ತೆಲಂಗಾಣ:ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿ ಸರ್ಕಾರ ರಚನೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭಿಮಾನಿಯೊಬ್ಬರು ತಮ್ಮ ಕೋಳಿ ಅಂಗಡಿಯಲ್ಲಿ ರಿಯಾಯಿತಿ ದರದಲ್ಲಿ ಕೋಳಿ ಮಾರುತ್ತಿರುವ ಘಟನೆ ಜಿಲ್ಲೆಯ ಕರಾಯಗುಡೆಂ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಖಮ್ಮಂ ಜಿಲ್ಲೆಯ ಪೆನುಬಳ್ಳಿ ಮಂಡಲದ ಕೋಳಿ ವ್ಯಾಪಾರಿ ನರಕುಲ್ಲಾ ರಾಘವರಾವ್, ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು ವಿಜಯೋತ್ಸವ ಆಚರಿಸುತ್ತಿರುವಾಗಲೇ ರಿಯಾಯಿತಿ ದರದಲ್ಲಿ ಕೋಳಿ ಮಾಂಸ ಮಾರಾಟ ಮಾಡುತ್ತಿದ್ದಾರೆ. ಮಂಗಳವಾರ ಹಾಗೂ ಬುಧವಾರ ಕೆ.ಜಿ.ಗೆ 120 ರೂ.ನಂತೆ ಕೋಳಿ ಮಾರಿದ್ದರು.
ಗ್ರಾಮದಲ್ಲಿ ಸುಮಾರು 300 ಕುಟುಂಬಗಳಿದ್ದವು. ಇತರ ಅಂಗಡಿಗಳಲ್ಲಿ ಕೆಜಿಗೆ 150 ರಿಂದ 160 ರೂ.ಗೆ ಮಾರಾಟವಾಗುತ್ತಿದ್ದ ಕೋಳಿಯನ್ನು ವ್ಯಾಪಾರಿ ರಿಯಾಯ್ತಿ ದರದಲ್ಲಿ ಮಾರಿದ್ದಾನೆ. ಖರೀದಿಸಲು ಗ್ರಾಮ ಮತ್ತು ಅಕ್ಕಪಕ್ಕದ ನಿವಾಸಿಗಳು ಅವರ ಅಂಗಡಿಗೆ ಧಾವಿಸಿದರು. ದಿನಕ್ಕೆ ಸರಾಸರಿ ನಾಲ್ಕು ಕ್ವಿಂಟಾಲ್ ಕೋಳಿ ಮಾರಿದ್ದಾರೆ.

ಕೋಳಿ ಅಂಗಡಿ ವ್ಯಾಪಾರಿ  ರಾಘವರಾವ್ ಮಾತನಾಡಿ, ನಾನು ಕಾಂಗ್ರೆಸ್ ಅಭಿಮಾನಿಯಾಗಿದ್ದು, ಪಾಲೇರು, ಖಮ್ಮಂ, ಸತ್ತುಪಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಾದ ಪೊಂಗುಲೇಟಿ ಶ್ರೀನಿವಾಸರೆಡ್ಡಿ, ತುಮ್ಮಲ ನಾಗೇಶ್ವರರಾವ್, ಮಟ್ಟಾ ರಾಗಮೈಲಾ ಅವರ ಗೆಲುವನ್ನು ವಿಭಿನ್ನವಾಗಿ ಆಚರಿಸ ಬೇಕು ಎಂದು ತೀರ್ಮಾನ ಮಾಡಿದೆ. ಮಂಗಳವಾರ ಮತ್ತು ಬುಧವಾರದಂದು ಒಂದು ಕಿಲೋ ಕೋಳಿಯನ್ನು 120 ರೂ.ಗಳ ರಿಯಾಯಿತಿ ದರದಲ್ಲಿ ಮಾರಾಟ ಮಾಡಿದ್ದೇನೆ ಎಂದಿದ್ದಾರೆ.

ಕಡಿಮೆ ಬೆಲೆಗೆ ಕೋಳಿ ಮಾರಾಟ ವಾಗುತ್ತಿದ್ದರಿಂದ ಇದರಿಂದ ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ನಿವಾಸಿಗಳು ಕೋಳಿ ಖರೀದಿಸಲು ಇವರ ಅಂಗಡಿಗೆ ಮುಗಿಬಿದ್ದರು. ಕಾಂಗ್ರೆಸ್ ಗೆಲುವಿನ ಸಂದರ್ಭದಲ್ಲಿ ಕಾಂಗ್ರೆಸ್ ಅಭಿಮಾನಿಯೊಬ್ಬರು ರಿಯಾಯಿತಿ ದರದಲ್ಲಿ ಕೋಳಿ ಮಾರಿದ ಘಟನೆ ಚರ್ಚೆಗೆ ಗ್ರಾಸವಾಯಿತು.
ಇಲ್ಲಿ ತಂದೆಯೇ ತನ್ನ ಮಗಳ ಗಂಡ; ಎಲ್ಲಿದೆ ಗೊತ್ತಾ? ಈ ವಿಚಿತ್ರ ಆಚರಣೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 6 =
Remember me
