ಪಲಕ್ಕಾಡ್​:ಕರೋಕೆ ಮೈಕ್​ ಅನ್ನು ಚಾರ್ಜ್​ಗೆ ಹಾಕಿ ಹಾಡುವ ವೇಳೆ ಅದು ಸ್ಫೋಟಗೊಂಡಿರುವ ಘಟನೆ ಕೇರಳದ ಪಲಕ್ಕಾಡ್​ ಜಿಲ್ಲೆಯ ಕಲ್ಲಡಿಕೋಡ್​ನಲ್ಲಿ ನಡೆದಿದೆ. ಅದೃಷ್ಟವಶಾತ್​ 6 ವರ್ಷದ ಬಾಲಕಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಬಚಾವ್​ ಆದ ಬಾಲಕಿಯ ಹೆಸರು ಫಿನ್ಸಾ ಇರೇನ್​. ಈ ಘಟನೆ ಕಳೆದ ಭಾನುವಾರ ನಡೆದಿದೆ. ಭಾರೀ ಶಬ್ದದೊಂದಿಗೆ ಮೈಕ್​ ಸ್ಫೋಟಗೊಂಡಿದೆ. ಆದರೆ, ಬಾಲಕಿಗೆ ಏನೂ ಆಗಿಲ್ಲ. ಕರೋಕೆ ಮೈಕ್​ ಅನ್ನು ಆನ್​ಲೈನ್​ ಸೈಟ್​ ಒಂದರಲ್ಲಿ ಕೇವಲ 600 ರೂಪಾಯಿಗೆ ಖರೀದಿ ಮಾಡಲಾಗಿತ್ತು.
ಇದನ್ನೂ ಓದಿ:ಸೂರ್ಯಕಾಂತಿಯ ಪ್ರೇಮ ಗೀತೆ; ಟಗರು ಪಲ್ಯ ಚಿತ್ರದ ಎರಡನೇ ಹಾಡು ರಿಲೀಸ್
ಮೈಕ್​ ಅನ್ನು ಚಾರ್ಜ್​ಗೆ ಹಾಕಿ, ಬಾಲಕಿ ಹಾಡು ಹೇಳುವಾಗ ಇದ್ದಕ್ಕಿದ್ದಂತ ಭಾರೀ ಶಬ್ಧದೊಂದಿಗೆ ಸ್ಫೋಟಗೊಂಡಿದೆ. ಅದು ಚೀನಾ ನಿರ್ಮಿತ ಮೈಕ್​ ಎಂದು ಪಾಲಕರು ತಿಳಿಸಿದ್ದಾರೆ. ಆದರೆ ಮೈಕ್‌ನಲ್ಲಿ ಕಂಪನಿಯ ಹೆಸರು ಸ್ಪಷ್ಟವಾಗಿಲ್ಲದ ಕಾರಣ, ಕಂಪನಿಯ ವಿರುದ್ಧ ಯಾವುದೇ ದೂರು ನೀಡಲು ಕುಟುಂಬಕ್ಕೆ ಸಾಧ್ಯವಾಗುತ್ತಿಲ್ಲ.
ಯಾವುದೇ ಸಾಧನಗಳನ್ನು ಚಾರ್ಜ್​ಗೆ ಹಾಕಿ ಬಳಸುವ ಅಭ್ಯಾಸವನ್ನು ಮೊದಲು ಬಿಡಬೇಕು. ಸಣ್ಣ ನಿರ್ಲಕ್ಷ್ಯ ಕೆಲವೊಮ್ಮೆ ಪ್ರಾಣಕ್ಕೆ ಕುತ್ತು ತರಬಹುದು. ಸದ್ಯಕ್ಕೆ ಈ ಪ್ರಕರಣದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸದೇ ಇರುವುದು ಅದೃಷ್ಟ ಎಂದೇ ಹೇಳಬಹುದು. ಮಕ್ಕಳ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕು ಎಂಬುದಕ್ಕೆ ಈ ಘಟನೆ ಒಂದು ಎಚ್ಚರಿಕೆ ಗಂಟೆಯಾಗಿದೆ.(ಏಜೆನ್ಸೀಸ್​)
ಏಷ್ಯಾಕಪ್​ನಿಂದ ಪಾಕ್​ ಹೊರಬಿದ್ದ ಬೆನ್ನಲ್ಲೇ ಭಾರತಕ್ಕೆ ಭರ್ಜರಿ ಲಾಭ! ಏಕದಿನ ರ್ಯಾಂಕಿಂಗ್​ನಲ್ಲಿ ಬಡ್ತಿ…

ವಿರಾಟ್​ ವಿಚಿತ್ರ ಓಟ: ಕೊಹ್ಲಿ ಕಾಮಿಡಿಗೆ ನಗೆಗಡಲಲ್ಲಿ ತೇಲಿದ ಕ್ರೀಡಾಭಿಮಾನಿಗಳು, ವಿಡಿಯೋ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
