ನವದೆಹಲಿ:ರಸ್ತೆ ನಿಯಮ ಪಾಲನೆ ಹಾಗೂ ಉತ್ತಮ ಸಂಚಾರಕ್ಕಾಗಿ ಈವರೆಗೂ ಮನುಷ್ಯರಿಗಾಗಿ ಇರುವ ಸಿಗ್ನಲ್​ಗಳನ್ನು ಮಾತ್ರ ನೋಡಿದ್ದೇವೆ. ಆದರೆ ಹುಲಿಗಳಿಗೂ ಇದೇ ರೀತಿ ಸಿಗ್ನಲ್​ಗಳಿರುತ್ತವೆ ಎಂಬುದನ್ನು ನೊಡಿದರೆ ಈ ದೃಶ್ಯ ಅಚ್ಚರಿ ಮೂಡಿಸುತ್ತದೆ.
ಐಎಫ್​ಎಸ್ ಅಧಿಕಾರಿ ಪರ್ವಿನ್​ ಕಸ್ವಾನ್ ಅವರು ಹಂಚಿಕೊಂಡಿರುವ ಈ ದೃಶ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ರಸ್ತೆಯಲ್ಲಿ ಹಾದುಹೋಗುವ ವಾಹನ ಸಂಚಾರರು ಈ ಸಿಗ್ನಲ್​ಅನ್ನು ದಾಟಿ ಹೋಗಲೇಬೇಕು. ಈ ಸಮಯದಲ್ಲಿ ಇಲ್ಲಿ ಅಚ್ಚರಿ ಘಟನೆಯೊಂದು ನಡೆಯಲಿದೆ, ಅದುವೇ ಹುಲಿಗಳು ರಸ್ತೆ ದಾಟಿ ಹೋಗುವುದನ್ನು ತೀರಾ ಹತ್ತಿರದಿಂದ ನೋಡಬಹುದು.
Green signal only for tiger. These beautiful people. Unknown location.pic.twitter.com/437xG9wuom
— Parveen Kaswan, IFS (@ParveenKaswan)July 22, 2022

ದೃಶ್ಯದಲ್ಲಿ ಕಂಡುಬರುವಂತೆ ದ್ವಿಚಕ್ರ ವಾಹನ ಸವಾರರು, ಆಟೋ, ಕಾರುಗಳು ಎರಡೂ ಬದಿ ನಿಂತಿವೆ. ಇದೇ ವೇಳೆ ಪೊಲೀಸರು ಹುಲಿ ದಾಟಲು ಅನುವು ಮಾಡಿಕೊಡುತ್ತಾರೆ. ಹುಲಿಯೊಂದು ರಾಜಾರೋಷವಾಗಿ ತನ್ನ ಪಾಡಿಗೆ ಅದು ರಸ್ತೆ ದಾಟುತ್ತಿದೆ. ಇದನ್ನು ನೋಡಿದ ಸಂಚಾರರು ಮಾತ್ರ ಮೂಕವಿಸ್ಮಿತರಾಗಿದ್ದಂತೂ ಸತ್ಯ. ಏಕೆಂದರೆ ಯಾರ ಮೇಲೂ ದಾಳಿ ಮಾಡದೇ ತನ್ನ ಪಾಡಿಗೆ ಹೋದ ಹುಲಿರಾಯನನ್ನು ಕಂಡ ಜನರು ಅಚ್ಚರಿಯಾಗಿದ್ದಾರೆ.
ಸದ್ಯ ಈ ಘಟನೆ ಎಲ್ಲಿ ಎಂದು ತಿಳಿದುಬಂದಿಲ್ಲ, ಆದರೆ ವನ್ಯಜೀವಿಗಳಿಗಾಗಿ ಮನುಷ್ಯರೂ ಕೂಡ ಸಹಕಾರ ನೀಡಬೇಕೆಂದು ಅಧಿಕಾರಿ ಪ್ರವೀಣ್​ ಕಸ್ವಾನ್​​ ತಮ್ಮ ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ.(ಏಜೆನ್ಸೀಸ್​)
ಅತಿ ಕಡಿಮೆ ಬೆಲೆಯ ಚಪ್ಪಲಿ ಧರಿಸಿ ಬಂದ ವಿಜಯ್​ ದೇವರಕೊಂಡ: ನಟನ ಸರಳತೆ ನೋಡಿ ಶಾಕ್​ ಆದ ಬಾಲಿವುಡ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
