ಫೈಸಲಾಬಾದ್‌:ಲ್ಯಾಪ್‌ಟಾಪ್ ಸ್ಫೋಟದಿಂದ ಉಂಟಾದ ವಿನಾಶಕಾರಿ ಬೆಂಕಿ ಇಬ್ಬರು ಮಕ್ಕಳನ್ನು ಬಲಿ ತೆಗೆದುಕೊಂಡಿರುವ ಘಟನೆ ಫೈಸಲಾಬಾದ್‌ನ ಶರೀಫ್‌ಪುರದಲ್ಲಿ ನಡೆದಿದೆ. ದುವಾ(6) ಮತ್ತು ತಹಾ(9) ಮೃತ ದುರ್ದೈವಿಗಳು.
ಇದನ್ನೂ ಓದಿ:‘ನೀವು ನೀವಾಗಿರಿ..ಇನ್ನೊಬ್ಬರಿಗಾಗಿ ಬದಲಾಗುವುದು ಬೇಡ’: ಪ್ರಿಯಾಂಕಾ ಚೋಪ್ರಾ ಹೀಗೆನ್ನಲು ಕಾರಣವಿದೆ ನೋಡಿ..
ಚಾರ್ಜ್ ಮಾಡಲು ಪ್ಲಗ್ ಹಾಕಿದಾಗ ಲ್ಯಾಪ್‌ಟಾಪ್ ನಲ್ಲಿ ಬೆಂಕಿ ಕಾಣಿಸಿಕೊಂಡು ಸ್ಫೋಟಗೊಂಡಿದೆ. ಬಳಿಕ ಬೆಂಕಿ ಇಡೀ ಮನೆಗೆ ಆವರಿಸಿದೆ. ಈ ಸಂದರ್ಭದಲ್ಲಿ ಇಬ್ಬರು ಮಹಿಳೆಯರು ಮತ್ತು ಮೂರರಿಂದ ಒಂಬತ್ತು ವರ್ಷದೊಳಗಿನ ಐದು ಮಕ್ಕಳು ಸೇರಿದಂತೆ ಒಟ್ಟು ಒಂಬತ್ತು ಮಂದಿ ಬೆಂಕಿಯಲ್ಲಿ ಸಿಲುಕಿಕೊಂಡು ತೀರ್ವವಾಗಿ ಸುಟ್ಟಗಾಯಗಳಿಗೆ ತುತ್ತಾಗಿದ್ದರು.
ಕೂಡಲೇ ಗಾಯಾಳುಗಳನ್ನು ರಕ್ಷಿಸಿ ಫೈಸಲಾಬಾದ್‌ನ ಅಲೈಡ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಲ್ಲಿ ಆರು ವರ್ಷದ ಬಾಲಕಿ ದುವಾ ಮತ್ತು ಒಂಬತ್ತು ವರ್ಷದ ತಾಹಾ ಎಂಬ ಬಾಲಕ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.
ಸ್ಫೋಟದ ನಿರ್ದಿಷ್ಟ ಕಾರಣವನ್ನು ವಿವರಿಸಲಾಗಿಲ್ಲವಾದರೂ, ಲ್ಯಾಪ್‌ಟಾಪ್‌ ಮತ್ತು ಮೊಬೈಲ್ ಫೋನ್‌ಗಳಲ್ಲಿನ ದೋಷಯುಕ್ತ ಲಿಥಿಯಂ-ಐಯಾನ್ ಬ್ಯಾಟರಿಗಳು ಅತಿಯಾಗಿ ಬಿಸಿಯಾದಾಗ ಅಪರೂಪದ ಸಂದರ್ಭಗಳಲ್ಲಿ ಸ್ಫೋಟಗೊಳ್ಳುತ್ತವೆ. ಇದೂ ಸಹ ಅದೇ ರೀತಿಯ ಘಟನೆಯಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಸಿಂಪಲ್ ಆಗಿ ಕಾಣಿಸಿಕೊಂಡ ದೀಪಿಕಾ.. ಧರಿಸಿದ್ದ ಒಡವೆ ಬೆಲೆ ಕೇಳಿದ್ರೆ ಹೌಹಾರ್ತೀರಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
