ನವದೆಹಲಿ:ನಿವೃತ್ತಿಗೆ ಇನ್ನೇನು ಮೂರು ದಿನ ಇದೆ ಎನ್ನುವಾಗ ಅಧಿಕಾರಿಯೊಬ್ಬರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಆಗ್ನೇಯ ಕೇಂದ್ರ ರೈಲ್ವೇ (ಎಸ್​ಇಸಿಆರ್​) ಬಿಲಾಸ್​ಪುರ ವಿಭಾಗದ ಚೀಫ್ ಕಮ್ಯುನಿಕೇಷನ್​ ಇಂಜಿನಿಯರ್​ ಕೆ.ಪಿ.ಆರ್ಯ ಎಂಬವರನ್ನು ದೆಹಲಿಗೆ ವರ್ಗಾವಣೆ ಮಾಡಲಾಗಿದೆ.
ವರ್ಗಾವಣೆ ಆದೇಶದ ಪ್ರಕಾರ ಅವರು, ನ. 28ರಂದು ಉನ್ನತ ಆಡಳಿತ ದರ್ಜೆ ಹುದ್ದೆಗೆ ಸೇರಿಕೊಳ್ಳಬೇಕಾಗಿದೆ. ಆದರೆ ನ. 30ರಂದು ನಿವೃತ್ತಿ ಆಗಲಿರುವ ತಮಗೆ ಈ ರೀತಿ ವರ್ಗಾವಣೆ ಮಾಡಿದ್ದನ್ನು ಅವರು ಕಿರುಕುಳ, ಹುಚ್ಚುತನ ಎಂದಿದ್ದಾರೆ. ಮೇಲ್ನೋಟಕ್ಕೆ ಈ ಆದೇಶ ಸರಿ ಅನಿಸಬಹುದು, ಆದರೆ ಒಟ್ಟಾರೆಯಾಗಿ ನೋಡಿದಾಗ ಅದರಲ್ಲೂ ನ.30ರಂದು ನನ್ನ ನಿವೃತ್ತಿ ಇರುವಾಗ ಇದು ಹುಚ್ಚುತನ ಅನಿಸುತ್ತದೆ ಎಂದು ರೈಲ್ವೇ ಮಂಡಳಿಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಭಾರತೀಯ ರೈಲ್ವೇಗೆ ಜೀವನಪೂರ್ತಿ ಕೆಲಸ ಮಾಡಿದವನನ್ನು ಇನ್ನೇನು ನಿವೃತ್ತಿ ಇದೆ ಎನ್ನುವಾಗ ವರ್ಗಾವಣೆ ಮಾಡಿರುವುದರಿಂದ ನಿವೃತ್ತಿಯ ಇತ್ಯರ್ಥಕ್ಕೆ ತೊಂದರೆ ಆಗಿ ಕಿರುಕುಳ ಎದುರಿಸಬೇಕಾಗುತ್ತದೆ ಎಂದು ಪತ್ರದಲ್ಲಿ ಹೇಳಿದ್ದಾರೆ. ನಾನು ಅಲ್ಲಿ 3 ದಿನಗಳಷ್ಟೇ ಕೆಲಸ ಮಾಡುತ್ತೇನೆ, ವರ್ಗಾವಣೆ ಬಾಬ್ತು ನನಗೆ 3 ಲಕ್ಷ ರೂ. ಸಿಕ್ಕರೂ ಇದು ಸರ್ಕಾರಿ ಹಣ ಪೋಲು ಮಾಡಿದಂತೆ. ಅಷ್ಟಕ್ಕೂ ಇದು ಬಡ್ತಿಯ ವರ್ಗಾವಣೆಯಾದರೂ ನನಗೆ ಹೆಚ್ಚುವರಿ ಆರ್ಥಿಕ ಪ್ರಯೋಜನವಿಲ್ಲ. ಆರು ತಿಂಗಳ ಹಿಂದೆ ಆಗಬೇಕಿದ್ದ ನನ್ನ ಬಡ್ತಿಯನ್ನು ಬಾಕಿ ಉಳಿಸಿಕೊಂಡು ಈಗ ಅದನ್ನು ನೀಡಲಾಗಿದೆ. ಆದರೆ ಸರ್ಕಾರಿ ನಿಯಮಗಳ ಪ್ರಕಾರ ನನಗೆ ಅಂದಿನಿಂದಲೇ ಅದರ ಆರ್ಥಿಕ ಪ್ರಯೋಜನ ಲಭಿಸುತ್ತಿದ್ದು, ಈ ಬಡ್ತಿಯ ವರ್ಗಾವಣೆ ಕಿರುಕುಳಕ್ಕಾಗಿಯಷ್ಟೇ ಎಂದು ಆರ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 3 =
Remember me
