ನವದೆಹಲಿ:ಭಾರತ ಮತ್ತು ಪಾಕಿಸ್ತಾನದ ನಡುವಿನ ರೈಲು ಪ್ರಯಾಣಕ್ಕೆ ಸಂಬಂಧಿಸಿದ ರೈಲು ಟಿಕೆಟ್​ನ ಫೋಟೋವೊಂದು​ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ, ಆ ಟಿಕೆಟ್​ ಪ್ರಸ್ತುತ ಸಮಯದಲ್ಲ, ಅದು ಭಾರತಕ್ಕೆ ಸ್ವಾತಂತ್ರ ಬಂದ ಕಾಲದ್ದು. ಅದರಲ್ಲಿರುವ ಟಿಕೆಟ್​ನ ಪ್ರಯಾಣ ದರ ನೋಡಿ ಎಲ್ಲರು ಚಕಿತರಾಗಿದ್ದಾರೆ.
ಪ್ರಸ್ತುತ ಬೆಲೆ ಏರಿಕೆಯ ಬಗ್ಗೆ ದೇಶದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಪೆಟ್ರೋಲ್​-ಡೀಸೆಲ್​ ದರ ಏರಿಕೆಯಿಂದ ಅಗತ್ಯ ವಸ್ತುಗಳು ಮಾತ್ರವಲ್ಲದೆ, ಸಾರಿಗೆ ಸೌಲಭ್ಯ ದರವೂ ಏರಿಕೆಯಾಗಿರುವುದರಿಂದ ಜನ ಸಾಮಾನ್ಯರಿಗೆ ಹೊರೆಯಾಗಿದೆ. ಈ ಬಗ್ಗೆ ಪರ-ವಿರೋಧ ಚರ್ಚೆಯಾಗುತ್ತಿರುವುದರ ನಡುವೆಯೇ 1947ನೇ ಇಸವಿಗೆ ಸಂಬಂಧಿಸಿದ ಭಾರತ-ಪಾಕಿಸ್ತಾನ ನಡುವಿನ ರೈಲು ಪ್ರಯಾಣಕ್ಕೆ ವಿಧಿಸಿದ ಟಿಕೆಟ್​ನ ಫೋಟೋ ಜಾಲತಾಣದಲ್ಲಿ ಹರಿದಾಡುತ್ತಿದೆ.
“ಪಾಕಿಸ್ತಾನ ರೈಲು ಲವರ್ಸ್”​ ಹೆಸರಿನ ಫೇಸ್​ಬುಕ್​ ಪೇಜ್​​ನಲ್ಲಿ ಟಿಕೆಟ್​ ಅನ್ನು ಶೇರ್​ ಮಾಡಲಾಗಿದೆ. ರೈಲು ಟಿಕೆಟ್​ ಅನ್ನು 17-09-1947ರ ಸ್ವಾತಂತ್ರ್ಯದ ಬಳಿಕ ಪಾಕಿಸ್ತಾನದ ರಾವಲ್ಪಿಂಡಿಯಿಂದ ಅಮೃತಸರಕ್ಕೆ ಪ್ರಯಾಣಿಸುತ್ತಿದ್ದ 9 ಮಂದಿಗೆ ವಿತರಿಸಲಾಗಿದೆ. 9 ಜನರಿಗೆ 36 ರೂಪಾಯಿ ಮತ್ತು 9 ಅಣೆಗಳನ್ನು ಚಾರ್ಜ್​ ಮಾಡಲಾಗಿದೆ. ಬಹುಶಃ ಕುಟುಂಬವೊಂದು ಭಾರತಕ್ಕೆ ವಲಸೆ ಹೋಗುತ್ತಿತ್ತು ಎಂದು ಬರೆಯಲಾಗಿದೆ.
9 ಜನರಿಗೆ 36 ರೂಪಾಯಿ ಅಂದರೆ ಒಬ್ಬರಿಗೆ 4 ರೂ. ಆಗುತ್ತಿತ್ತು. ಟಿಕೆಟ್​ ಫೋಟೋ ನೋಡಿದ ಕೆಲವರು ಕೇವಲ 4 ರೂ.ಗೆ ಪಾಕಿಸ್ತಾನದಿಂದ ಭಾರತಕ್ಕೆ ಬರಬಹುದಿತ್ತಾ ಎಂದು ಹುಬ್ಬೇರಿಸಿದ್ದಾರೆ. ಇನ್ನು ಕೆಲವರು, ಆ ಕಾಲಕ್ಕೆ 4 ರೂ. ಮೌಲ್ಯ ಕಡಿಮೆಯೇನಲ್ಲ. ಅದು ಕೂಡ ದುಬಾರಿಯೇ ಎಂದಿದ್ದಾರೆ.(ಏಜೆನ್ಸೀಸ್​)

70ರ ದಶಕದಲ್ಲಿ 1 ಮಸಾಲೆ ದೋಸೆ ಬೆಲೆ ಎಷ್ಟಿತ್ತು ಗೊತ್ತಾ? ಹಳೆಯ ಬಿಲ್​ ನೋಡಿದ್ರೆ ಹುಬ್ಬೇರೋದು ಖಚಿತ!

ತೀರ್ಪುಗಳ ತರ್ಜುಮೆ ಸಿಜೆಗೆ ಮೋದಿ ಶ್ಲಾಘನೆ; ತಂತ್ರಜ್ಞಾನ ಬಳಕೆ ಸಲಹೆ ನೀಡಿದ್ದ ನ್ಯಾ. ಚಂದ್ರಚೂಡ್

ಅಮೆರಿಕ ಅಧ್ಯಕ್ಷರ ಮನೆ ಮೇಲೆ ಎಫ್​ಬಿಐ ದಾಳಿ!; ಜೋ ಬೈಡೆನ್ ನಿವಾಸದಲ್ಲಿ 20 ರಹಸ್ಯ ದಾಖಲೆ ಪತ್ತೆ, ಚುರುಕುಗೊಂಡ ತನಿಖೆ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:nineteen − 6 =
Remember me
