ಕೊಚ್ಚಿ:ಡಕೋಟ ಎಕ್ಸ್​​ಪ್ರೆಸ್​ ಸಿನಿಮಾದಲ್ಲಿ ಮದುವೆ ಸಮಾರಂಭವೊಂದಕ್ಕೆ ವರನ ಕಡೆಯವರನ್ನು ಕರೆದೊಯ್ಯುವ ಬಸ್​ ಅನ್ನು ಹೂವು-ಎಲೆಗಳಿಂದ ವಿಚಿತ್ರವಾಗಿ ಅಲಂಕಾರ ಮಾಡಿರುವ ದೃಶ್ಯವೊಂದಿದೆ. ಅದೇ ದೃಶ್ಯವನ್ನು ನೆನಪಿಸುವ ಘಟನೆಯೊಂದು ಕೇರಳದಲ್ಲಿ ನಡೆದಿದೆ. ವ್ಯತ್ಯಾಸ ಏನೆಂದರೆ, ಸಿನಿಮಾದಲ್ಲಿರುವ ಖಾಸಗಿ ಬಸ್​. ಆದರೆ, ಇಲ್ಲಿರುವುದು ಕೇರಳದ ಸರ್ಕಾರಿ ಬಸ್​.
ನಿನ್ನೆಯಿಂದ (ನ.06) ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್​ ಆಗಿದೆ. ವಿಡಿಯೋದಲ್ಲಿ ಕೇರಳದ ಕೆಎಸ್​ಆರ್​ಟಿಸಿ ಬಸ್​ ಅನ್ನು ಬಾಳೇ ಕಂಬ ಮತ್ತು ತೆಂಗಿನ ಗರಿ ಸೇರಿದಂತೆ ಹಲವು ಎಲೆಗಳಿಂದ ಥೇಟ್​ ಡಕೋಟ ಎಕ್ಸ್​ಪ್ರೆಸ್​ ಸಿನಿಮಾದಲ್ಲಿ ಬಸ್​ ಅನ್ನು ಅಲಂಕಾರ ಮಾಡಿದಂತೆಯೇ ಮಾಡಿದ್ದಾರೆ. ಹಸಿರು ತೋರಣಗಳಿಂದ ಬಸ್​ ಸಂಪೂರ್ಣ ಮುಚ್ಚಿ ಹೋಗಿತ್ತು. ಹಿಂದೆ-ಮುಂದೆ ಎಲ್ಲಿ ನೋಡಿದರೂ ಬಸ್​ ಹಸಿರುಮಯವಾಗಿತ್ತು. ಅಲ್ಲದೆ, ಬಸ್​ ಅನ್ನು ಬಾಡಿಗೆ ಪಡೆದವರು ಬಸ್​ನ ಮುಂಭಾಗದಲ್ಲಿ ಡಾನ್ಸ್​ ಮಾಡಿರುವ ದೃಶ್ಯವು ವಿಡಿಯೋದಲ್ಲಿದೆ.
ಈ ಬಸ್​ ಕೋತಮಂಗಲಂನಿಂದ ಅಡಿಮಲಿಗೆ ತೆರಳುತ್ತಿತ್ತು. ಭಾನುವಾರ ವಿಡಿಯೋ ವೈರಲ್​ ಆಗುತ್ತಿದ್ದಂತೆ ಬಸ್​ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, ನೆಲ್ಲಿಕುಜಿ ಮೂಲದ ಬಸ್​ ಚಾಲಕನಿಗೆ ಶೋಕಾಸ್​ ನೋಟಿಸ್​ ಸಹ ನೀಡಲಾಗಿದೆ.
ಮದುವೆ ಸಮಾರಂಭಗಳಿಗೆ ಸರ್ಕಾರಿ ಬಸ್​ ಅನ್ನು ಬಾಡಿಗೆ ಪಡೆಯಬಹುದು. ಆದರೆ, ಮದುವೆಗೂ 30 ದಿನಗಳ ಮುಂಚೆಯೇ ಬಾಡಿಗೆ ಪಡೆಯುವ ಮಾಹಿತಿ ನೀಡಿ, ಅನುಮತಿ ಪಡೆದುಕೊಳ್ಳಬೇಕು. ಕೇರಳದಲ್ಲಿ ಇದು ಸಾಮಾನ್ಯವಾಗಿದೆ. ಆದರೆ, ಬಾಡಿಗೆಗೆ ಪಡೆದ ಬಸ್​ಗೆ ಯಾವುದೇ ಅಲಂಕಾರ ಮಾಡಬಾರದು ಎಂಬ ಸರ್ಕಾರದ ಆದೇಶವು ಇದೆ.
ಇದೀಗ ನಿಯಮ ಉಲ್ಲಂಘನೆ ಆಗಿರುವ ಹಿನ್ನೆಲೆಯಲ್ಲಿ ಕೇರಳದ ಸಾರಿಗೆ ಇಲಾಖೆ ಈ ಸಂಬಂಧ ತನಿಖೆ ನಡೆಸಲಿದೆ ಎಂದು ಸಾರಿಗೆ ಸಚಿವ ಆಂಟೋನಿ ರಾಜ್​ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.(ಏಜೆನ್ಸೀಸ್​)
ಮೇಕೆಯನ್ನು ಅಣಕಿಸಿದ ಮರಿ ಘೇಂಡಾಮೃಗ! ಈ ಅಪರೂಪದ ವಿಡಿಯೋ ನೋಡಿದ್ರೆ ಫಿದಾ ಆಗೋದು ಗ್ಯಾರೆಂಟಿ

ಸಾನಿಯಾ-ಶೋಯೆಬ್​ ದಾಂಪತ್ಯದಲ್ಲಿ ಬಿರುಕು? ಅನುಮಾನಕ್ಕೆ ಕಾರಣವಾದ ಇನ್​ಸ್ಟಾಗ್ರಾಂ ಪೋಸ್ಟ್!​

18 ಶಾಸಕರನ್ನು ಬಲೆಗೆ ಕೆಡವಿದ ಹನಿಟ್ರ್ಯಾಪ್​ ಕ್ವೀನ್​ ಅರ್ಚನಾಳ ಹಣದ ವ್ಯವಹಾರ ಕಂಡು ದಂಗಾದ ಇಡಿ ಅಧಿಕಾರಿಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + sixteen =
Remember me
