ರಾಜಸ್ಥಾನ:ರಾಜಸ್ಥಾನದ ನಗೌರ್ ಜಿಲ್ಲೆಯಲ್ಲಿ ಪ್ರಬಲವಾದ ಚಂಡಮಾರುತದಿಂದಾಗಿ ಮೊಬೈಲ್ ಟವರ್ ಕುಸಿದು ಬಿದ್ದಿದ್ದು ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
16 ಸೆಕೆಂಡ್‌ಗಳ ವಿಡಿಯೋ ಕ್ಲಿಪ್ ಮೊಬೈಲ್ ಟವರ್ ಎತ್ತರವಾಗಿ ನಿಂತಿರುವುದನ್ನು ತೋರಿಸುತ್ತಿದ್ದು, ಪ್ರಬಲವಾದ ಚಂಡಮಾರುತದ ರಭಸಕ್ಕೆ ಮೊಬೈಲ್‌ ಟವರ್ ಬೀಳುತ್ತದೆ. ಜಿಲ್ಲೆಯಲ್ಲಿ ಭೀಕರ ಬಿರುಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿತ್ತು.
Mobile Tower fell down in Nagaur (Rajasthan) due to damaging windspic.twitter.com/gAHUBTeE8Z
— Weatherman Shubham (@shubhamtorres09)May 28, 2023

ಈ ಕುರಿತಾಗಿ ನಾನಾ ರೀತಿಯ ಕಾಮೆಂಟ್​ಗಳನ್ನು ಜನರು ಬರೆದಿದ್ದಾರೆ.ಒಬ್ಬರು ಈ ಘಟನೆಗೆ ಕಾರಣ ಏನು ಎಂದು ಊಹಿಸಲು ಪ್ರಯತ್ನಿಸಿದ್ದು “ಇದು ಸುಳಿಗಾಳಿಯಿಂದಾಗಿ ಉಂಟಾದ ಕಂಪನಗಳಿಂದಾಗಿ ನಡೆದಿದೆ. ಗಾಳಿಯ ವೇಗವು ಗೋಪುರವು ಅದರ ನೈಸರ್ಗಿಕ ಫ್ರೀಕ್ವೆನ್ಸಿಯಲ್ಲಿ ಕಂಪಿಸುವಂತೆ ಮಾಡಿದೆ. ಇದರಿಂದಾಗಿ ಟವರ್ ಅಲುಗಾಡಲು ಪ್ರಾರಂಭಿಸಿದ್ದು ಬೀಳುವವರೆಗೂ ಅದೇ ಫ್ರೀಕ್ವೆನ್ಸಿಯಲ್ಲಿ ಅದುರಿದೆ” ಎಂದು ಬರೆದಿದ್ದಾರೆ.
ಇನ್ನೊಬ್ಬರು “ಟವರ್ ಕಂಪನಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಬರೆದಿದ್ದಾರೆ.
ಮತ್ತೊಬ್ಬರು “ಟವರ್​, ತನ್ನ ಕಳಪೆ ಡಿಸೈನ್​ ಹಾಗೂ ನಿರ್ಮಾಣದ ಕ್ವಾಲಿಟಿಯಿಂದಾಗಿ ಬಿದ್ದಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × five =
Remember me
