ನವದೆಹಲಿ:ಭಾರತದಲ್ಲಿ ಕರೊನಾ ಅಟ್ಟಹಾಸ ಹೆಚ್ಚಾಗುತ್ತಿದೆ ಯಾದರೂ ಗುಣಮುಖರ ಪ್ರಮಾಣವೂ ಗಣನೀಯವಾಗಿ ಏರಿಕೆಯಾಗುತ್ತಿರುವುದರಿಂದ ಪರಿಸ್ಥಿತಿ ಹತೋಟಿಯಲ್ಲಿದೆ. ದೇಶದಲ್ಲಿನ ಸೋಂಕಿತರ ಪ್ರಮಾಣ 17 ಲಕ್ಷ ದಾಟಿದ್ದು, ಅದರಲ್ಲಿ ಈಗಾಗಲೇ 11 ಲಕ್ಷಕ್ಕೂ ಅಧಿಕ ರೋಗಿಗಳು ಗುಣಮುಖರಾಗಿದ್ದಾರೆ. ಶನಿವಾರ 51 ಸಾವಿರಕ್ಕೂ ಅಧಿಕ ರೋಗಿಗಳು ಗುಣಮುಖರಾಗಿದ್ದು, ಇದು ಈವರೆಗಿನ ಒಂದೇ ದಿನದ ಗರಿಷ್ಠ ಪ್ರಮಾಣವಾಗಿದೆ. ಸುಮಾರು 10 ದಿನಗಳಿಂದಲೂ ಪ್ರತಿದಿನ 30 ಸಾವಿರಕ್ಕೂ ಅಧಿಕ ರೋಗಿಗಳು ಗುಣಮುಖ ರಾಗುತ್ತಿದ್ದಾರೆ.

ಶನಿವಾರ ಹೊಸದಾಗಿ 55 ಸಾವಿರ ಪ್ರಕರಣಗಳು ಬೆಳಕಿಗೆ ಬಂದಿದ್ದು, 854 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಸದ್ಯ 5.74 ಲಕ್ಷ ಅಂದರೆ ಒಟ್ಟು ಸೋಂಕು ಪ್ರಕರಣಗಳ ಶೇಕಡ 32.43ರಷ್ಟು ಸಕ್ರಿಯ ಪ್ರಕರಣಗಳಿವೆ. ಸೋಂಕಿತರ ಮರಣ ಪ್ರಮಾಣ ಶೇಕಡ 2.13ಕ್ಕೆ ಇಳಿಕೆಯಾಗಿದ್ದು, ಜಾಗತಿಕ ವಾಗಿ ಹೋಲಿಸಿದರೆ ಇದು ಅತ್ಯಂತ ಕಡಿಮೆಯಾಗಿದೆ. ಕಳೆದ 24 ತಾಸಿನಲ್ಲಿ 19 ಸಾವಿರಕ್ಕೂ ಅಧಿಕ ಹೊಸ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಪ್ರಮಾಣ 17.71 ಲಕ್ಷಕ್ಕೆ ಏರಿಕೆಯಾಗಿದೆ. ಹೊಸದಾಗಿ 218 ಮಂದಿ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 37,600ಕ್ಕಿಂದ ಅಧಿಕವಾಗಿದೆ. ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಕರೊನಾ ತೀವ್ರವಾಗಿದ್ದು, ಅಲ್ಲಿ ಪ್ರತಿದಿನ ಸರಾಸರಿ 10 ಸಾವಿರ ಹೊಸ ಪ್ರಕರಣಗಳು ವರದಿಯಾಗುತ್ತವೆ. ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಸರಾಸರಿ ತಲಾ 5 ಸಾವಿರ ಪ್ರಕರಣಗಳು ವರದಿಯಾಗುತ್ತಿವೆ.
ಜಗತ್ತಿನ ಮೊದಲ ಕರೊನಾ ಲಸಿಕೆ ರಷ್ಯಾದಲ್ಲಿ ಸಿದ್ಧ; ಅಕ್ಟೋಬರ್​ನಲ್ಲಿ ಎಲ್ಲರಿಗೂ ಲಭ್ಯ; ಸ್ಪುಟ್ನಿಕ್​ ಯಶಸ್ಸಿಗೆ ಹೋಲಿಕೆ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:eighteen − 11 =
Remember me
