ನವದೆಹಲಿ:ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಶುರುವಾದ ಬೆನ್ನಿಗೆ ಹೊಸ ಮಾದರಿಯ ಭಯೋತ್ಪಾದನೆ ಯನ್ನು ಎದುರಿಸುವುದಕ್ಕೆ ಭಾರತ ಸಜ್ಜಾಗಬೇಕಾಗಿದೆ. ಇದನ್ನು ಮನಗಂಡಿರುವ ಕೇಂದ್ರ ಸರ್ಕಾರ ಗಡಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ನಿಯುಕ್ತಿಯಾಗಿರುವ ಸಶಸ್ತ್ರ ಪಡೆಗಳಿಗೆ ತಾಲಿಬಾನ್ ಎದುರಿಸುವುದಕ್ಕೆ ತರಬೇತಿ ನೀಡಲು ಸೂಚನೆ ಕೊಟ್ಟಿದೆ.
ಹೊಸದಾಗಿ ಸೃಷ್ಟಿಯಾಗಿರುವ ಭದ್ರತಾ ಬೆದರಿಕೆಯ ಸನ್ನಿವೇಶದಲ್ಲಿ ತಾಲಿಬಾನ್ ಮತ್ತು ಅದರ ಕಾರ್ಯವಿಧಾನಗಳನ್ನು ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಭದ್ರತಾ ಪಡೆ ಯೋಧರು ತಿಳಿದಿರಬೇಕು. ತಾಲಿಬಾನ್, ಪಾಕಿಸ್ತಾನಗಳಿಂದ ಹೊಸ ಬೆದರಿಕೆ ಎದುರಾಗಿದೆ. ಹೀಗಾಗಿ, ಭಾರತದಲ್ಲಿ ಭದ್ರತಾ ವ್ಯವಸ್ಥೆ ಬಿಗಿಗೊಳಿಸಬೇಕಾದ್ದು ಅನಿವಾರ್ಯ. ಭೂಸೇನೆ ತನ್ನ ಗುಪ್ತಚರ ಮತ್ತು ಇತರೆ ಸನ್ನದ್ಧತೆಯನ್ನು ಸಜ್ಜುಗೊಳಿಸಬೇಕಾಗಿದೆ ಎಂದು ಸರ್ಕಾರ ಭದ್ರತಾ ಪಡೆಗಳಿಗೆ ನಿರ್ದೇಶನ ನೀಡಿದೆ.
ಟಾರ್ಗೆಟ್ ಕಾಶ್ಮೀರ:ಭಾರತದೊಳಕ್ಕೆ ಪಾಕ್ ಗಡಿ ಭಾಗದಿಂದ ಅಕ್ರಮ ನುಸುಳುವಿಕೆ ಪ್ರಯತ್ನ ಕಳೆದ ತಿಂಗಳಿಂದೀಚೆಗೆ ಹೆಚ್ಚಾಗಿದೆ. ಪಾಕಿಸ್ತಾನದಲ್ಲಿ ಈಗ ವಿದೇಶಿ ಉಗ್ರರು ಕೂಡ ನೆಲೆ ಕಂಡುಕೊಂಡಿದ್ದು, ಎಲ್ಲರ ಟಾರ್ಗೆಟ್ ಈಗ ಕಾಶ್ಮೀರವಾಗಿರುವ ಕಾರಣ ಹೆಚ್ಚಿನ ಎಚ್ಚರಿಕೆ ಅಗತ್ಯ. ಇದಕ್ಕೆ ಪೂರಕವಾಗಿ ಉಗ್ರ ಸಂಘಟನೆಗಳು ಕೂಡ ‘ಕಾಶ್ಮೀರ ವಿಮೋಚನೆ’ ವಿಚಾರ ಪ್ರಸ್ತಾಪಿಸಿರುವುದು ಗಮನಾರ್ಹ.
ಸಹ-ಶಿಕ್ಷಣಕ್ಕೆ ಅವಕಾಶವಿಲ್ಲ:ಶಿಕ್ಷಣ ಮತ್ತು ಇತರೆ ವಿಚಾರಗಳಲ್ಲಿ 20 ವರ್ಷ ಹಿಂದಕ್ಕೆ ಹೋಗಲು ತಾಲಿಬಾನ್ ಬಯಸು ವುದಿಲ್ಲ. ಸದ್ಯ ಚಾಲ್ತಿಯಲ್ಲಿರುವುದು ಮುಂದುವರಿಯಲಿದೆ. ಆದರೆ, ಹೆಣ್ಣುಮಕ್ಕಳು ಮತ್ತು ಗಂಡುಮಕ್ಕಳು ಜತೆಗೆ ಶಿಕ್ಷಣ ಪಡೆಯುವುದಕ್ಕೆ ಅವಕಾಶವಿಲ್ಲ. ಸಹ ಶಿಕ್ಷಣವನ್ನು ಉತ್ತೇಜಿಸುವುದಿಲ್ಲ. ಹೆಣ್ಣು ಮಕ್ಕಳಿಗೆ ಮೀಸಲಾದ ತರಗತಿಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯಬಹುದು. ಇದಕ್ಕಾಗಿ ಅವರು ಇಸ್ಲಾಮಿಕ್ ಉಡುಪು ಧರಿಸುವುದು ಕಡ್ಡಾಯ ಎಂದು ತಾಲಿಬಾನ್ ಸರ್ಕಾರದ ಶಿಕ್ಷಣ ಸಚಿವ ಅಬ್ದುಲ್ ಬಖಿ ಹಕ್ಕಾನಿ ಹೇಳಿದ್ದಾನೆ.
ನೆಲೆ ಕಳೆದುಕೊಂಡ ಸಂಗೀತಗಾರರು:ಅಫ್ಘನ್​ನಲ್ಲಿ ನೆಲೆ ಕಳೆದುಕೊಂಡಿರುವ ಸಂಗೀತಗಾರರು ತಮ್ಮ ಜೀವ ಮತ್ತು ಕಲೆಯನ್ನು ಉಳಿಸಿಕೊಳ್ಳಲು ಕಾಬುಲ್ ತೊರೆಯಲು ಶುರುಮಾಡಿದ್ದಾರೆ. ಈ ಕಲೆಗಳನ್ನು ಪೋಷಿಸುತ್ತಿದ್ದ ಪಾಕಿಸ್ತಾನಿಗಳು ಕಾಬುಲ್​ನಲ್ಲಿ ತಮ್ಮ ಕಚೇರಿ ಮುಚ್ಚಿ ಸ್ವದೇಶಕ್ಕೆ ತೆರಳಿದ್ದಾರೆ. ಇದು ಅಫ್ಘನ್ ಕಲಾವಿದರಲ್ಲಿ ಆತಂಕ ಮೂಡಿಸಿದೆ. ಎಲ್ಲರೂ ಸಂಗೀತೋಪಕರಣಗಳನ್ನು ಮನೆಗಳಲ್ಲಿ ಬಚ್ಚಿಟ್ಟುಕೊಂಡಿದ್ದಾರೆ. ಅನೇಕರು ಪಾಕ್​ಗೆ ತೆರಳತೊಡಗಿದ್ದಾರೆ.
ಅಮೆರಿಕ ಮೇಲೆ ಮತ್ತೊಂದು ದಾಳಿ?:ಅಮೆರಿಕದ ಮೇಲೆ ಇನ್ನೊಂದು ದೊಡ್ಡ ಉಗ್ರ ದಾಳಿ ನಡೆಯಲಿದೆ ಎಂದು ಚೀನಾದ ಗ್ಲೋಬಲ್ ಟೈಮ್್ಸ ಸಂಪಾದಕ ಹು ಕ್ಸಿಜಿನ್ ಎಚ್ಚರಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಸೆ.11ರ ದಾಳಿಯನ್ನು 19 ಉಗ್ರರು ಮಾಡಿದ್ದರು. ಅದು ಭಯೋತ್ಪಾದನೆಯ ಆತ್ಮಾಹುತಿ ದಾಳಿ ಆಗಿರಲಿಲ್ಲ. ಈಗ ಶಕ್ತಿ ಪಡೆದುಕೊಂಡಿರುವ ಭಯೋತ್ಪಾದಕರು ಪರಿಸ್ಥಿತಿಯ ಲಾಭ ಪಡೆಯಲಿದ್ದಾರೆ. ಅಮೆರಿಕ ಮಾಡಿದ ತಪ್ಪನ್ನು ಚೀನಾ ಮಾಡಬಾರದು ಎಂದು ಹೇಳಿದ್ದಾರೆ.
ಹೊಸ ತರಬೇತಿ ಯಾರಿಗೆ?:ಅಫ್ಘಾನಿಸ್ತಾನದಲ್ಲಿ 20 ವರ್ಷಗಳ ಸಮರ ಮುಗಿಸಿ ಅಮೆರಿಕ ಮತ್ತು ನ್ಯಾಟೊ ಪಡೆಗಳು ಹಿಂದಿರುಗಿದ ಬೆನ್ನಿಗೆ ಉಂಟಾದ ಹೊಸ ಬೆಳವಣಿಗೆಗಳು ಭಾರತದ ಮಟ್ಟಿಗೆ ಎಚ್ಚರಿಕೆಯ ಘಂಟೆ. ಹೀಗಾಗಿ, ಪಾಕ್ ಮತ್ತು ಚೀನಾ ಗಡಿ ಭಾಗದಲ್ಲಿ ಭದ್ರತೆಯಲ್ಲಿ ತೊಡಗಿರುವ ಬಿಎಸ್​ಎಫ್, ಎಸ್​ಎಸ್​ಬಿ, ಉಗ್ರ ನಿಗ್ರಹ ಕಾರ್ಯದಲ್ಲಿ ತೊಡಗಿರುವ ಪೊಲೀಸ್ ಘಟಕಗಳಾದ ಸಿಆರ್​ಪಿಎಫ್ ಮತ್ತು ಜಮ್ಮು-ಕಾಶ್ಮೀರ ಪೊಲೀಸರಿಗೆ ಹೊಸ ತರಬೇತಿ ನೀಡಲು ಸರ್ಕಾರ ಸೂಚನೆ ನೀಡಿದೆ. ಭದ್ರತಾ ಪಡೆಗಳ ಬಳಿ ತಾಲಿಬಾನಿಗಳ ಮಾಹಿತಿ ಇದೆ. ಅದರೆ ಅದು ಅಪ್ಡೇಟ್ ಆಗಬೇಕು. ಮುಕ್ತ ಮೂಲದ ಅಧಿಕೃತ ಮಾಹಿತಿ ಮತ್ತು ಇತರೆ ರಹಸ್ಯ ಮಾಹಿತಿಗಳನ್ನೂ ಸಂಗ್ರಹಿಸಿಟ್ಟುಕೊಳ್ಳಬೇಕಾದ್ದು ಅವಶ್ಯ. ಕಳೆದ 20 ವರ್ಷಗಳಲ್ಲಿ ಅವರ ನಡವಳಿಕೆಗಳ ಅರಿವು, ಮಾಹಿತಿ ಕೂಡ ಬೇಕು. ಈ ನಿಟ್ಟಿನಲ್ಲಿ ಪೂರ್ಣ ಪ್ರಮಾಣದ ತರಬೇತಿಯನ್ನು ನೀಡಲು ಸರ್ಕಾರ ಮುಂದಾಗಿದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.
ಸುಧಾರಿತ ಉಪಕರಣ ಬಳಕೆ:ತಾಲಿಬಾನಿಗಳು ಸುಧಾರಿತ ಶಸ್ತ್ರಗಳನ್ನು ಬಳಸಲಾರಂಭಿ ಸಿದ್ದಾರೆ. ಐಇಡಿಗಳು ಮತ್ತು ವಿಬಿಐಇಡಿ (ವಾಹನ ಬಳಸಿ ಸ್ಪೋಟಿಸುವ ಸ್ಪೋಟಕ) ಬಗ್ಗೆ ಯೋಧರಿಗೆ ಅರಿವು ಇರಬೇಕು. ಭದ್ರತಾ ಪಡೆಯವರಿಗೆ ಇದೊಂದು ದೊಡ್ಡ ಸವಾಲು. ಯೋಧರು ಸ್ಥಳೀಯ ಭಾಷೆಗಳನ್ನು ಕಲಿತಿರಬೇಕಾದ್ದು ಅನಿವಾರ್ಯ .
ಮಾಜಿ ಉಪಾಧ್ಯಕ್ಷನ ಬಂಗಲೆ ವಶಕ್ಕೆ:ತಲೆಮರೆಸಿಕೊಂಡಿರುವ ಮಾಜಿ ಉಪಾಧ್ಯಕ್ಷ ಅಬ್ದುಲ್ ರಶೀದ್ ದೋಸ್ತುಮ್ೆ ಸೇರಿದ ಐಷಾರಾಮಿ ಬಂಗಲೆಯನ್ನು ತಾಲಿಬಾನಿಗಳು ವಶಪಡಿಸಿಕೊಂಡಿದ್ದಾರೆ. ಈ ವಿಲ್ಲಾದ ಚಿತ್ರಗಳನ್ನು ಎಎಫ್​ಪಿ ಬಹಿರಂಗಗೊಳಿಸಿದೆ. ಈಜುಕೊಳ ಮತ್ತು ಇತರೆ ಐಷಾರಾಮಿ ಸೌಲಭ್ಯಗಳಿರುವ ಬಂಗಲೆಯಲ್ಲಿ ತಾಲಿಬಾನಿಗಳು ಓಡಾಡುತ್ತಿರುವ, ವಿಶ್ರಮಿಸುತ್ತಿರುವ ದೃಶ್ಯಗಳು ವೈರಲ್ ಆಗಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − seven =
Remember me
