ನವದೆಹಲಿ:ಸಾಮಾನ್ಯವಾಗಿ ಒಮ್ಮೆ ಹೊರಟ ರೈಲು ನಿಗದಿತ ಸ್ಟೇಷನ್​ ಬಿಟ್ಟು ಬೇರೆಲ್ಲೂ ನಿಲ್ಲುವುದಿಲ್ಲ. ಅದು ಸಾಗುವ ಹಾದಿಯಲ್ಲಿ ಏನೇ ಎದುರಾದರೂ ಲೆಕ್ಕಿಸದೆ ಹೊಡೆದುಕೊಂಡು ಮುಂದಕ್ಕೆ ಹೋಗಿಬಿಡುತ್ತದೆ. ಆದರೆ ಇಲ್ಲೊಂದು ಕಡೆ ಕಚೋರಿಗೇ ರೈಲನ್ನು ನಿಲ್ಲಿಸುವ ತಾಕತ್ತಿದೆ. ಅಂಥದ್ದೊಂದು ಇದೊಂದು ಪ್ರದೇಶದಲ್ಲಿ ನಿತ್ಯವೂ ಕಾಣಿಸುತ್ತದೆ.
ರಾಜಸ್ಥಾನದ ಆಲ್ವಾರ್​ನ ರೈಲ್ವೆ ಕ್ರಾಸಿಂಗ್​ನಲ್ಲಿ ಕಚೋರಿಗಾಗಿಯೇ ರೈಲು ಕ್ರಾಸಿಂಗ್​ನಲ್ಲಿ ನಿಲ್ಲುತ್ತದೆ. ಆಲ್ವಾರ್​ನ ದೌಡ್​ಪುರ್​ ರೈಲ್ವೆ ಕ್ರಾಸಿಂಗ್​ನಲ್ಲಿ ಇಂಥದ್ದೊಂದು ದೃಶ್ಯ ಸಾಮಾನ್ಯವಾಗಿ ಪ್ರತಿ ಮುಂಜಾನೆಯೂ ಕಾಣಸಿಗುತ್ತದೆ.
ಈ ರೈಲ್ವೆ ಕ್ರಾಸಿಂಗ್ ಬರುತ್ತಿದ್ದಂತೆ ಎರಡೂ ಕಡೆಯ ಗೇಟ್​ ಮುಚ್ಚಿಕೊಳ್ಳುತ್ತದೆ. ರೈಲು ನಿಧಾನವಾಗಿ ನಿಂತು ಬಿಡುತ್ತದೆ. ಕೆಲವೇ ಕ್ಷಣಗಳಲ್ಲಿ ವ್ಯಕ್ತಿಯೊಬ್ಬ ರೈಲಿನ ಸಮೀಪ ಹೋಗಿ ರೈಲು ಚಾಲಕನಿಗೆ ಕಚೋರಿಯ ಪ್ಯಾಕೆಟ್​ ನೀಡುತ್ತಾನೆ.
ಪ್ರತಿನಿತ್ಯ 8 ಗಂಟೆ ಸುಮಾರಿಗೆ ಇಲ್ಲಿನ ರೈಲ್ವೆ ಕ್ರಾಸಿಂಗ್​ನಲ್ಲಿ ಈ ದೃಶ್ಯ ಸಾಮಾನ್ಯವಾಗಿ ಕಾಣಿಸುತ್ತದೆ. ಕ್ರಾಸಿಂಗ್ ಗೇಟ್​ನಲ್ಲಿನ ಸಿಬ್ಬಂದಿಯೊಬ್ಬ ಹತ್ತಿರದ ಅಂಗಡಿಯೊಂದರಿಂದ ಕಚೋರಿಯನ್ನು ಪಡೆದುಕೊಂಡು ಲೋಕೋ ಪೈಲಟ್​ (ರೈಲು ಚಾಲಕ)ಗೆ ನೀಡುತ್ತಾನೆ. ಈ ಚಾಲಕನ ಕಚೋರಿ ತಿನ್ನುವ ಆಸೆಯಿಂದಾಗಿ ನಿತ್ಯವೂ ಹಲವಾರು ಮಂದಿ ರೈಲ್ವೆ ಗೇಟ್​ ಬಳಿ ಕಾಯುವಂತಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಜೈಪುರದ ವಿಭಾಗೀಯ ರೈಲ್ವೇ ವ್ಯವಸ್ಥಾಪಕ ನರೇಂದ್ರ ಕುಮಾರ್ ಈ ಕುರಿತ ವಿಡಿಯೋ ಹಂಚಿಕೊಂಡಿದ್ದು, ಇಬ್ಬರು ಲೋಕೋ ಪೈಲಟ್​, ಇಬ್ಬರು ಗೇಟ್​ ಸಿಬ್ಬಂದಿ ಹಾಗೂ ಇನ್ನೊಬ್ಬ ಸೇರಿ ಐವರನ್ನು ಅಮಾನತು ಮಾಡಿದ್ದಾರೆ. ಚಾಲಕ ತನ್ನ ಇಷ್ಟ ಬಂದಹಾಗೆ ಅದೂ ಕಚೋರಿಯಂತಹ ಸಣ್ಣ ಸಂಗತಿಗಾಗಿ ರೈಲನ್ನು ಎಲ್ಲೆಂದರಲ್ಲಿ ನಿಲ್ಲಿಸುವಂತಿಲ್ಲ ಆಲ್ವಾರ್ ಸ್ಟೇಷನ್​ ಸೂಪರಿಂಟೆಂಡೆಂಟ್ ಆರ್.​ಎಲ್​. ಮೀನಾ ಹೇಳಿದ್ದಾರೆ.
@AshwiniVaishnaw@RailMinIndia@GMNWRailway@DRMJaipur@drm_dliयह वीडियो एकwhatsappग्रुप के माध्यम से आज ओर अभी देखने को मिला है
क्या यह रेलवे नियमानुसार सही है अगर गलत है तो एक्शन लीजिए और सम्बंधित सभी व्यक्तियों पर कार्यवाही करें@vishalmrcool@JAGMALSINGH_MON@vasudhootpic.twitter.com/Tw5dtkozzn
— NARENDRA KUMAR JAIN (@Narendrapcw)February 18, 2022

ಶಾಲೆಗೆ ಹೋಗು ಎಂದಿದ್ದಕ್ಕೆ ಸತ್ತೇ ಹೋದ್ಲು ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿ!

ಮಗಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ತಂದೆ; ಆರ್ಥಿಕ ಮುಗ್ಗಟ್ಟಿನಿಂದಾಗಿ ಸಾವಿಗೆ ಶರಣು

ಗೋಡೆಗೆ ಕನ್ನ ಕೊರೆದು ಒಂದು ಕೆ.ಜಿ. ಚಿನ್ನ ಕದ್ದರು; ಇಬ್ಬರಿಂದ ಕಳವು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
