ಕೊಚ್ಚಿ:ಇತ್ತೀಚೆಗಷ್ಟೇ ಗರ್ಭ ಧರಿಸಿರುವುದಾಗಿ ಘೋಷಣೆ ಮಾಡಿದ ಕೇರಳದ ತೃತೀಯಲಿಂಗಿ ದಂಪತಿಗೆ ಮಗು ಜನಿಸಿದೆ. ಕೇರಳದ ಕೊಯಿಕ್ಕೋಡ್​ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ಮಗುವಿಗೆ ಜನ್ಮ ನೀಡಿದ್ದು, ದೇಶದಲ್ಲೇ ಇದು ಮೊದಲ ಪ್ರಕರಣವಾಗಿದೆ.
ಇಂದು ಬೆಳಗ್ಗೆ 9.30ಕ್ಕೆ ಸಿಸೇರಿಯನ್​ ಮೂಲಕ ಮಗುವನ್ನು ಹೊರ ತೆಗೆಯಲಾಗಿದೆ. ಸದ್ಯ ಮಗು ಮತ್ತು ತೃತೀಯಲಿಂಗಿ ಇಬ್ಬರು ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಮಗುವಿನ ಲಿಂಗ ಯಾವುದು ಎಂಬುದನ್ನು ತಿಳಿಸಲು ದಂಪತಿ ನಿರಾಕರಿಸಿದ್ದಾರೆ. ಸದ್ಯ ಯಾವ ಮಗು ಎಂಬುದನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಲು ಇಷ್ಟಪಡುವುದಿಲ್ಲ ಎಂದು ದಂಪತಿ ಹೇಳಿದ್ದಾರೆ.
ವಿವರಣೆಗೆ ಬರುವುದಾದರೆ, ಜಹಾದ್ ಫಾಜಿಲ್ ಮತ್ತು ಜಿಯಾ ಪೊವೆಲ್ ಇಬ್ಬರು ಕೇರಳದ ತೃತೀಯಲಿಂಗಿ ದಂಪತಿ. ಹುಟ್ಟಿನಲ್ಲಿ ಹೆಣ್ಣಾಗಿದ್ದ ಜಹಾದ್​ ಫಾಜಿಲ್​ ತನ್ನ ಇಚ್ಛೆಯಂತೆ ಗಂಡಾಗಿ ಬದಲಾಗಿದ್ದಾರೆ. ಆದರೂ ಹೆಣ್ತನದಲ್ಲಿ ಯಾವುದೇ ಬದಲಾವಣೆ ಆಗಿಲಿಲ್ಲ. ಜಹಾದ್​​ ಫಾಜಿನ್​​ 8 ತಿಂಗಳ ಗರ್ಭ ಧರಿಸಿರುವುದಾಗಿ ಇತ್ತೀಚೆಗಷ್ಟೇ ಜಿಯಾ ಪೋವೆಲ್​ ಅವರು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಶೇರ್​ ಮಾಡಿಕೊಂಡಿದ್ದರು. ತಾಯಿಯಾಗುವ ನನ್ನ ಕನಸಿನಂತೆ, ತಂದೆಯಾಗುವ ಅವನ ಕನಸಿನಂತೆ, ನಮ್ಮ ಸ್ವಂತದ ಹಂಬಲವೂ ಈಡೇರುತ್ತಿದೆ ಎಂದು ಬರೆದುಕೊಂಡಿದ್ದರು.
ಹುಟ್ಟಿನಿಂದಾಗಲೀ, ದೇಹದಿಂದಾಗಲೀ ನಾನು ಹೆಣ್ಣಾಗದಿದ್ದರೂ ನನ್ನಲ್ಲಿರುವ ನನ್ನ ಹೆಣ್ತನವನ್ನು ಅರಿತಿದ್ದೆ. ಆದರೆ, ನನ್ನೊಳಗೆ ಸದಾ ಇದ್ದ ಕನಸೆಂದರೆ ಅದು “ಅಮ್ಮ”…? ಸಮಯವು ನನ್ನ ಆಸೆಗಳನ್ನು ತಿಳಿದಿತ್ತು. ಹೊಟ್ಟೆಯಲ್ಲಿರುವುದು ಯಾರೆಂದು ತಿಳಿಯದಿದ್ದರೂ ಒಂಬತ್ತು ತಿಂಗಳು ಕಾಯುವುದು ತಾಯಿಯ ಪ್ರತಿಕ್ರಿಯೆಯಲ್ಲವೇ? ಎಂದು ಜಿಯಾ ತಾಯಿಯಾಗುತ್ತಿರುವ ಸಂತಸ ವ್ಯಕ್ತಪಡಿಸಿದ್ದರು.
ಜಹಾದ್​ ಫಾಸಿಲ್​, ನನ್ನ ಕನಸಿನಲ್ಲಿ ನನ್ನೊಂದಿಗೆ ಸೇರಿಕೊಂಡನು. ಸಾಕಷ್ಟು ಮಾನಸಿಕ ಹಿಂಸೆಗಳನ್ನು ಅನುಭವಿಸಿದನು. ತನ್ನ ಇಚ್ಛೆಗೆ ತಕ್ಕಂತೆ ತನ್ನ ದೇಹವನ್ನು ಬದಲಾಯಿಸಲು ಪ್ರಾರಂಭಿಸಿದನು. ಹಾರ್ಮೋನ್ ಚಿಕಿತ್ಸೆ ಮತ್ತು ಸ್ತನ ತೆಗೆಯುವ ಶಸ್ತ್ರಚಿಕಿತ್ಸೆಗೆ ಒಳಗಾದನು. ಸಮಯವು ನಮ್ಮನ್ನು ಒಟ್ಟಿಗೆ ಸೇರಿಸಿದೆ. ಇಂದು 8 ತಿಂಗಳ ಜೀವನ್ ಪೂರ್ಣ ಸಮ್ಮತಿಯೊಂದಿಗೆ ಫಾಸಿಲ್​ ಹೊಟ್ಟೆಯಲ್ಲಿ ಚಲಿಸುತ್ತಿದ್ದಾನೆ ಎಂದು ಇತ್ತೀಚೆಗಷ್ಟೇ ಇನ್​ಸ್ಟಾಗ್ರಾಂನಲ್ಲಿ ಜಿಯಾ ಬರೆದುಕೊಂಡಿದ್ದರು.
ಅಂದಹಾಗೆ ಜಿಯಾ ಪೊವೆಲ್ ಓರ್ವ ಖ್ಯಾತ ಡಾನ್ಸರ್​. ಕೇರಳದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾರೆ. ಇದೀಗ ತಮ್ಮ ಜೀವನ ಸಂಗಾತಿ ಜಹಾದ್ ಫಾಜಿಲ್ ಜೊತೆ ಮಗು ಹೊಂದುವುದರೊಂದಿಗೆ ಕೇರಳದಲ್ಲಿ ಮತ್ತೊಮ್ಮೆ ಭಾರಿ ಸುದ್ದಿಯಾಗಿದ್ದಾರೆ.(ಏಜೆನ್ಸೀಸ್​)

A post shared by Ziya Paval (@paval19)

ಆರ್​ಸಿಬಿ ಬಗ್ಗೆ ಸಚಿನ್​ ಪುತ್ರಿ ಸಾರಾ ತೆಂಡೂಲ್ಕರ್​ ಮಾಡಿದ ಪೋಸ್ಟ್​ ಸಿಕ್ಕಾಪಟ್ಟೆ ವೈರಲ್​!

ಬೆಂಗಳೂರಿನಲ್ಲಿ ಉಡುಗೊರೆಯಾಗಿ ಸಿಕ್ಕಿದ್ದ ಪ್ಲಾಸ್ಟಿಕ್ ತ್ಯಾಜ್ಯದಿಂದ ತಯಾರಿಸಿದ ಹಾಫ್ ಕೋಟ್ ಧರಿಸಿ ಕಲಾಪದಲ್ಲಿ ಪಾಲ್ಗೊಂಡ ಮೋದಿ!

ರಾಜಧಾನಿಯ ಈ ಪ್ರದೇಶದಲ್ಲಿ 15 ದಿನಗಳ ಕಾಲ ನಿಷೇಧಾಜ್ಞೆ: ಎಲ್ಲಿ, ಯಾಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − seven =
Remember me
