ನವದೆಹಲಿ:ವಂಚನೆಯ ಕರೆಗಳ ಬಲೆಗೆ ಬೀಳದಂತೆ ಟೆಲಿಕಾಂ ಕಂಪನಿಗಳ ನಿಯಂತ್ರಕ (ಟ್ರಾಯ್) ಗ್ರಾಹಕರಿಗೆ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ:ಬಸ್ ಗೆ ಟ್ಯಾಂಕರ್ ಡಿಕ್ಕಿ.. ಐವರು ಮೃತ್ಯು- 20 ಮಂದಿಗೆ ಗಾಯ
ಸೈಬರ್​ ವಂಚಕರು ಇತ್ತೀಚೆಗೆ ಟೆಲಿಕಾಂ ಕಂಪನಿಗಳ ಹೆಸರಿನಲ್ಲಿ ಕರೆ ಮಾಡಿ ವೈಯಕ್ತಿಕ ಮಾಹಿತಿ ಕೇಳುತ್ತಿದ್ದಾರೆ. ಇಂತಹ ಮೋಸದ ಕರೆಗಳ ಬಲೆಗೆ ಬೀಳದಂತೆ ಟ್ರಾಯ್ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ.
ಟ್ರಾಯ್ ಹೆಸರಿನಲ್ಲಿ ಬರುವ ಕರೆಗಳಿಗೆ ಮರುಳಾಗಬೇಡಿ ಎಂದು ಕೇಳಿಕೊಂಡಿದ್ದು, ವೈಯಕ್ತಿಕ ಮಾಹಿತಿ ನೀಡದಿದ್ದರೆ ಮೊಬೈಲ್ ಸಂಖ್ಯೆ ಕಡಿತಗೊಳಿಸುವುದಾಗಿ ಬೆದರಿಕೆ ಹಾಕಲಾಗುತ್ತಿದೆ. ಇಂತಹ ಸಂದೇಶಗಳು, ಇತರ ವಿಧಾನಗಳ ಮೂಲಕ ಅಥವಾ ಥರ್ಡ್ ಪಾರ್ಟಿ ಏಜೆನ್ಸಿ ಮೂಲಕ ಮೊಬೈಲ್ ಸಂಖ್ಯೆಯ ಸಂಪರ್ಕ ಕಡಿತದ ಬಗ್ಗೆ ಮಾಹಿತಿಯನ್ನು ಕಳುಹಿಸುತ್ತವೆ ಎಂದು ಟ್ರಾಯ್​ ಸ್ಪಷ್ಟಪಡಿಸಿದೆ.
ಟ್ರಾಯ್ ಹೆಸರಿನಲ್ಲಿ ಬರುವ ಯಾವುದೇ ಸಂದೇಶ ಅಥವಾ ಕರೆ ಮೊಬೈಲ್ ಸಂಖ್ಯೆ ಕಡಿತಗೊಳ್ಳುತ್ತದೆ ಎಂದು ಹೇಳುವುದು ಖಂಡಿತವಾಗಿಯೂ ವಂಚನೆಯ ಯತ್ನವಾಗಿರುತ್ತದೆ. ಅಂತಹವರಿಗೆ ಪ್ರತಿಕ್ರಿಯಿಸಬಾರದು. ಟ್ರಾಯ್​ ಹೆಸರಿನಲ್ಲಿ ವೈಯಕ್ತಿಕ ಮಾಹಿತಿಯನ್ನು ಕೇಳುವ ಕರೆ ಅಥವಾ ರೆಕಾರ್ಡ್ ಮಾಡಿದ ಕರೆ ಅಥವಾ ಎಸ್​ಎಂಎಸ್​ಗಳಿಗೆ ಜನರು ಸ್ಪಂದಿಸಬಾರದು ಎಂದು ಟ್ರಾಯ್​ ಮನವಿ ಮಾಡಿದೆ.
ಯೂಟ್ಯೂಬ್​ನಲ್ಲೂ ದಾಖಲೆ ಬರೆದ ಲೆಜೆಂಡರಿ ಫುಟ್ಬಾಲ್ ಆಟಗಾರ! 90 ನಿಮಿಷದಲ್ಲಿ 1 ಮಿಲಿಯನ್ ಚಂದಾದಾರರು!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:four × 1 =
Remember me
