ಮುಂಬೈ:ಮುಕೇಶ್ ಅಂಬಾನಿ ಹಾಗೂ ನೀತಾ ಅವರ ಕಿರಿಯ ಮಗ ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ವಿವಾಹ ಇದೇ ಜುಲೈ 12ನೇ ತಾರೀಕು ನಡೆಯಲಿದೆ. ಅದರ ನಂತರ ಕೂಡ ಹಲವು ದಿನ ವಿವಾಹ ಸಮಾರಂಭಕ್ಕೆ ಸಂಬಂಧಿಸಿದ ಇತರ ಕಾರ್ಯಕ್ರಮಗಳು ನಡೆಯಲಿವೆ. ವಿವಾಹಕ್ಕೆ ಮುಂಚಿತವಾಗಿಯೂ ಹಲವು ಕಾರ್ಯಕ್ರಮಗಳು ನಡೆಯಲಿವೆ.
ಅದರ ಆರಂಭವು ಸಾಮೂಹಿಕ ವಿವಾಹ ಕಾರ್ಯಕ್ರಮದೊಂದಿಗೆ ಶುರುವಾಗಿದ್ದರೆ, ಗುಜರಾತಿ ಕುಟುಂಬಗಳು ಅನುಸರಿಸುವ ಸಂಪ್ರದಾಯದಂತೆ, ಮದುವೆಗೆ ಕೆಲ ದಿನಗಳು ಬಾಕಿ ಇರುವಾಗ ‘ಮೊಸಲು’ ಎಂದು ಆಚರಿಸಲಾಗುತ್ತದೆ. ಮದುವೆ ಗಂಡಿನ ತಾಯಿ ಕುಟುಂಬದವರು, ಅಂದರೆ ನೀತಾ ಅಂಬಾನಿಯವರ ಕುಟುಂಬದವರು, ಅದರಲ್ಲಿ ನೀತಾ ಅವರ ತಾಯಿ ಪೂರ್ಣಿಮಾ ದಲಾಲ್ ಹಾಗೂ ನೀತಾ ಅವರ ಸೋದರಿ ಮಮತಾ ದಲಾಲ್ ಅವರು ಅಂಬಾನಿಗಳ ಮನೆಗೆ ಬಂದು, ವಧು- ವರರನ್ನು ಆಶೀರ್ವದಿಸಿದರು. ಇದರ ಜತೆಗೆ ಕೆಲವು ಉಡುಗೊರೆಗಳನ್ನು ಸಹ ನೀಡಿದರು.
ಇದನ್ನೂ ಓದಿ:ಮದುವೆಯಾಗದೆ ನಿರಾಕರಿಸಿದ ಪ್ರಿಯಕರನ ಜನನಾಂಗ ಕಟ್​ ಮಾಡಿದ ವೈದ್ಯೆ; ಆಘಾತಕಾರಿ ವಿಡಿಯೋ ವೈರಲ್​
ಅನಂತ್ ಅಂಬಾನಿ ಅವರ ಸೋದರ ಮಾವಂದಿರು ಹಾಗೂ ಅವರ ಕುಟುಂಬದವರು ಈ ಸಂದರ್ಭದಲ್ಲಿ ಬಂದು, ವಧು- ವರರಿಗೆ ಸಾಂಪ್ರದಾಯಿಕ ಉಡುಗೊರೆಗನ್ನು ನೀಡುತ್ತಾರೆ. ಇದನ್ನು “ಮಮೇರು” ಎಂದು ಕರೆಯಲಾಗುತ್ತದೆ. ಈ ಮೊಸಲು ಹಾಗೂ ಮಮೇರು ಇವೆರಡು ಸಹ ಸಂಪ್ರದಾಯವನ್ನು ಪ್ರತಿನಿಧಿಸುತ್ತವೆ. ಇದು ಮದುವೆ ಸಂದರ್ಭದಲ್ಲಿ ಗೌರವ ನೀಡುವುದನ್ನು ಹಾಗೂ ದೊಡ್ಡ ಕುಟುಂಬಗಳು ಭಾಗೀ ಆಗುವುದನ್ನು ಪ್ರತಿಬಿಂಬಿಸುತ್ತದೆ. ಇನ್ನು ಈ ಕಾರ್ಯಕ್ರಮದ ಸಂದೇಶ ಏನೆಂದರೆ, ವಧು- ವರರ ತಂದೆ- ತಾಯಿ ಹಾಗೂ ಹತ್ತಿರದ ಕುಟುಂಬ ಸದಸ್ಯರಷ್ಟೇ ಅಲ್ಲದೆ, ಅದರ ಹೊರಗಿನ ಸಂಬಂಧಿಗಳು ಸಹ ಈ ವಿವಾಹ ಕಾರ್ಯಕ್ರಮದಲ್ಲಿ ಒಳಗೊಳ್ಳಬೇಕು ಎಂಬುದಾಗಿದೆ.
ಮೊಸಲು ಕಾರ್ಯಕ್ರಮದಲ್ಲಿ ಅನಂತ್ ಅಂಬಾನಿ ಅವರ ತಾಯಿ ನೀತಾ ಕುಟುಂಬದ ಸದಸ್ಯರು ಬಹಳ ದೊಡ್ಡ ಸಂಖ್ಯೆಯಲ್ಲಿ ಭಾಗೀ ಆಗಿದ್ದರು. ಮನೆಯ ಯಾವುದೇ ಸಮಾರಂಭಗಳಲ್ಲಿ ಸಾಂಪ್ರದಾಯಿಕ ಆಚರಣೆ ಹಾಗೂ ದೇವತಾ ಆರಾಧನೆ, ದಾನ- ಧರ್ಮ, ಅನ್ನ ಸಂತರ್ಪಣೆಗೆ ಒತ್ತು ನೀಡುವಂಥ ಸಂಪ್ರದಾಯಬದ್ಧ ಗುಜರಾತಿ ಕುಟುಂಬ ಅಂಬಾನಿಗಳದು. ಈಗಾಗಲೇ ಮಗಳು ಹಾಗೂ ಮಗ ಇಬ್ಬರದೂ ಮದುವೆ ಆಗಿದ್ದು, ಕಿರಿ ಮಗ ಅನಂತ್ ಅಂಬಾನಿಯ ವಿವಾಹ ಈಗ ನಡೆಯುತ್ತಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:thirteen − one =
Remember me
