ನವದೆಹಲಿ: ರೈಲು ಅಪಘಾತಗಳನ್ನು ನಿಯಂತ್ರಣ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುವ ಕವಚ​ ರಕ್ಷಣಾ ವ್ಯವಸ್ಥೆಯನ್ನು ಭಾರತೀಯ ರೈಲ್ವೆ ಅಭಿವೃದ್ಧಿಸುತ್ತಿದೆ. ಈ ಸ್ವಯಂಚಾಲಿತ ರೈಲು ರಕ್ಷಣಾ ವ್ಯವಸ್ಥೆಯನ್ನು ಈಗ ದೇಶದ 1,500 ಕಿಮೀ ರೈಲು ಮಾರ್ಗದಲ್ಲಿ ಸಂಪೂರ್ಣವಾಗಿ ಅಳವಡಿಸಲಾಗಿದೆ.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೇ ಬುಧವಾರ ಈ ವಿಷಯ ತಿಳಿಸಿದ್ದಾರೆ. ಈ ವ್ಯವಸ್ಥೆಯ ವ್ಯಾಪ್ತಿಯನ್ನು ಹೆಚ್ಚಿಸಲು ಗಮನಾರ್ಹ ಪ್ರಗತಿ ಸಾಧಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, “ನಾವು 2016 ರಲ್ಲಿ ಕವಚ್ ವ್ಯವಸ್ಥೆ ಅಭಿವೃದ್ಧಿ ಕೆಲಸ ಪ್ರಾರಂಭಿಸಿದ್ದೇವೆ. 2020ರವರೆಗೆ, ಇದರ ಪ್ರಾಯೋಗಿಕ ಕೆಲಸ, ಪರೀಕ್ಷೆ, ಮಾರ್ಪಾಡು ಮತ್ತು ಆವೃತ್ತಿ ವರ್ಧನೆಗಳನ್ನು ಮಾಡಲಾಗಿದೆ. 2022ರ ಆರಂಭದಲ್ಲಿ, ಇದರ ಉತ್ಪಾದನೆ ಮತ್ತು ಸ್ಥಾಪನೆ ಕೆಲಸ ದೊಡ್ಡ ಪ್ರಮಾಣದಲ್ಲಿ ಪ್ರಾರಂಭವಾಯಿತು” ಎಂದು ಹೇಳಿದರು.
“ಇಂದು, ನಾವು 1,500-ಕಿಮೀ ಮಾರ್ಗದಲ್ಲಿ ವ್ಯವಸ್ಥೆಯನ್ನು ಸ್ಥಾಪಿಸಿದ್ದೇವೆ. ಇದಲ್ಲದೆ, ಮುಂಬೈ-ಹೌರಾ ಮತ್ತು ದೆಹಲಿ-ಹೌರಾದ 3,000-ಕಿಮೀ ಮಾರ್ಗದಲ್ಲಿ ಇದರ ಅಳವಡಿಕೆ ನಿಟ್ಟಿನಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ” ಎಂದು ಅವರು ಹೇಳಿದರು.
ಸತತ ಪ್ರಯತ್ನದಿಂದ ರೈಲ್ವೆಯು ಪ್ರತಿ ವರ್ಷ 1,500 ಕಿಮೀ ಮಾರ್ಗದಲ್ಲಿ ‘ಕವಚ’ ಸ್ಥಾಪಿಸಲು ಗಮನಾರ್ಹ ಸಾಮರ್ಥ್ಯ ವರ್ಧನೆ ಮಾಡಿದೆ ಎಂದು ವೈಷ್ಣವ್ ಹೇಳಿದರು.
“ನಾವು ಡಿಸೆಂಬರ್ 2022 ರಲ್ಲಿ 3,000 ಕಿಮೀ ಕವಚ ಅಳವಡಿಕೆಗೆ ಟೆಂಡರ್ ಕರೆದಿದ್ದೇವು. ಮೇ-ಜೂನ್ 2024 ರಲ್ಲಿ, ನಾವು 6,000 ಕಿಮೀ ಕವಚ ಸ್ಥಾಪನೆಗೆ ಮತ್ತೊಂದು ಟೆಂಡರ್ ಕರೆಯುತ್ತೇವೆ. 2025-26 ರಲ್ಲಿ, ನಾವು ಪ್ರತಿ ವರ್ಷಕ್ಕೆ 5,000 ಕಿಮೀ ಮಾರ್ಗದಲ್ಲಿ ಕವಚ ಅಳವಡಿಕೆ ಸಾಮರ್ಥ್ಯ ಗಳಿಸುತ್ತೇವೆ ಎಂದೂ ಅವರು ಹೇಳಿದರು.
ಕವಚ ಎಂಬುದು ಚಾಲನೆಯಲ್ಲಿರುವ ರೈಲುಗಳ ಸುರಕ್ಷತೆಯನ್ನು ಹೆಚ್ಚಿಸುವ ಸ್ವಯಂಚಾಲಿತ ರೈಲು ರಕ್ಷಣಾ ವ್ಯವಸ್ಥೆಯಾಗಿದೆ. ಇದನ್ನು ಮೂರು ಭಾರತೀಯ ಮಾರಾಟಗಾರರ ಸಹಯೋಗದೊಂದಿಗೆ, ರಿಸರ್ಚ್ ಡಿಸೈನ್ ಮತ್ತು ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ (RDSO) ಸ್ಥಳೀಯವಾಗಿ ಅಭಿವೃದ್ಧಿಪಡಿಸಿದೆ.ಲೊಕೊ ಪೈಲಟ್‌ಗಳಿಗೆ (ರೈಲಿನ ಚಾಲಕರು) ಅಪಾಯದಲ್ಲಿ ಮತ್ತು ಅತಿ ವೇಗದಲ್ಲಿ ಸಿಗ್ನಲ್ ಹಾದುಹೋಗುವುದನ್ನು ತಪ್ಪಿಸಲು ಕವಚ್​ ಸಹಾಯ ಮಾಡುತ್ತದೆ. ದಟ್ಟವಾದ ಮಂಜಿನಂತಹ ಪ್ರತಿಕೂಲ ವಾತಾವರಣದಲ್ಲಿ ರೈಲು ಓಡಿಸಲು ಸಹಾಯ ಮಾಡುತ್ತದೆ, ಇದು ಹೆಚ್ಚಿನ ಸುರಕ್ಷತೆ ಮತ್ತು ರೈಲು ಕಾರ್ಯಾಚರಣೆಯ ದಕ್ಷತೆಗೆ ಕಾರಣವಾಗುತ್ತದೆ. ಬ್ರೇಕ್‌ಗಳನ್ನು ಅನ್ವಯಿಸಲು ಲೊಕೊ ಪೈಲಟ್​ಗಳು ವಿಫಲವಾದರೆ ಸ್ವಯಂಚಾಲಿತ ಬ್ರೇಕ್‌ಗಳ ಮೂಲಕ ರೈಲುಗಳ ವೇಗ ನಿಯಂತ್ರಿಸುವ ಕೆಲವು ವೈಶಿಷ್ಟ್ಯಗಳನ್ನೂ ಹೊಂದಿದೆ. ಇದು ಕೇವಲ ಇಂಜಿನ್‌ಗಳಲ್ಲಿ ಅಳವಡಿಸಬಹುದಾದ ಸಾಧನವಲ್ಲ. ನಿಲ್ದಾಣಗಳು, ಇಂಜಿನ್‌ಗಳು, ಟ್ರ್ಯಾಕ್‌ಗಳು, ಗೋಪುರಗಳು ಮತ್ತು ರೇಡಿಯೊ ಉಪಕರಣಗಳ ರೂಪದಲ್ಲಿ ಮಾರ್ಗಗಳಲ್ಲಿ ಸ್ಥಾಪಿಸಲಾಗುವ ಬಹು ಘಟಕಗಳನ್ನು ಹೊಂದಿರುವ ಸಂಪೂರ್ಣ ವ್ಯವಸ್ಥೆಯಾಗಿದೆ.
ಬಿಎಸ್​ಇ ಷೇರು ಮಾರುಕಟ್ಟೆಗೆ ದಾಖಲೆ ದಿನ; ಮತ್ತೆ 20 ಸಾವಿರ ಗಡಿ ದಾಟಿದ ನಿಫ್ಟಿ

ರೂ. 45,000 ಕೋಟಿ ಬೆಲೆಯ ಖನಿಜಗಳ ಗಣಿ ಹರಾಜು; ಜಗತ್ತಿನ ಉದ್ದಿಮೆದಾರರನ್ನು ಆಹ್ವಾನಿಸಿದ ಪ್ರಲ್ಹಾದ ಜೋಶಿ

ಕೇಂದ್ರ ಸರ್ಕಾರದ ಜತೆ ಐತಿಹಾಸಿಕ ಶಾಂತಿ ಒಪ್ಪಂದ; ಶಸ್ತ್ರ ತೊರೆದ ಯುಎನ್​ಎಲ್​ಎಫ್​ ಬಂಡುಕೋರರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − fourteen =
Remember me
