ನವದೆಹಲಿ:ಹಿರಿಯ ಕಾಂಗ್ರೆಸ್​ ನಾಯಕ ಶಶಿ ತರೂರ್​ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.ಮಾ.9ರಂದು ಜನ್ಮದಿನ ಆಚರಿಸಿಕೊಂಡ ಶಶಿ ತರೂರ್(64)​ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಟ್ವೀಟ್ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ. ಅಲ್ಲದೆ, ನಿಮ್ಮ ಚಿಂತನಾಶೀಲತೆ ನನ್ನ ಹೃದಯವನ್ನು ಸ್ಪರ್ಶಿಸಿದೆ ಎಂದು ಹೇಳಿದ್ದಾರೆ.
ಶಶಿ ತರೂರ್​ ಅವರು ಈ ಹಿಂದೆ ನರೇಂದ್ರ ಮೋದಿಯವರನ್ನು ಟೀಕಿಸಿದ್ದೂ ಉಂಟು. ಹಾಗೇ ಕೆಲವೊಮ್ಮೆ ಮೋದಿಯವರ ಪರ ವಹಿಸಿಕೊಂಡು ಮಾತನಾಡಿದ್ದೂ ಇದೆ. ಆದರೆ ತಮ್ಮ ಜನ್ಮದಿನದಂದೇ ಅವರನ್ನು ಮನತುಂಬಿ ಹೊಗಳಿದ್ದಕ್ಕೆ ಖಂಡಿತ ಕಾರಣವಿದೆ.
ಶಶಿ ತರೂರ್​ ಕೇರಳದವರು. ಅವರ ಮಾತೃಭಾಷೆ ಮಲೆಯಾಳಂ. ಪ್ರಧಾನಿ ನರೇಂದ್ರ ಮೋದಿಯವರು ಮಲೆಯಾಳಂನಲ್ಲೇ ತಮಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಕ್ಕೆ ತರೂರ್​ ಫುಲ್ ಖುಷಿಯಾಗಿದ್ದಾರೆ. ಮೋದಿಯವರು ತಮಗೆ ಕಳುಹಿಸಿದ ಗ್ರೀಟಿಂಗ್ ಕಾರ್ಡ್​ನ್ನು ಟ್ವಿಟರ್​ನಲ್ಲಿ ಪೋಸ್ಟ್ ಮಾಡಿರುವ ತರೂರ್​, ನರೇಂದ್ರ ಮೋದಿಯವರೇ, ಮಲೆಯಾಳಂನ ಶುದ್ಧ ಸಾಹಿತ್ಯದಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಕ್ಕೆ ನಿಮಗೆ ಧನ್ಯವಾದಗಳು. ನೀವು ನನಗೆ ಹಾರೈಸಿದ ರೀತಿ ನನ್ನ ಹೃದಯ, ಮನಸನ್ನು ಸ್ಪರ್ಶಿಸಿತು ಎಂದು ಹೇಳಿದ್ದಾರೆ.
ಮಲೆಯಾಳಂನಲ್ಲಿ ಇರುವ ಮೋದಿಯವರ ಶುಭಾಶಯವನ್ನು ಶಶಿ ತರೂರ್​ ಅವರೇ ಇಂಗ್ಲಿಷ್​ಗೆ ಅನುವಾದಿಸಿದ್ದಾರೆ. ಅದರ ಸಾರಾಂಶ ಹೀಗಿದೆ.: ‘ನಿಮ್ಮ ಜನ್ಮದಿನಕ್ಕೆ ನನ್ನ ಹಾರ್ದಿಕ ಶುಭಾಶಯಗಳು. ನಿಮ್ಮ ಮುಂದಿನ ಜೀವನದಲ್ಲಿ ಸಂತೋಷ, ಸಮೃದ್ಧಿ ತುಂಬಿರಲಿ. ಶಾಂತಿ, ಸಮಾಧಾನ, ಅದೃಷ್ಟಗಳೆಲ್ಲ ನಿಮ್ಮದಾಗಲಿ. ನಿಮ್ಮ ಸುದೀರ್ಘ ಕಾಲದ ಸಾರ್ವಜನಿಕ ಜೀವನದ ಅನುಭವ, ಪ್ರತಿಭೆಗಳು ಈ ರಾಷ್ಟ್ರನಿರ್ಮಾಣಕ್ಕೆ ವಿನಿಯೋಗವಾಗಲಿ ಎಂಬುದು ನನ್ನ ಪ್ರಾಮಾಣಿಕ ಹಾರೈಕೆ. ಮೋದಿಯವರಿಂದ ಶಶಿ ತರೂರ್​ಗೆ ಕಳಿಸಲ್ಪಟ್ಟ ಮಲೆಯಾಳಂ ಸಾಹಿತ್ಯದ ಶುಭಾಶಯಕ್ಕೆ ನೆಟ್ಟಿಗರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹಾಗೇ ಶಶಿ ತರೂರ್​ ಅವರು ತಮ್ಮ ತಾಯಿಯೊಂದಿಗೆ ಬರ್ತ್​ ಡೇ ಔತಣಕೂಟದಲ್ಲಿ ಪಾಲ್ಗೊಂಡ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್​)
Thank you ⁦@narendramodi⁩ & ⁦@PMOIndia⁩ for this elaborate birthday greeting in shudh sahitya Malayalam! Am touched by your thoughtfulness.pic.twitter.com/UJX7D0092L— Shashi Tharoor (@ShashiTharoor)March 9, 2020
Thank you ⁦@narendramodi⁩ & ⁦@PMOIndia⁩ for this elaborate birthday greeting in shudh sahitya Malayalam! Am touched by your thoughtfulness.pic.twitter.com/UJX7D0092L
Birthday dinner at the marvellous#HouseOfCelesteat 32nd Avenue in Gurgaon. With the extraordinary Michelin-star Master Chef ⁦@suvirsaran⁩ & Chef de Cuisine Vardaan exercising their culinary charms on my mother! There can’t be a better dining experience in the NCR.pic.twitter.com/Vwnno0Z0Z2— Shashi Tharoor (@ShashiTharoor)March 9, 2020
Birthday dinner at the marvellous#HouseOfCelesteat 32nd Avenue in Gurgaon. With the extraordinary Michelin-star Master Chef ⁦@suvirsaran⁩ & Chef de Cuisine Vardaan exercising their culinary charms on my mother! There can’t be a better dining experience in the NCR.pic.twitter.com/Vwnno0Z0Z2

ರಾಣಾ ಕಪೂರ್, ಮಗಳು ರಾಖಿ ಮಾತ್ರವಲ್ಲ ಇನ್ನೂ ಬೇರೆ ಕುಟುಂಬ, ಸಂಸ್ಥೆಗಳು ಯೆಸ್​ ಬ್ಯಾಂಕ್​ ವಂಚನೆಯಲ್ಲಿ ಭಾಗಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 16 =
Remember me
