ನವದೆಹಲಿ:ಡೈರೆಕ್ಟ್ -ಟು-ಹೋಮ್ (ಡಿಟಿಎಚ್​) ಸೇವೆಗಳನ್ನು ನಿಯಮಗಳ ಚೌಕಟ್ಟಿಗೆ ತರುವ ಉದ್ದೇಶದ ಕನ್ಸಲ್ಟೇಶನ್ ಪೇಪರ್ ಅನ್ನು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್​) ಪ್ರಕಟಿಸಿದೆ. ಈ ಸಮಾಲೋಚನಾ ಪೇಪರ್ ಓದಿಕೊಂಡು ಅಭಿಪ್ರಾಯ, ಸಲಹೆಗಳನ್ನ ನೀಡುವಂತೆ ಅದು ಸೋಮವಾರ ಪಾಲುದಾರರನ್ನು ಕೇಳಿಕೊಂಡಿದೆ.
ಕ್ಷೇತ್ರ ಪಾಲುದಾರರು ಇದಕ್ಕೆ ಸಂಬಂಧಿಸಿದ ಲಿಖಿತ ಪ್ರತಿಕ್ರಿಯೆಯನ್ನು ಡಿಸೆಂಬರ್ 14ರೊಳಗೆ ಮತ್ತು ಮರು ಪ್ರತಿಕ್ರಿಯೆಯನ್ನು ಡಿಸೆಂಬರ್ 19ರೊಳಗೆ ಸಲ್ಲಿಸಬೇಕು. ಪ್ರತಿಕ್ರಿಯೆ, ಮರು ಪ್ರತಿಕ್ರಿಯೆಗಳನ್ನು ಇ-ಮೇಲ್ ಮುಖಾಂತರ ಕಳುಹಿಸಿದರೆ ಒಳಿತು ಎಂದು ಟ್ರಾಯ್ ಸ್ಪಷ್ಟವಾಗಿ ಹೇಳಿದೆ.
ಇದನ್ನೂ ಓದಿ:ಹನಿಮೂನ್​ ಪ್ರವಾಸಕ್ಕೆ 1 ರೂಪಾಯಿ ಖರ್ಚು ಮಾಡಿಲ್ವಂತೆ ಕಾಜಲ್​ ದಂಪತಿ: ಐಷಾರಾಮಿ ಸೌಲಭ್ಯ ಫ್ರೀ ಸಿಕ್ಕಿದ್ಹೇಗೆ?
ಟ್ರಾಯ್​ ಇದಕ್ಕೂ ಮೊದಲು ಡಿಟಿಎಚ್​ ಮತ್ತು ಮಲ್ಟಿ-ಸಿಸ್ಟಮ್​ ಆಪರೇಟರ್ಸ್ (ಎಂಎಸ್​ಒ) ಕುರಿತ ರೆಗ್ಯುಲೇಟರಿ ಫ್ರೇಮ್​ವರ್ಕ್​ ಫಾರ್​ ಪ್ಲಾಟ್​ಫಾರಂ ಸರ್ವೀಸಸ್​ ಅನ್ನು ಪ್ರಕಟಿಸಿತ್ತು. ಕೇಬಲ್ ಟಿವಿ ಮತ್ತು ಅದರ ಚಂದಾದಾರರಿಗೆ ಸೇವೆ ಒದಗಿಸುವ ಅಧಿಕೃತ ಸೇವಾ ಪೂರೈಕೆದಾರರನ್ನು ಎಂಎಸ್​ಒ ಎನ್ನುತ್ತಾರೆ. ನಿಯಮ ರೂಪಿಸುವ ಸಂದರ್ಭದಲ್ಲಿ ಡಿಟಿಎಚ್ ಇರುವಲ್ಲಿ ಅಗತ್ಯವಿರುವ ಕಡೆಗೆ ಎಂಎಸ್​ಒ ಎಂದೂ ಸೇರಿಸಬೇಕು ಎಂದು ಸಚಿವಾಲಯವೂ ಸಲಹೆ ನೀಡಿದೆ. ಎಲ್ಲ ಸಮಾಲೋಚನಾ ಪ್ರಕ್ರಿಯೆಗಳು ಮುಗಿದ ಬಳಿಕ ಟ್ರಾಯ್​ ತನ್ನ ಶಿಫಾರಸನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದೆ. (ಏಜೆನ್ಸೀಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಒನ್ ಟೇಕ್ ಸಿನಿಮಾ; ಹೊಸ ದಾಖಲೆ ಬರೆದ ರಕ್ತಗುಲಾಬಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 11 =
Remember me
