ನವದೆಹಲಿ:ಮೊಬೈಲ್ ನಂಬರ್ ಪೋರ್ಟೆಬಿಲಿಟಿ (ಎಂಎನ್‌ಪಿ) ನಿಯಮಗಳಿಗೆ ತಿದ್ದುಪಡಿ ತರಲಾಗಿದ್ದು, ಜುಲೈ 1 ರಿಂದ ಜಾರಿಗೆ ಬರಲಿವೆ ಎಂದು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ( ಟ್ರಾಯ್) ಹೇಳಿದೆ.
ಇದನ್ನೂ ಓದಿ:ಭೂ ಹಗರಣದಲ್ಲಿ ಹೇಮಂತ್ ಸೊರೇನ್​ಗೆ ಜಾಮೀನು: 5ತಿಂಗಳ ನಂತರ ಜೈಲಿನಿಂದ ಬಿಡುಗಡೆ!
ಟ್ರಾಯ್ ಕಳೆದ ವಾರ ತನ್ನ ಮೊಬೈಲ್ ನಂಬರ್ ಪೋರ್ಟೆಬಿಲಿಟಿ (ಎಂಎನ್​ಪಿ) ನಿಯಮಗಳಲ್ಲಿ ಬದಲಾವಣೆಗಳನ್ನು ಪ್ರಕಟಿಸಿದೆ. ಇತ್ತೀಚಿನ ತಿದ್ದುಪಡಿಯ ಪ್ರಕಾರ, ಸಿಮ್ ಕಾರ್ಡ್ ಅನ್ನು ಬದಲಾಯಿಸಿದರೆ ಸಂಬಂಧಿತ ಮೊಬೈಲ್ ಸಂಖ್ಯೆಯನ್ನು ಏಳು ದಿನಗಳವರೆಗೆ ಬೇರೆ ಟೆಲಿಕಾಂ ಆಪರೇಟರ್‌ಗೆ ಪೋರ್ಟ್ ಮಾಡಲು ಸಾಧ್ಯವಿಲ್ಲ.
ಈ ಹಿಂದೆ ಸಿಮ್ ಸ್ವಾಪ್ ಬಳಿಕ 10 ದಿನ ಕಾಯಬೇಕಿತ್ತು. ಆದರೆ ಇತ್ತೀಚಿನ ತಿದ್ದುಪಡಿಯಲ್ಲಿ ಅದನ್ನು ಏಳು ದಿನಗಳಿಗೆ ಇಳಿಸಲಾಗಿದೆ. ಇನ್ನು ಮುಂದೆ, ಏಳು ದಿನಗಳಲ್ಲಿ ಸಂಖ್ಯೆಯನ್ನು ಬದಲಾಯಿಸಲು ವಿಶಿಷ್ಟ ಪೋರ್ಟಿಂಗ್ ಕೋಡ್ (ಯುಪಿಸಿ) ಅನ್ನು ನಿಯೋಜಿಸಲಾಗಿದೆ.
10 ದಿನ ಕಾಯುವುದರಿಂದ ಈ ಸಮಯವು ಚಂದಾದಾರರಿಗೆ ತೊಂದರೆ ಉಂಟುಮಾಡುತ್ತಿದೆ. ಹೀಗಾಗಿ 2-4 ದಿನಗಳು ಸಾಕು ಎಂದು ಎಂದು ಕೆಲವು ಟೆಲಿಕಾಂ ಸಂಸ್ಥೆಗಳು ಅಭಿಪ್ರಾಯಪಟ್ಟಿದ್ದವು.
ಎಂಎನ್​ಪಿ ನಿಯಮಾವಳಿಗಳು ಪ್ರಾರಂಭವಾದ ನಂತರ ಇದು ಒಂಬತ್ತನೇ ಹೊಸ ತಿದ್ದುಪಡಿಯಾಗಿದೆ. ಹೊಸ ನಿಯಮಗಳು ದೇಶದಲ್ಲಿ ಸಿಮ್ ಸ್ವಾಪ್ ವಂಚನೆಯನ್ನು ತಡೆಗಟ್ಟುವ ಮತ್ತು ಕಡಿಮೆ ಮಾಡುವ ಗುರಿಯನ್ನು ಹೊಂದಿವೆ ಎಂದು ಟ್ರಾಯ್ ಅಭಿಪ್ರಾಯಪಟ್ಟಿದೆ.
‘ಧಕ್-ಧಕ್’ ಬೆಡಗಿಯನ್ನು ‘ದೇಶದ್ರೋಹಿ’ ಎಂದ ನೆಟ್ಟಿಗರು! ಕಾರಣ ಇದೇ ನೋಡಿ..

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:13 − three =
Remember me
