪಾಯಿಂಟ್ ಫಾರ್ ಜಸ್ಟೀಸ್’ ಹೆಸರಿನ ಸಂಘಟನೆ ಇರುವುದು ಪತ್ತೆಯಾಗಿದೆ. ಈ ಸಂಘಟನೆಯು ಟೂಲ್​ಕಿಟ್​ ಬಿಡುಗಡೆಗೂ ಮೊದಲು ನಿಕಿತಾಳನ್ನು ಸಂಪರ್ಕಿಸಿತ್ತು ಎಂದು ಪೊಲೀಸರು ಆರೋಪಿಸಿದ್ದಾರೆ. ಸಂಘಟನೆಯ ಮುಖ್ಯಸ್ಥ ಎಂ.ಒ. ದಲಿವಾಲ್​, ನಿಕಿತಾ, ದಿಶಾ ರವಿ ಹಾಗೂ ಅನೇಕರು ಜೂಮ್​ ಕಾಲ್​ ಮೂಲಕ ಸಭೆ ನಡೆಸಿ, ಚರ್ಚಿಸಿದ್ದರು. ಅದೇ ವೇದಿಕೆಯಲ್ಲಿ ಸಂಪೂರ್ಣ ಯೋಜನೆಯನ್ನು ಸಿದ್ಧ ಮಾಡಲಾಗಿತ್ತು. ಹೇಗೆ ಮಾಡಿದರೆ ಪ್ರತಿಭಟನೆ ಇನ್ನಷ್ಟು ತೀವ್ರವಾಗುತ್ತದೆ? ಹೋರಾಟಗಾರರಿಗೆ ಯಾವ ರೀತಿಯಲ್ಲಿ ಸುಳ್ಳು ಮಾಹಿತಿಗಳನ್ನು ನೀಡಬಹುದು ಎನ್ನುವುದರ ಬಗ್ಗೆ ಸಾಕಷ್ಟು ಚರ್ಚೆ ನಡೆಸಲಾಗಿತ್ತು ಎಂದು ಪೊಲೀಸರು ಆರೋಪಿಸಿದ್ದಾರೆ.
ಗ್ರೆಟಾ ಈ ಟೂಲ್​ಕಿಟ್​ನ್ನು ಟ್ವೀಟ್​ ಮಾಡುತ್ತಿದ್ದಂತೆಯೇ ಈ ಸಂಘಟನೆ ದಿಕ್ಕು ತಪ್ಪಿಸುವ ಕೆಲಸ ಮಾಡಿದೆ. ಟೂಲ್​ಕಿಟ್​ ಬಿಡುಗಡೆಯಾದಾಕ್ಷಣವೇ ನಿಕಿತಾ ತನ್ನ ಟ್ವಿಟ್ಟರ್​ ಖಾತೆಯನ್ನು ಡಿಲೀಟ್​ ಮಾಡಿದ್ದಾಳೆ. ಇದೀಗ ಆಕೆ ನಾಪತ್ತೆಯಾಗಿರುವುದಾಗಿಯೂ ತಿಳಿಸಲಾಗಿದೆ. (ಏಜೆನ್ಸೀಸ್​)
ಗ್ರೇಟಾಳ ಟೂಲ್​ಕಿಟ್​ ಪ್ರಕರಣದಲ್ಲಿ ಕನ್ನಡತಿ ಕೈವಾಡ! ದೆಹಲಿ ಪೊಲೀಸರ ಅತಿಥಿಯಾದ ಹೋರಾಟಗಾರ್ತಿ

ಬಾಹ್ಯಾಕಾಶಕ್ಕೆ ಭಗವದ್ಗೀತೆ, ಮೋದಿ ಫೋಟೋ! ವಿಶೇಷತೆಯನ್ನೇ ಹೊತ್ತೊಯ್ಯಲಿದೆ ಈ ಉಪಗ್ರಹ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + eight =
Remember me
