ನವದೆಹಲಿ:ಭಾರತಕ್ಕೆ ಬೇಕಾಗಿದ್ದ ಮೋಸ್ಟ್​ ವಾಂಟೆಡ್​ ಉಗ್ರನೊಬ್ಬನನ್ನು ಅಪರಿಚಿತ ಬಂದೂಕುಧಾರಿಗಳು ಮಸೀದಿಯೊಳಗೆ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಾಕ್​ ಆಕ್ರಮಿತ ಕಾಶ್ಮೀರದ ರಾವಲ್​ಕೋಟ್​ನಲ್ಲಿ ನಡೆದಿದೆ.
ಮೃತನನ್ನು ಲಷ್ಕರ್​-ಇ-ತೊಯ್ಬಾ (LET) ಸಂಘಟನೆಯ ಉನ್ನತ ಕಮಾಂಡರ್​ ರಿಯಾಜ್​ ಅಹ್ಮದ್​ ಅಲಿಯಾಸ್​ ಅಬು ಖಾಸಿಂ ಎಂದು ಗುರುತಿಸಲಾಗಿದೆ. ಈತನನ್ನು ರಾವಲ್​​ಕೋಟ್​ನಲ್ಲಿರುವ ಖುದ್ದೂಸ್​ ಮಸೀದಿಯೊಳಗೆ ಬೆಳಗ್ಗೆ ಪ್ರಾರ್ಥನೆ ಸಲ್ಲಿಸಲು ತೆರಳಿದಾಗ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
Top Lashkar-e-Taiba (LeT) commander & terrorist Rayaz Ahmed shot dead by unidentified gunmen in Al Quddus Masjid in Rawalakot, Pakistan-Occupied-KashmirRayaz fled from India in 1999 and was handling Lashkar's operations and recruiting in POK. He was managing the Kotli terror…pic.twitter.com/pb9EDSPF8W
ಇದನ್ನೂ ಓದಿ:ಮೊರಾಕ್ಕೋದಲ್ಲಿ ಭೂಕಂಪ; ಸಾವಿನ ಸಂಖ್ಯೆ 820ಕ್ಕೆ ಏರಿಕೆ
ಜಮ್ಮು-ಕಾಶ್ಮೀರದ ಪೂಂಚ್​​​ ಜಿಲ್ಲೆಯ ನಿವಾಸಿಯಾದ ಉಗ್ರ ಅಹ್ಮದ್​ನನ್ನು 1999ರಲ್ಲಿ ಭಾರತದಿಂದ ಗಡಿಯಾಚೆ ನುಸುಳಿ ಉಗ್ರ ಸಂಘಟನೆ ಸೇರಿಕೊಂಡಿದ್ದ. ಜನವರಿ 1ರಂದು ಜಮ್ಮು-ಕಾಶ್ಮೀರದ ಧಾಂಗ್ರಿಯಲ್ಲಿ ನಡೆದ ಉಗ್ರ ದಾಳಿ ಹಿಂದಿನ ಮಾಸ್ಟರ್​ಮೈಂಡ್​ಗಳಲ್ಲಿ ಈತ ಒಬ್ಬನಾಗಿದ್ದ. ಅವಳಿ ಗಡಿ ಜಿಲ್ಲೆಗಳಾದ ಪೂಂಚ್​ ಮತ್ತು ರಜೌರಿಯಲ್ಲಿನ ಭಯೋತ್ಪಾದಕ ಕೃತ್ಯಗಳಿಗೆ ಈತ ಮಾಸ್ಟರ್​ ಮೈಂಡ್​ ಆಗಿದ್ದ ಎಂದು ಹೇಳಲಾಗಿತ್ತು.
ಅಹ್ಮದ್ ಹೆಚ್ಚಾಗಿ ಮುರಿಡ್ಕೆಯಲ್ಲಿರುವ ಲಷ್ಕರ್-ಎ-ತೈಬಾ ಬೇಸ್ ಕ್ಯಾಂಪ್​ನಿಂದ ಕಾರ್ಯನಿರ್ವಹಿಸುತ್ತಿದ್ದನು. ಆದರೆ ಇತ್ತೀಚೆಗೆ ರಾವಲಕೋಟ್​ಗೆ ಸ್ಥಳಾಂತರಗೊಂಡಿದ್ದನು. ಈತ ಲಷ್ಕರ್-ಎ-ತೊಯ್ಬಾದ ಮುಖ್ಯ ಕಮಾಂಡರ್ ಸಜ್ಜಾದ್ ಜಾತ್​ನ ನಿಕಟವರ್ತಿಯಾಗಿದ್ದು, ಸಂಘಟನೆಯ ಹಣಕಾಸು ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − 6 =
Remember me
