ಫೆಬ್ರುವರಿ 21ರಂದು ಜರುಗಿದ ಸುಪ್ರೀಂ ಕೋರ್ಟ್ ಕಲಾಪ ವಿಶೇಷವಾಗಿತ್ತು. ಇದೇ ಮೊದಲ ಬಾರಿಗೆ ಕೋರ್ಟ್ ಕಲಾಪದ ವಿಚಾರಣೆ, ವಾದ-ವಿವಾದದ ಲಿಪ್ಯಂತರದ (ಪಠ್ಯವಾಗಿ ಪರಿವರ್ತನೆ) ನೇರ ಪ್ರಸಾರ ಮಾಡಲಾಯಿತು. ಈ ಕಾರ್ಯಕ್ಕೆ ಬಳಕೆಯಾಗಿದ್ದು ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟಲಿಜೆನ್ಸ್- ಎಐ) ತಂತ್ರಜ್ಞಾನ. ಸಿಜೆಐ ನ್ಯಾಯಾಲಯವಾಗಿರುವ ಕೋರ್ಟ್ ರೂಮ್ ಸಂಖ್ಯೆ1ರಲ್ಲಿ ನಡೆದ ಕಲಾಪದ ನೇರ ಪ್ರಸಾರ ಪರದೆಯಲ್ಲಿ ಲಿಪ್ಯಂತರವನ್ನು (transcribe) ಕೂಡ ಬಿತ್ತರಿಸಲಾಯಿತು. ಸಿಜೆಐ ನೇತೃತ್ವದ ಐವರು ನ್ಯಾಯಾಧೀಶರ ಪೀಠವು ಮಹಾರಾಷ್ಟ್ರದ ಶಿವಸೇನಾ ಪಕ್ಷದ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದ ಪ್ರಕರಣ ಕುರಿತು ನಡೆಸಿದ ವಿಚಾರಣೆ ಇದಾಗಿತ್ತು. ಸುಪ್ರೀಂ ಕೋರ್ಟ್​ನಲ್ಲಿ ಪ್ರಾಯೋಗಿಕವಾಗಿ ಕೈಗೊಂಡ ಈ ಲಿಪ್ಯಂತರ ಕುರಿತು ಮಾತನಾಡಿದ ಮುಖ್ಯನ್ಯಾಯಮೂರ್ತಿ (ಸಿಜೆಐ) ಡಿ.ವೈ.ಚಂದ್ರಚೂಡ್ ಅವರು, ‘ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನಾವು ನೋಡುತ್ತೇವೆ. ವಿಶೇಷವಾಗಿ ಸಂವಿಧಾನಪೀಠದ ವಿಷಯಗಳಲ್ಲಿ ಲಿಪ್ಯಂತರದ ಮೂಲಕ ನಾವು ವಾದ-ವಿವಾದಗಳ ಶಾಶ್ವತ ದಾಖಲೆಯನ್ನು ಹೊಂದಲು ಮುಂದಾಗಿದ್ದೇವೆ. ಸಹಜವಾಗಿ, ಇದು ನ್ಯಾಯಾಧೀಶರು ಮತ್ತು ವಕೀಲರಿಗೆ ಸಹಾಯ ಮಾಡುತ್ತದೆ. ನಮ್ಮ ಕಾನೂನು ಕಾಲೇಜುಗಳಿಗೂ ಸಹಾಯವಾಗುತ್ತದೆ. ವಿಷಯಗಳು ಹೇಗೆ ವಾದಿಸಲ್ಪಡುತ್ತವೆ ಎಂಬುದನ್ನು ವಿದ್ಯಾರ್ಥಿಗಳು ವಿಶ್ಲೇಷಿಸಬಹುದು. ಇದು ಒಂದು ದೊಡ್ಡ ಸಂಪನ್ಮೂಲವಾಗಿದೆ’ ಎಂದು ಹೇಳಿದರು.
ಬೆಂಗಳೂರು ನಿವಾಸಿಗಳಾದ ವಿಕಾಸ್ ಮಹೇಂದ್ರ, ಅವರ ಸಹೋದರ ವಿನಯ್ ಮಹೇಂದ್ರ ಮತ್ತು ಸೋದರಮಾವ ಬದರಿವಿಶಾಲ್ ಕಿನ್ಹಾಲ್ ಅವರು TERES (ಟೆಕ್ನಾಲಜಿ ಎನೇಬಲ್ಡ್ ರೆಸಲ್ಯೂಷನ್) ಅಭಿವೃದ್ಧಿಪಡಿಸಿದ್ದಾರೆ. ಮಾತುಗಳನ್ನು ಪಠ್ಯವಾಗಿ ಪರಿವರ್ತಿಸುವ ಎಐ ಎಂಜಿನ್ ಇದಾಗಿದೆ. ‘ನ್ಯಾಯಾಲಯ ಕಲಾಪದ ಪ್ರತಿ ಪದವನ್ನು ದಾಖಲಿಸಿದಾಗ ಹೊಣೆಗಾರಿಕೆ ಮತ್ತು ಪಾರದರ್ಶಕತೆ ಹೆಚ್ಚುತ್ತದೆ’ ಎನ್ನುತ್ತಾರೆ ನೊಮೊಲಾಜಿ ಟೆಕ್ನಾಲಜಿ ಪ್ರೖೆವೇಟ್ ಲಿಮಿಟೆಡ್​ನ ಸಹ-ಸಂಸ್ಥಾಪಕ 37 ವರ್ಷದ ವಿಕಾಸ್. ಎಐನ ನೈಸರ್ಗಿಕ ಭಾಷಾ ಸಂಸ್ಕರಣಾ ಸಾಮರ್ಥ್ಯಗಳನ್ನು ಬಳಸಿಕೊಂಡು, ನಾವು ಭಾಷಣವನ್ನು ಪಠ್ಯವಾಗಿ ಪರಿವರ್ತಿಸಲು ಪ್ರಾರಂಭಿಸಿದ್ದೇವೆ ಎಂದು ಅವರು ವಿವರಿಸುತ್ತಾರೆ. ದೆಹಲಿಯಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ನಾವು ಲಿಪ್ಯಂತರ ಮಾಡುತ್ತಿದ್ದುದನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ನಮ್ಮನ್ನು ಕರೆದು, ಸಂವಿಧಾನ ಪೀಠಕ್ಕೆ ಪ್ರಾಯೋಗಿಕ ಆಧಾರದ ಮೇಲೆ ಲಿಪ್ಯಂತರ ಮಾಡಬಹುದೇ ಎಂದು ಕೇಳಿದರು. ಅದಕ್ಕೆ ಒಪ್ಪಿ ಈ ಕೆಲಸ ಮಾಡಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕರ್ನಾಟಕ, ಒಡಿಶಾ ಮತ್ತು ಕೇರಳದ ಹೈಕೋರ್ಟ್​ಗಳು ಕೂಡ ಈ ನಿಟ್ಟಿನಲ್ಲಿ ಆಸಕ್ತಿ ತೋರಿಸಿವೆ ಎಂದು ಅವರು ಹೇಳಿದರು.
ಲಿಪ್ಯಂತರ ತಂತ್ರಜ್ಞಾನದ ಅನುಕೂಲಗಳ ಬಗೆಗೆ ವಿಕಾಸ್ ಮಹೇಂದ್ರ ಹೀಗೆ ಹೇಳುತ್ತಾರೆ. ಮೊದಲನೆಯದಾಗಿ, ವಕೀಲರು ಪ್ರಕರಣವನ್ನು ವಾದಿಸುವಾಗ ಹೆಚ್ಚು ಜಾಗರೂಕರಾಗಿರ ಬೇಕಾಗುತ್ತದೆ. ಮಾತನಾಡ ಬೇಕಾದ ಪದಗಳನ್ನು ಅಳೆದು ತೂಗಿ ಆಯ್ಕೆ ಮಾಡಿ ಕೊಳ್ಳಬೇಕಾಗುತ್ತದೆ. ಎರಡನೆಯದಾಗಿ, ಕಕ್ಷಿದಾರರು ತಮ್ಮ ವಕೀಲರು ಏನು ಮಾತನಾಡುತ್ತಿದ್ದಾರೆ ಎಂಬುದನ್ನು ಹೆಚ್ಚು ಉತ್ತಮವಾಗಿ ತಿಳಿಯಲು ಅನುಕೂಲವಾಗುತ್ತದೆ. ಮೂರನೆಯದಾಗಿ, ನ್ಯಾಯಾಧೀಶರು ಹುಡುಗಾಟಿಕೆಯ ಟೀಕೆಗಳನ್ನು ಮಾಡಲಾಗುವುದಿಲ್ಲ. ನಾಲ್ಕನೆಯದಾಗಿ, ತಮ್ಮೆಲ್ಲ ವಾದಗಳನ್ನು ಗಂಭೀರವಾಗಿ ಗಮನಿಸುತ್ತಾರೆ ಎಂದು ವಕೀಲರು ಖಚಿತಪಡಿಸಿಕೊಳ್ಳಬಹುದು. ಇದಲ್ಲದೆ, ದೀರ್ಘಕಾಲೀನ ವಿಚಾರಣೆಗಳಲ್ಲಿ ಲಿಪ್ಯಂತರವು ಪ್ರಮುಖ ಪಾತ್ರ ವಹಿಸುತ್ತದೆ. ಯುವ ವಕೀಲರು ಮತ್ತು ಕಾನೂನು ವಿದ್ಯಾರ್ಥಿಗಳಿಗೆ ಪ್ರಕರಣವನ್ನು ಹೇಗೆ ವಾದಿಸಲಾಯಿತು ಎಂಬುದನ್ನು ಗಮನಿಸಲು ಇದು ಅವಕಾಶ ಒದಗಿಸುತ್ತದೆ. ಹೀಗೆ ಒಟ್ಟಾರೆಯಾಗಿ ಇದು ನ್ಯಾಯಾಂಗ ವ್ಯವಸ್ಥೆಯನ್ನು ಸುಧಾರಿಸಲು ಅನುಕೂಲವಾಗುತ್ತದೆ ಎಂದು ವಿಕಾಸ್ ವಿವರಿಸುತ್ತಾರೆ.
ಇದನ್ನೂ ಓದಿ:ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಬಂದಿದ್ದ ಬಿಜೆಪಿ ಕಾರ್ಯಕರ್ತ ಕುಸಿದು ಬಿದ್ದು ಸಾವು
ದಾಖಲೆ ನಿರ್ವಹಣೆ ಸುಧಾರಣೆ:ಲಿಪ್ಯಂತರವು ನ್ಯಾಯಾಲಯದ ದಾಖಲೆಗಳ ನಿರ್ವಹಣೆಯನ್ನು ಸುಧಾರಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಪ್ರಸ್ತುತ ಯಾವುದಾದರೂ ಪ್ರಕರಣದ ಐತಿಹಾಸಿಕ ದಾಖಲೆಗಳನ್ನು ಪ್ರವೇಶಿಸುವ ಏಕೈಕ ಮಾರ್ಗವೆಂದರೆ ತೀರ್ಪ. ಇದು ಮಾಡಿದ ವಾದಗಳು ಮತ್ತು ನ್ಯಾಯಾಲಯದ ಅಭಿಪ್ರಾಯವನ್ನು ಒಳಗೊಂಡಿರುತ್ತದೆ. ಆದರೂ, ಇದು ಅತ್ಯಂತ ನಿಖರವಾದ ಮಾರ್ಗವಲ್ಲ. ಲಿಪ್ಯಂತರವು ಹೆಚ್ಚು ನಿಖರ ಮಾರ್ಗವಾಗಿದೆ ಎಂದೂ ಅವರು ಹೇಳುತ್ತಾರೆ.
ಟೆರೆಸ್ ಎಐ ಎಂಜಿನ್ ತಂತ್ರಜ್ಞಾನ:ಈ ಲಿಪ್ಯಂತರ ಕಾರ್ಯಕ್ಕೆ ಟೆರೆಸ್ ಎಂಬ ತಂತ್ರಜ್ಞಾನ ಬಳಕೆಯಾಗಿದೆ. ನ್ಯಾಯಾಲಯದ ವಾದಗಳನ್ನು ಪಠ್ಯವಾಗಿ ಪರಿವರ್ತಿಸುವ ಎಐ ಎಂಜಿನ್ ಇದಾಗಿದೆ. ಬೆಂಗಳೂರು ಮೂಲದ ಕಂಪನಿಯಾದ ನೊಮೊಲಾಜಿ ಟೆಕ್ನಾಲಜಿ ಪ್ರೖೆವೇಟ್ ಲಿಮಿಟೆಡ್ ಈ ತಂತ್ರಜ್ಞಾನವನ್ನು ಒದಗಿಸಿದೆ. ಕಲಾಪದ ಲಿಪ್ಯಂತರವನ್ನು ಪರಿಶೀಲನೆಗಾಗಿ ಆಯಾ ಪ್ರಕರಣಗಳನ್ನು ವಾದಿಸಿದ ವಕೀಲರೊಂದಿಗೆ ಹಂಚಿಕೊಳ್ಳಲಾಗುತ್ತದೆ. ಅಲ್ಲದೆ, ಪ್ರತಿ ಸಂಜೆ ಸುಪ್ರೀಂ ಕೋರ್ಟ್ ವೆಬ್​ಸೈಟ್​ನಲ್ಲಿ ಅಪ್​ಲೋಡ್ ಮಾಡಲಾಗುತ್ತದೆ. ಫೆಬ್ರವರಿ 21ರಂದು ಶಿವಸೇನಾ ಪ್ರಕರಣ ಕುರಿತಂತೆ ಕಲಾಪ ಅಂತ್ಯದ ವೇಳೆಗೆ ಸುಪ್ರೀಂ ಕೋರ್ಟ್ ತನ್ನ ವೆಬ್​ಸೈಟ್​ನಲ್ಲಿ ಮೊದಲ ಲಿಪ್ಯಂತರವನ್ನು ಅಧಿಕೃತವಾಗಿ ಪ್ರಕಟಿಸಿತು. ಕೋರ್ಟ್ ಕಲಾಪಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಂವಿಧಾನ ಪೀಠಗಳಿಗೆ ಸಂಬಂಧಿಸಿದ ಕಲಾಪಗಳನ್ನು ನೇರಪ್ರಸಾರ ಮಾಡಲು ಸುಪ್ರೀಂ ಕೋರ್ಟ್ ಈ ಹಿಂದೆ ನಿರ್ಧಾರ ಕೈಗೊಂಡಿತ್ತು. 2022ರ ಸೆಪ್ಟೆಂಬರ್ 27ರಂದು ಮೊದಲ ನೇರ ಪ್ರಸಾರ ಬಿತ್ತರಗೊಂಡಿತ್ತು. ಈಗ ಲಿಪ್ಯಂತರವು ಈ ನಿಟ್ಟಿನಲ್ಲಿ ಎರಡನೇ ಪ್ರಮುಖ ನಿರ್ಧಾರವಾಗಿದೆ. ನ್ಯಾಯಾಲಯದ ಕಲಾಪಗಳ ನೇರ ಪ್ರಸಾರ ಕೋರಿ ಮನವಿ ಸಲ್ಲಿಸಿದ್ದ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರು, ಕಲಾಪ ವಾದ-ವಿವಾದದ ಲಿಪ್ಯಂತರಕ್ಕೆ ಸಲಹೆ ನೀಡಿದ್ದರು.
ಇದನ್ನೂ ಓದಿ:ಕೊಲೆಯಾದ ರೂಪದರ್ಶಿಯ ಕಾಲು ಫ್ರಿಡ್ಜ್​ನಲ್ಲಿತ್ತು!; ರುಂಡಕ್ಕಾಗಿ ಪೊಲೀಸರ ಹುಡುಕಾಟ
ಕೆಲವು ದೇಶಗಳಲ್ಲಿ ಲಭ್ಯ:ಅಮೆರಿಕದಲ್ಲಿ ನ್ಯಾಯಾಲಯದ ಕಲಾಪಗಳ ಲಿಪ್ಯಂತರವನ್ನು ದಾವೆದಾರರಿಗೆ ಮತ್ತು ಸಾರ್ವಜನಿಕರಿಗೆ ನೀಡಲಾಗುತ್ತದೆ. ಅಮೆರಿಕದ ಸುಪ್ರೀಂ ಕೋರ್ಟ್, ವಿಚಾರಣೆಯ ಆಡಿಯೋ ಮತ್ತು ಪಠ್ಯಪ್ರತಿಗಳನ್ನು ಒದಗಿಸುತ್ತದೆ. ಅಮೆರಿಕದಲ್ಲಿನ ಅನೇಕ ಸ್ಥಳೀಯ ನ್ಯಾಯಾಲಯಗಳು ಕಲಾಪಗಳ ಸ್ಟೆನೋಗ್ರಾಫಿಕ್ ದಾಖಲೆಯನ್ನು ಇಟ್ಟುಕೊಳ್ಳುತ್ತವೆ. ಬ್ರಿಟನ್​ನಲ್ಲಿ ಲಿಪ್ಯಂತರವನ್ನು ಶುಲ್ಕ ಪಾವತಿಸಿ ಪಡೆಯಬಹುದು.
ಇದೋ ಬಂದಿದೆ ಕಿಸ್ಸಿಂಗ್ ಡಿವೈಸ್; ಚುಂಬಿಸುವ ಇಬ್ಬರು ಎಷ್ಟೇ ದೂರದಲ್ಲಿದ್ದರೂ ಸಿಗುವುದು ನೈಜ ಮುತ್ತಿನ ಗಮ್ಮತ್ತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 15 =
Remember me
