ಬೆಂಗಳೂರು:ಇಂದಿನ ಪೀಳಿಗೆ ಸಂಪೂರ್ಣವಾಗಿ ಸಾಮಾಜಿಕ ಜಾಲತಾಣದ ಮೇಲೆ ಅವಲಂಬಿತರಾಗಿದ್ದು, ಅದರಲ್ಲೂ ಪ್ರತ್ಯೇಕವಾಗಿ ಯುವಜನತೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ನಮಗೆಲ್ಲಾ ತಿಳಿದಿರುವಂತೆ ಇಂದು ಬಹುತೇಕ ಕೆಲಸಗಳು ಆನ್​ಲೈನ್​ನಲ್ಲೇ ನಡೆಯುತ್ತಿರುವ ಕಾರಣ, ಕಾಲ ಕ್ರಮೇಣ ಎಲ್ಲರೂ ಅಂತರ್ಜಾಲವನ್ನು ಅಧಿಕ ಸಂಖ್ಯೆಯಲ್ಲಿ ಉಪಯೋಗಿಸುತ್ತಿದ್ದಾರೆ.
ಇದನ್ನೂ ಓದಿ:ಭಾರತ ತಂಡ ಗೆದ್ದರೂ ಜಂಟಿ ಚಾಂಪಿಯನ್​! ಸ್ಯಾಫ್​ ಮಹಿಳಾ ಫುಟ್​ಬಾಲ್ ಟೂರ್ನಿಯ ಫೈನಲ್​ನಲ್ಲಿ ವಿಚಿತ್ರ ತೀರ್ಪು!
ಮುಖ್ಯವಾಗಿ ಇಂದಿನ ಯುವಜನತೆ ತಮ್ಮ ಬಹುಪಾಲು ಸಮಯವನ್ನು ಸಾಮಾಜಿಕ ಜಾಲತಾಣವಾದ ವ್ಯಾಟ್ಸ್​​ಆ್ಯಪ್​, ಫೇಸ್​ಬುಕ್, ಟ್ವಿಟರ್, ಇನ್​ಸ್ಟಾಗ್ರಾಂ, ಸ್ನಾಪ್ ಚಾಟ್​ ಹೀಗೆ ಹಲವಾರು ಆ್ಯಪ್​ಗಳಲ್ಲಿ ಕಳೆಯುತ್ತಾರೆ. ಇದೆಲ್ಲದರ ಪೈಕಿ ಜನರು ಫೇಸ್​ಬುಕ್ ಮತ್ತು ಇನ್​ಸ್ಟಾಗ್ರಾಮ್​ನಲ್ಲಿ ತಮ್ಮ ಫೋಟೋ, ಕೆಲಸಗಳು ಸೇರಿದಂತೆ ಇತರೆ ವಿಷಯಗಳನ್ನು ಪೋಸ್ಟ್​ ಮಾಡಿಕೊಳ್ಳುತ್ತಾರೆ. ಈ ಮೂಲಕ ಇಂತಹ ಆ್ಯಪ್​ಗಳಲ್ಲಿ ಅಧಿಕ ಸಮಯವನ್ನು ವ್ಯಯಿಸುತ್ತಾರೆ.
ಈ ಎಲ್ಲಾ ಆ್ಯಪ್​ಗಳಿಗೂ ಮುನ್ನ ಬಂದ ಫೇಸ್​ಬುಕ್​ ಇಂದಿಗೂ ಕೂಡ ಅತೀ ಹೆಚ್ಚಿನ ಸಂಖ್ಯೆಯ ಬಳಕೆದಾರರನ್ನು ಹೊಂದಿದೆ. ಹಾಗಾದ್ರೆ, ಯಾವ ದೇಶದಲ್ಲಿ ಅಧಿಕವಾಗಿ ಫೇಸ್​ಬುಕ್​ನ​ ಬಳಸಲಾಗುತ್ತಿದೆ? ಯಾವ ರಾಷ್ಟ್ರ ಅಗ್ರಸ್ಥಾನದಲ್ಲಿದೆ? ಎಂಬುದರ ಮಾಹಿತಿಯನ್ನು “ಗ್ಲೋಬಲ್ ಇಂಡೆಕ್ಸ್”​ ಟಾಪ್ 15 ಪಟ್ಟಿ ಮೂಲಕ ಪ್ರಕಟಿಸಿದೆ.
ಇದನ್ನೂ ಓದಿ:VIDEO | ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಕರ ಕಿತ್ತಾಟ! ಚಪ್ಪಲಿ ಹಿಡಿದು ಬಡಿದಾಡಿಕೊಂಡ ಮಹಿಳೆಯರು
ಹೆಚ್ಚು ಬಳಕೆದಾರರನ್ನು ಹೊಂದಿರುವ ಟಾಪ್ 15 ದೇಶಗಳಿವು (2023):
1. ಭಾರತ – 314 ಮಿಲಿಯನ್2. ಯುನೈಟೆಡ್ ಸ್ಟೇಟ್ಸ್ – 175 ಮಿಲಿಯನ್3. ಇಂಡೋನೇಷ್ಯಾ – 120 ಮಿಲಿಯನ್4. ಬ್ರೆಜಿಲ್ – 109 ಮಿಲಿಯನ್5. ಮೆಕ್ಸಿಕೋ – 83.75 ಮಿಲಿಯನ್6. ಫಿಲಿಪೈನ್ಸ್ – 80.3 ಮಿಲಿಯನ್7. ವಿಯೆಟ್ನಾಂ – 66.2 ಮಿಲಿಯನ್8. ಥೈಲ್ಯಾಂಡ್ – 48.1 ಮಿಲಿಯನ್9. ಬಾಂಗ್ಲಾದೇಶ – 43.25 ಮಿಲಿಯನ್10. ಈಜಿಪ್ಟ್ – 42 ಮಿಲಿಯನ್
11. ಪಾಕಿಸ್ತಾನ – 37.3 ಮಿಲಿಯನ್12. ಯುನೈಟೆಡ್ ಕಿಂಗ್‌ಡಮ್ – 34.4 ಮಿಲಿಯನ್13. ಕೊಲಂಬಿಯಾ – 33.5 ಮಿಲಿಯನ್14. ಟರ್ಕಿ – 32.8 ಮಿಲಿಯನ್15. ಫ್ರಾನ್ಸ್ – 30.4 ಮಿಲಿಯನ್
VIDEO | ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಕರ ಕಿತ್ತಾಟ! ಚಪ್ಪಲಿ ಹಿಡಿದು ಬಡಿದಾಡಿಕೊಂಡ ಮಹಿಳೆಯರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 17 =
Remember me
