ಹೈದರಾಬಾದ್​​:ನಡುರಸ್ತೆಯಲ್ಲಿಯೇ ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಗೆ ತಕ್ಷಣವೇ ಸಿಪಿಆರ್‌ ನೀಡುವ ಮೂಲಕ ಟ್ರಾಫಿಕ್‌ ಪೊಲೀಸ್‌ ಒಬ್ಬರು ವ್ಯಕ್ತಿಯ ಜೀವವನ್ನು ಉಳಿಸಿದ ಘಟನೆ ತೆಲಂಗಾಣದಲ್ಲಿ ನಡೆಯಲಿದೆ.
ಇಂದು ಬೆಳಗ್ಗೆ ಎಲ್‌ಬಿ ನಗರದ ನಿವಾಸಿಯಾಗಿರುವ ಬಾಲರಾಜು, ರಾಜೇಂದ್ರ ನಗರ ಸರ್ಕಲ್‌ ಪ್ರದೇಶದಲ್ಲಿ ಹೃದಯಾಘಾತದಿಂದಾಗಿ ಕುಸಿದು ಬಿದ್ದಿದ್ದರು. ಇದನ್ನು ಗಮನಿಸಿದ ಸೈಬರಾಬಾದ್‌ನ ರಾಜೇಂದ್ರನಗರ ಟ್ರಾಫಿಕ್‌ ಪೊಲೀಸ್‌ ಠಾಣೆಯ ಕಾನ್ಸ್‌ಟೇಬಲ್‌ ರಾಜಶೇಖರ್‌, ತಕ್ಷಣವೇ ಅವರು ಕುಸಿದು ಬಿದ್ದ ಪ್ರದೇಶಕ್ಕೆ ಓಡಿ ಬಂದಿದ್ದರು. ಹೃದಯಾಘಾತವಾಗಿದೆ ಎನ್ನುವುದನ್ನು ಅರಿತುಕೊಂಡು, ಹೃದಯಬಡಿತ ಇಲ್ಲದೇ ಇರುವುದನ್ನು ಗಮನಿಸಿ ತಕ್ಷಣವೇ ಸಿಪಿಆರ್‌ ಮಾಡಲು ಆರಂಭಿಸಿದರು. ಎದೆಯ ಭಾಗದಲ್ಲಿ ಜೋರಾಗಿ ಒತ್ತುವ ಮೂಲಕ ಉಸಿರು ತುಂಬುವ ಪ್ರಯತ್ನ ಮಾಡಿದರು. ಕೆಲ ನಿಮಿಷದಲ್ಲಿಯೇ ಹೃದಯಾಘಾತವಾಗಿ ಬಿದ್ದಿದ್ದ ವ್ಯಕ್ತಿ, ಉಸಿರಾಡಲು ಆರಂಭಿಸಿದ್ದರು.
ಇದನ್ನೂ ಓದಿ:ವೈದ್ಯರ ಎಡವಟ್ಟು; ಎಡಗಾಲು ನೋವಿದ್ದ ಮಹಿಳೆಯ ಬಲಗಾಲಿಗೆ ಶಸ್ತ್ರಚಿಕಿತ್ಸೆ ಮಾಡಿದ್ರು!
ಆ ಬಳಿಕ ತಮ್ಮ ಮೇಲಧಿಕಾರಿಗಳಿಗೆ ವಿಷಯ ತಿಳಿಸಿದ ರಾಜಶೇಖರ್‌, ವ್ಯಕ್ತಿಯನ್ನು ಸ್ಥಳೀಯ ಆಸ್ಪತ್ರೆಗೆ ತಕ್ಷಣವೇ ದಾಖಲು ಮಾಡಿ ಅವರ ಕುಟುಂಬಕ್ಕೆ ಮಾಹಿತಿ ನೀಡಿದ್ದರು. ಪ್ರಸ್ತುತ ಬಾಲರಾಜು ಅವರ ಆರೋಗ್ಯ ಕ್ಷೇಮವಾಗಿದ್ದಾರೆ. ಸಿಪಿಆರ್‌ ನೀಡಿ ಬದುಕಿಸಿದ ಟ್ರಾಫಿಕ್‌ ಪೊಲೀಸ್‌ ರಾಜಶೇಖರ್‌ಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಸಮಯಪ್ರಜ್ಞೆಯಿಂದ ಯುವಕನ ಜೀವವನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೆಟ್ಟಿಗರು ಕೂಡ ರಾಜಶೇಖರ್ ಅವರನ್ನು ಹೊಗಳಿದ್ದಾರೆ. ಇನ್ನು ಹಿರಿಯ ಪೊಲೀಸ್‌ ಅಧಿಕಾರಿಗಳು ಕೂಡ ರಾಜಶೇಖರ್‌ ಅವರ ಸಮಯಪ್ರಜ್ಞೆಯನ್ನು ಮನಸಾರೆ ಹೊಗಳಿದ್ದಾರೆ. ಕಾನ್‌ಸ್ಟೆಬಲ್ ರಾಜಶೇಖರ್ ಕೂಡ ತಮ್ಮ ಕಾರ್ಯದಿಂದ ವ್ಯಕ್ತಿಯ ಜೀವ ಉಳಿದಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
#CyberabadTraffic Police Personal Rajasekhar who#savedlife A man named Balaraju suffered a#heartattackat Rajendranagar's Arangar square and traffic constable#Rajasekhar, who was on duty there, performed#CPRto save his life. Now the boy is safe.#Hyderabadpic.twitter.com/qv8MQwCXNo
— Arbaaz The Great (@ArbaazTheGreat1)February 24, 2023

ಐಷಾರಾಮಿ ವಿಲ್ಲಾ ಖರೀದಿಸಿದ ಕೊಹ್ಲಿ; ನೋಂದಣಿ ಶುಲ್ಕಕ್ಕೆ ಪಾವತಿಸಿದ್ದು 36 ಲಕ್ಷ ರೂ.!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
