ಕೊಯಮತ್ತೂರು:ಕಾರು ಗುದ್ದಿದ ಪರಿಣಾಮ ಬೈಕ್​​ವೊಂದು 10 ಅಡಿ ಮೇಲಕ್ಕೆ ಹಾರಿ, ಟ್ರಾವೆಲ್​ರ ಮೇಲೆ ಬಿದ್ದು ವ್ಯಕ್ತಿಯೊರ್ವ ಮೃತಪಟ್ಟಿರುವ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.ಇದನ್ನೂ ಓದಿ:ಶೀಘ್ರದಲ್ಲೇ ಬರಲಿವೆ ಕೇವಲ ಎಥೆನಾಲ್ ಬಳಸಿ ಓಡುವ ವಾಹನಗಳು!ಮೃತನನ್ನು ಪೊಲ್ಲಾಚಿ ಜಿಲ್ಲೆಯ ಅಂಬರಂಪಾಳ್ಯಂನ ಜಾಕೀರ್​ ಹುಸೇನ್​(36) ಎಂದು ಗುರುತಿಸಲಾಗಿದೆ. ಬೈಕ್​ನ ಹಿಂಬದಿಯಲ್ಲಿ ಕುಳಿತಿದ್ದ ಆತನ ಮಗ ಅಜ್ಮಲ್​ ಪರಿಸ್ಥಿತಿ ಚಿಂತಾಜನಕವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಕಬಡ್ಡಿ ಪಂದ್ಯಾವಳಿಗಾಗಿ ಕೊಯಮತ್ತೂರಿನ ನವಕರೈ ಪ್ರದೇಶದಲ್ಲಿನ ತರಬೇತುದಾರರಿಂದ ಮಾರ್ಗದರ್ಶನ ಪಡೆಯಲು ಮಗನನ್ನು ಕರೆದುಕೊಂಡು ಜಾಕೀರ್​ ಹೋಗುತ್ತಿದ್ದರು. ಈ ವೇಳೆ ಚಾವಡಿ ಚೆಕ್ ಪೋಸ್ಟ್ ಬಳಿ ಬಂದಾಗ ಎದುರಿನಿಂದ ವೇಗವಾಗಿ ಬಂದ ಕಾರು ದ್ವಿಚಕ್ರ ವಾಹನಕ್ಕೆ ಗುದ್ದಿದೆ.ಪರಿಣಾಮವಾಗಿ ದ್ವಿಚಕ್ರ ವಾಹನ ಮೇಲಕ್ಕೆ ಹಾರಿ ಹಿಂದಿನಿಂದ ಬರುತ್ತಿದ್ದ ಟ್ರಾವೆಲ್​​ರ ಮೇಲೆ ಬಿದ್ದು ಅದರ ಗಾಜು ಪುಡಿಪುಡಿಯಾಗಿದೆ. ಸುಮಾರು 10 ಅಡಿ ಎತ್ತರದಿಂದ ಜಾಕೀರ್ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಇದನ್ನೂ ಓದಿ:ಬೆತ್ತಲೆ ವಿಡಿಯೋ ಕಾಲ್​ ರೆಕಾರ್ಡ್​ ಮಾಡಿ, ಶಿಕ್ಷಕಿಗೆ 4 ಲಕ್ಷ ರೂ.ಗೆ ಬೇಡಿಕೆಯಿಟ್ಟ ವಿದ್ಯಾರ್ಥಿಸ್ಥಳದಲ್ಲಿದ್ದ ಸ್ಥಳೀಯರು ಜೀವನ್ಮರಣ ಹೋರಾಟ ನಡೆಸುತ್ತಿದ್ದ ಬಾಲಕನನ್ನು ರಕ್ಷಿಸಿ ಆಂಬ್ಯುಲೆನ್ಸ್ ಮೂಲಕ ಕೊಯಮತ್ತೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಜಾಕಿರ್​​ನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕೆ.ಜಿ.ಚಾವಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಾರಿನಲ್ಲಿ ಬಂದವರಿಗಾಗಿ ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​​​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − twelve =
Remember me
