ಚೆನ್ನೈ:ಬಾಯ್​ಫ್ರೆಂಡ್​ ಜತೆ ಸೇರಿ ಆಲ್ಕೋಹಾಲ್​ ಸೇವಿಸಿದ ವಿದ್ಯಾರ್ಥಿನಿಯೊಬ್ಬಳು ದುರಂತ ಸಾವಿಗೀಡಾಗಿದ್ದು, ಡ್ರಗ್ಸ್​ನಿಂದ ಆಕೆಯ ಪ್ರಾಣ ಹೋಗಿರಬಹುದೇ ಎಂಬ ಸಂಶಯದ ಹಿನ್ನೆಲೆಯಲ್ಲಿ ಬಾಯ್​ಫ್ರೆಂಡ್​ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ರಿತಿ ಏಂಜೆಲ್​ (19) ಮೃತ ಯುವತಿ. ಊಟಿಯ ಬಾಂಬೆ ಕ್ಯಾಸ್ಟ್ಲ್​ ಮೂಲದ ಬಾಯ್​ಫ್ರೆಂಡ್​ ಆಕಾಶ್​ (20)ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಕಾಶ್​ ತಂದೆ-ತಾಯಿ ಬೇರೆ ಬೇರೆ ವಾಸಿಸುತ್ತಿದ್ದರು. ಹೀಗಾಗಿ ಆತ ತನ್ನ ಅಜ್ಜಿಯ ಜತೆ ನೆಲೆಸಿದ್ದನು. ಯುವತಿ ರಿತಿ, ಊಟಿಯ ಪಿಂಕರ್​ ಪೋಸ್ಟ್​ ಮೂಲದವಳು. ಊಟಿಯ ಖಾಸಗಿ ಶಾಲೆಯೊಂದರಲ್ಲಿ ಇಬ್ಬರು 10ನೇ ತರಗತಿಯವರೆಗೆ ಒಟ್ಟಿಗೆ ಓದಿದ್ದರು. ಹೀಗಾಗಿ ತುಂಬಾ ಆತ್ಮೀಯರಾಗಿದ್ದರು. ಇದೇ ಆತ್ಮೀಯತೆ ಕೊನೆಗೆ ಪ್ರೀತಿಗೆ ತಿರುಗಿತ್ತು.
ರಿತಿ ಏಂಜೆಲ್​ ಕೊಯಮತ್ತೂರಿನಲ್ಲಿರುವ ಖಾಸಗಿ ನರ್ಸಿಂಗ್​ ಕಾಲೇಜು ಸೇರಿದ್ದಳು. ಆಕಾಶ್​ ನೀಲಗಿರಿಯಲ್ಲಿ ಖಾಸಗಿ ಇಂಜಿನಿಯರಿಂಗ್​ ಕಾಲೇಜು ಸೇರಿದನು. ಇಬ್ಬರು ಆಗಾಗ ಭೇಟಿಯಾಗುತ್ತಿದ್ದರು. ಇದೇ ಭೇಟಿ ಇಬ್ಬರ ನಡುವಿನ ಪ್ರೀತಿಯನ್ನು ಮತ್ತಷ್ಟು ಬಲಪಡಿಸಿತು. ಹೀಗಿರುವಾಗ ಕಳೆದ ಶನಿವಾರ ಕಾಲೇಜಿಗೆ ರಜೆ ಇದ್ದ ಕಾರಣ ಗೆಳೆಯನ ಕೋರಿಕೆಯಂತೆ ಕೊಯಮತ್ತೂರಿನಿಂದ ರಿತಿ ಏಂಜೆಲ್ ಬಂದಿದ್ದಳು.
ಕೊಯಮತ್ತೂರಿನ ಟಾಸ್ಮಾಕ್ ಬಾರ್​ನಲ್ಲಿ ಮದ್ಯ ಖರೀದಿಸಿದ ಬಳಿಕ ಆಕಾಶ್​, ರಿತಿಯನ್ನು ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಬರುವಾಗ ಇಬ್ಬರು ಆನ್‌ಲೈನ್‌ನಲ್ಲಿ ಊಟ ಬುಕ್ ಮಾಡಿ ಮನೆಗೆ ತಂದರು. ಇದಾದ ನಂತರ ಆಕಾಶ್ ಮತ್ತು ರಿತಿ ಏಂಜೆಲ್ ಮದ್ಯ ಸೇವಿಸಿದ್ದಾರೆ. ಬಳಿಕ ಮೋಟಾರ್​ ಬೈಕ್​​ನಲ್ಲಿ ಸಮೀಪದ ಪೈನ್ ಅರಣ್ಯ ಪ್ರದೇಶಕ್ಕೆ ತೆರಳಿ ಮ್ಯಾಜಿಕ್ ಮಶ್ರೂಮ್​ಗಳನ್ನು ತೆಗೆದುಕೊಂಡು ವೈನ್ ಸಮೇತ ತಿಂದಿದ್ದಾರೆ. ಇದರಿಂದ ಇಬ್ಬರೂ ತೀವ್ರ ಮಾದಕತೆಗೆ ಒಳಗಾಗಿ ನಿದ್ರೆಗೆ ಜಾರಿದರು.
ಬೆಳಗ್ಗೆ ಎಚ್ಚರಗೊಂಡ ಆಕಾಶ್, ರಿತಿ ಏಂಜೆಲ್ ಹಾಸಿಗೆಯಿಂದ ಏಳದಿರುವುದನ್ನು ಕಂಡು ಶಾಕ್ ಆಗಿದ್ದಾನೆ. ಎದ್ಹೇಳಿಸಲು ಎಷ್ಟೇ ಪ್ರಯತ್ನಿಸಿದರೂ ರಿತಿ ಏಂಜೆಲ್ ಮಾತ್ರ ಎಚ್ಚರಗೊಳ್ಳಲೇ ಇಲ್ಲ. ತಕ್ಷಣ ಆಕಾಶ್​ ಆಂಬ್ಯುಲೆನ್ಸ್​ಗಾಗಿ 108ಕ್ಕೆ ಕರೆ ಮಾಡಿದ್ದಾನೆ. ಸ್ಥಳಕ್ಕೆ ಬಂದ ವೈದ್ಯರು ಯುವತಿಯ ಶವವನ್ನು ಪರೀಕ್ಷಿಸಿ ಆಕೆ ಮೃತಪಟ್ಟಿರುವ ಬಗ್ಗೆ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ಪೊಲೀಸರು ಮೃತದೇಹವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗಾಗಿ ಊಟಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ಬಾಯ್​ಫ್ರೆಂಡ್​ ಆಕಾಶ್​ನನ್ನು ಪೊಲೀಸರು ಬಂಧಿಸಿದ್ದಾರೆ. ರಿತಿ ಏಂಜೆಲ್ ಸಾವಿನ ಬಗ್ಗೆ ಪೊಲೀಸರು ಇನ್ನೂ ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)
20 ವರ್ಷದ ಹಿಂದೆ ಈ ವ್ಯಕ್ತಿ ಕೊಟ್ಟಿದ್ದ ಗುಲಾಬಿಯನ್ನು ಇನ್ನು ಇಟ್ಟುಕೊಂಡಿದ್ದಾರೆ ನಟಿ ಜೆನಿಲಿಯಾ

ಲೋಕ ಸಮರ 2024: ಗಡಿನಾಡಲ್ಲಿ ಶುರುವಾಗಿದೆ ಹೈವೋಲ್ಟೇಜ್ ಪಾಲಿಟಿಕ್ಸ್! ಕುಂದಾನಗರಿಯ ಸಿಹಿ ಯಾರಿಗೆ?

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:ten − 10 =
Remember me
