ತಿರುವನಂತಪುರಂ:ನಿಗದಿತ ನಿಲುಗಡೆಯಲ್ಲಿ ನಿಲ್ಲಿಸದೆ ರೈಲೊಂದು ಸುಮಾರು 1 ಕಿಲೋಮೀಟರ್​ಗಳಷ್ಟು ಮುಂದಕ್ಕೆ ಹೋಗಿ ಆ ನಂತರ ಹಿಂದಕ್ಕೆ ಚಲಿಸಿ ಪ್ರಯಾಣಿಕರನ್ನು ಕರೆದುಕೊಂಡು ಹೋಗಿರುವ ಘಟನೆ ಕೇರಳದಲ್ಲಿ ನಡೆದಿದೆ.
ತಿರುವನಂತಪುರಂ ಕಡೆಯಿಂದ ಚೆರಿಯಾನಾಡ್​ ಕಡೆಯಿಂದ ಹೋಗುತ್ತಿದ್ದ ವೇನಾಡ್​ ಎಕ್ಸ್​​ಪ್ರೆಸ್​ನಲ್ಲಿ ಬೆಳಗ್ಗೆ 7:45ರ ಸುಮಾರಿಗೆ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿ ಒಬ್ಬರು ಚೆರಿಯಾಡ್​ ನಿಲ್ದಾಣದಲ್ಲಿನ ಸಿಗ್ನಲ್​ ಕೊರತೆಯೆ ಈ ದುರ್ಘಟನೆಗೆ ಕಾರಣ ಎಂದು ಹೇಳಿದ್ಧಾರೆ.
ಚೆರಿಯಾಡ್​ ಹಾಲ್ಟ್​ ಸ್ಟೇಷನ್​ ಆಗಿರುವುದರಿಂದ ಇಲ್ಲಿ ಸಿಗ್ನಲ್​ ಅಳವಡಿಸಿಲ್ಲ. ಲೋಕೋ ಪೈಲಟ್​ಗಳು ರೈಲು ಸುಮಾರು 1 ಕಿಲೋಮೀಟರ್​ ಕ್ರಮಿಸಿದ ನಂತರ ಗಮನಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಯಾಣಿಕರಿಗೆ ಇದರಿಂದ ಯಾವುದೇ ರೀತಿಯ ಅನಾನುಕೂಲತೆ ಉಂಟಾಗಿಲ್ಲ ಈ ವಿಚಾರವಾಗಿ ಲೋಕೋ ಪೈಲಟ್​ಗಳಿಂದ ವಿಸ್ತೃತ ವಿವರಣೆಯನ್ನು ಕೇಳಲಾಗಿದೆ ಎಂದು ತಿಳಿಸಿದ್ಧಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × 5 =
Remember me
