ಚೆನ್ನೈ:ಖದೀಮರ ಕೈಚಳಕದಿಂದ ಮೊಬೈಲ್​ ಉಳಿಸಿಕೊಳ್ಳಲು ಹೋಗಿ ಆಯತಪ್ಪಿ ರೈಲಿನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೇ ದುರಂತ ಸಾವಿಗೀಡಾಗಿರುವ ಹೃದಯವಿದ್ರಾವಕ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡಿದೆ.
ಮೃತಳನ್ನು ಎಸ್​. ಪ್ರೀತಿ (22) ಎಂದು ಗುರುತಿಸಲಾಗಿದೆ. ಈಕೆ ಚೆನ್ನೈನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ನಿತ್ಯವು ಕೊಟ್ಟುರುಪುರಂ ಮತ್ತು ತಿರುವನ್ಮಿಯೂರ್ ನಡುವೆ ಎಂಆರ್​ಟಿಎಸ್​ ಟ್ರೈನ್​ನಲ್ಲಿ ಪ್ರಯಾಣ ಮಾಡುತ್ತಿದ್ದಳು. ಜುಲೈ 2ರಂದು ನಗರ್​ ರೈಲು ನಿಲ್ದಾಣದ ಪ್ಲಾಟ್​ಫಾರ್ಮ್​ನಲ್ಲಿ ಜ್ಯೋತಿ ಪ್ರಜ್ಞೆಯಿಲ್ಲದ ಸ್ಥಿತಿಯಲ್ಲಿ ಬಿದ್ದಿದ್ದಳು. ಮೊಬೈಲ್​ ಕಸಿದುಕೊಳ್ಳಲು ಬಂದ ಇಬ್ಬರು ಖದೀಮರಿಂದ ತನ್ನ ಮೊಬೈಲ್​ ಫೋನ್​ ಉಳಿಸಿಕೊಳ್ಳುವ ಯತ್ನದಲ್ಲಿ ಪ್ರೀತಿ ಆಯತಪ್ಪಿ ರೈಲಿನಿಂದ ಕೆಳಗೆ ಬಿದ್ದ ಪರಿಣಾಮ ಆಕೆಯ ತಲೆಗೆ ಗಂಭೀರವಾದ ಗಾಯವಾಗಿತ್ತು.
ಇದನ್ನೂ ಓದಿ:ಭಾರತವೀಗ ನನ್ನದು! ಪಬ್​ಜಿಯಿಂದ ಶುರುವಾದ ಪ್ರೀತಿ ಸುಖಾಂತ್ಯ, ಇಲ್ಲಿಯೇ ಉಳಿಯಲು ಪಾಕ್ ಮಹಿಳೆ​ ನಿರ್ಧಾರ
ತಕ್ಷಣ ಪ್ರೀತಿಯನ್ನು ಎರಡು ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಅಂತಿಮವಾಗಿ ರಾಯಪೇಟೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆಂದು ದಾಖಲಿಸಲಾಗಿತ್ತು. ಆದರೆ, ಎಷ್ಟೇ ಪ್ರಯತ್ನ ಮಾಡಿದರೂ ಪ್ರೀತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಿನ್ನೆ (ಜು. 8) ಚಿಕಿತ್ಸೆ ಫಲಿಸದೇ ಪ್ರೀತಿ ಕೊನೆಯುಸಿರೆಳೆದಿದ್ದಾಳೆ.
ಮಗಳನ್ನು ಕಳೆದುಕೊಂಡ ದುಃಖದಲ್ಲಿರುವ ಪ್ರೀತಿ ತಂದೆ ಶ್ರೀನಿವಾಸನ್, ತಿರುವನ್ಮಿಯೂರಿನ ಸರ್ಕಾರಿ ರೈಲ್ವೇ ಪೊಲೀಸರಿಗೆ ದೂರು ನೀಡಿದ್ದು, ಘಟನೆಯ ಕುರಿತು ತನಿಖೆಯನ್ನು ಆರಂಭಿಸಲಾಗಿದೆ. ಆರಂಭದಲ್ಲಿ ಆಕಸ್ಮಿಕವಾಗಿ ಬಿದ್ದು ಸಾವು ಪ್ರಕರಣ ದಾಖಲಿಸಿಕೊಂಡು ಪ್ರೀತಿ ದುರಂತ ಸಾವಿನ ಸುತ್ತ ಇರುವ ಸನ್ನಿವೇಶಗಳನ್ನು ವಿಶ್ಲೇಷಿಸಲು ಪೊಲೀಸರು ಆರಂಭಿಸಿದರು. ಇದೇ ಸಂದರ್ಭದಲ್ಲಿ ಪ್ರೀತಿ ತಂದೆ ಕಳೆದುಹೋಗಿರುವ ಮಗಳ ಮೊಬೈಲ್​ ಫೋನ್​ ಬಗ್ಗೆ ತಿಳಿಸಿದರು. ಬಳಿಕ ಪೊಲೀಸರು ಫೋನ್​ ಕರೆಗಳ ವಿಶ್ಲೇಷಣೆಯನ್ನು ಪ್ರಾರಂಭಿಸಿದರು ಮತ್ತು ಫೋನ್ ಇರುವ ಸ್ಥಳವನ್ನು ಪತ್ತೆಹಚ್ಚಲು ಸೈಬರ್ ಕ್ರೈಮ್ ಪೊಲೀಸರೊಂದಿಗೆ ಕೆಲಸ ಮಾಡಿದರು. ಈ ಪ್ರಯತ್ನದಿಂದ ಕಳ್ಳತನದಲ್ಲಿ ಭಾಗಿಯಾಗಿದ್ದ ಇಬ್ಬರು ಶಂಕಿತರನ್ನು ಗುರುತಿಸಲು ಮತ್ತು ಬಂಧಿಸಲು ಕಾರಣವಾಯಿತು.
ಬಂಧಿತರನ್ನು ಆದ್ಯಾರ್​ ಮೂಲದ ಎಸ್​. ಮಣಿಮಾರನ್​ (19) ಮತ್ತು ಪಟ್ಟಿನಪಕ್ಕಂ ಮೂಲದ ವಿಘ್ನೇಶ್​ (27) ಎಂದು ಗುರುತಿಸಲಾಗಿದೆ. ಪ್ರೀತಿ ಸಾವಿಗೆ ನಾವೇ ಕಾರಣ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಆರೋಪಿಗಳ ಪ್ರಕಾರ, ಪ್ರೀತಿ ಮಾತನಾಡುತ್ತಾ ರೈಲಿನ ಬಾಗಿಲ ಬಳಿ ನಿಂತಿದ್ದಾಗ ಖದೀಮರು ಮೊಬೈಲ್​ ಅನ್ನು ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಪ್ರೀತಿ ಅದನ್ನು ತಡೆಯಲು ಯತ್ನಿಸಿದಾಗ ಆಯತಪ್ಪಿ ರೈಲಿನಿಂದ ಪ್ಲಾಟ್​ಫಾರ್ಮ್​ ಮೇಲೆ ಬಿದ್ದಳು. ಇದನ್ನು ನೋಡಿ ಖದೀಮರು ತಕ್ಷಣ ಅಲ್ಲಿಂದ ಓಡಿ ಹೋದರು.
ಇದನ್ನೂ ಓದಿ:13 ವರ್ಷದ ಹಿಂದೆ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಇಬ್ಬರ ಪ್ರಾಣ ತೆಗೆದಿದ್ದ ಬ್ಯೂಟಿಷಿಯನ್ ಖಿನ್ನತೆಗೆ ಬಲಿ!
ಕದ್ದ ಫೋನ್​ ಅನ್ನು ಖದೀಮರು ಬೆಸಂತ್​ ನಗರದಲ್ಲಿರುವ ಮೀನು ಅಂಗಡಿಯಲ್ಲಿ ಕೆಲಸ ಮಾಡುವ 29 ವರ್ಷದ ಎಸ್​. ರಾಜು ಎಂಬುವರಿಗೆ ಮಾರಿದ್ದರು. ಕೇವಲ 2 ಸಾವಿರ ರೂಪಾಯಿಗೆ ಫೋನ್​ ಮಾರಾಟ ಮಾಡಿದ್ದರು. ಆರೋಪಿಗಳಿಬ್ಬರ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿರುವ ಪೊಲೀಷರು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.(ಏಜೆನ್ಸೀಸ್​)
ಭಾರತವೀಗ ನನ್ನದು! ಪಬ್​ಜಿಯಿಂದ ಶುರುವಾದ ಪ್ರೀತಿ ಸುಖಾಂತ್ಯ, ಇಲ್ಲಿಯೇ ಉಳಿಯಲು ಪಾಕ್ ಮಹಿಳೆ​ ನಿರ್ಧಾರ

ಹಳೆ ಚಾಳಿ ಮುಂದುವರೆಸಿದ ಪಾಕಿಸ್ತಾನ; ಭಾರತ ಏಷ್ಯಾ ಕಪ್​ನಲ್ಲಿ ಭಾಗವಹಿಸಲು ಬರದಿದ್ರೆ….

ಸ್ಟೆಪ್ಲರ್ ಪಿನ್​ ಬಳಸಿ ಪುಟಾಣಿ ವಾಹನ ತಯಾರಿಸಿದ ಮಹಿಳೆ; ಉದ್ಯೋಗ ನೀಡಲು ಸಿದ್ಧ ಎಂದ ಆನಂದ್ ಮಹೀಂದ್ರಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 20 =
Remember me
