ನ್ಯೂಯಾರ್ಕ್:ಕಳೆದ 50 ವರ್ಷಗಳಿಂದ ಕ್ಯಾಲಿಫೋರ್ನಿಯಾದ ಪೆಟಾಲುಮಾದಲ್ಲಿ ಸೊನೊಮಾ-ಮರಿನ್ ಮೇಳದ ಅಂಗವಾಗಿ ನಡೆಯುತ್ತಿರುವ ‘ಅಗ್ಲಿಯೆಸ್ಟ್ ಡಾಗ್ ಸ್ಪರ್ಧೆ’ (Ugliest Dog contest)ಯಲ್ಲಿ ಸ್ಕೂಟರ್ ಹೆಸರಿನ ನಾಯಿ ಪ್ರಥಮ ಬಹುಮಾನ ಪಡೆದುಕೊಂಡಿದೆ.
ಇದನ್ನೂ ಓದಿ:ಪತ್ನಿಯ ಇಷ್ಟದ ಬೈಕ್​ನಲ್ಲಿ ಹನಿಮೂನ್ ಹೋಗಿ ಜೈಲು ಸೇರಿದ ಗಂಡ!
ಜೂನ್ 23 ರಂದು ನಡೆದ ಸ್ಪರ್ಧೆಯಲ್ಲಿ ಏಳು ವರ್ಷ ವಯಸ್ಸಿನ ‘ಸ್ಕೂಟರ್’ ವಿಶ್ವದ ಅತ್ಯಂತ ಕೊಳಕು ನಾಯಿ ಎಂಬ ಖ್ಯಾತಿಗೆ ಪಾತ್ರವಾಯಿತು. ನಿಯಮದಂತೆ ಟ್ರೋಫಿ ಹಾಗೂ 1.23 ಲಕ್ಷ ($1,500) ರೂಪಾಯಿ ಮೊತ್ತವನ್ನು ಬಹುಮಾನವಾಗಿ ನೀಡಲಾಗಿದೆ. ನಾಯಿಗಳನ್ನು ದತ್ತು ಪಡೆದುಕೊಳ್ಳುವ ಬಗ್ಗೆ ಜನರನ್ನು ಉತ್ತೇಜಿಸುವ ಸಲುವಾಗಿ ಈ ಸ್ಪರ್ಧೆಯನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ.
ಸ್ಕೂಟರ್ ಹೆಸರಿನ ವಿರೂಪಗೊಂಡ ನಾಯಿ, ಹಿಂಗಾಲುಗಳೊಂದಿಗೆ ಜನಿಸಿದ್ದು, ಮುಂಗಾಲಿನ ಸಹಾಯದೊಂದಿಗೆ ಮುಂದೆ ಹೋಗುತ್ತದೆ. ಅಲ್ಲದೆ ಅಸಾಮಾನ್ಯ ಎಂಬಂತಹ ಕೋರೆಹಲ್ಲುಗಳನ್ನು ಹೊಂದಿದೆ. ಕಪ್ಪು ಬಣ್ಣ ‘ಸ್ಕೂಟರ್’, ರೋಮಗಳನ್ನು ಹೊಂದಿಲ್ಲ. ಹೀಗಾಗಿ ಇತರೆ ನಾಯಿಗಳಂತೆ ಆಕರ್ಷಕವಾಗಿ ಕಾಣಿಸುತ್ತಿಲ್ಲ. Saving Animals From Euthanasia (SAFE) ಎಂಬ ತಂಡದ ಸದಸ್ಯರು ಈ ನಾಯಿಯನ್ನು ರಕ್ಷಿಸಿದ್ದಾರೆ. ಇದೀಗ ಲಿಂಡಾ ಎಲ್ಮ್ಕ್ವಿಸ್ಟ್(Linda Elmquist) ಎಂಬಾಕೆ ದತ್ತು ಪಡೆದು ಆರೈಕೆ ಮಾಡುತ್ತಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 8 =
Remember me
