ಕಾಠ್ಮಂಡು:ಕರೊನಾ ವೈರಸ್​ ಬಂದ ದಿನದಿಂದ ಎಲ್ಲೆಲ್ಲೂ ಮಾಸ್ಕ್​ದ್ದೇ ಮಾತು. ಒಂದೆಡೆ ಲಾಕ್​ಡೌನ್​ನಿಂದಾಗಿ ಮದುವೆಗಳು ಮುಂದೂಡಲ್ಪಟ್ಟಿದ್ದರೆ, ಇನ್ನು ಕೆಲವರು ಲಾಕ್​ಡೌನ್​ ನಡುವೆಯೇ ಕೆಲವೇ ಜನರ ಸಮ್ಮುಖದಲ್ಲಿ ಮದುವೆಯಾಗುತ್ತಿದ್ದಾರೆ.
ಮದುವೆ-ಸಮಾರಂಭಗಳಿಗೆ ಅನುಮತಿ ನೀಡಿರುವ ಹಲವು ಸರ್ಕಾರಗಳು ಕಡ್ಡಾಯವಾಗಿ ಕೆಲವೊಂದು ನಿಯಮ ಪಾಲನೆ ಮಾಡಬೇಕು ಎಂದಿದೆ. ಅವುಗಳ ಪೈಕಿ ಪ್ರಮುಖವಾದದ್ದು ಮಾಸ್ಕ್​ ಧರಿಸುವಿಕೆ.
ಇದನ್ನೂ ಓದಿ:ಮಧ್ಯರಾತ್ರಿಯವರೆಗೂ ಮೊಬೈಲ್​ ಗೇಮ್​ ಆಡುತ್ತಿದ್ದ ಬಾಲಕ ಅಲ್ಲಿಯೇ ಹೆಣವಾದದ್ದು ಹೇಗೆ?
ಇದೇ ಕಾರಣಕ್ಕೆ ಮದುಮಕ್ಕಳು ಮಾಸ್ಕ್​ ಧರಿಸಿಯೇ ಮದುವೆಯಾದಂಥ ಹಲವಾರು ವಿಡಿಯೋ, ಫೋಟೋಗಳು ವೈರಲ್​ ಆಗಿವೆ. ಆದರೆ ನೇಪಾಳದ ಕಾಠ್ಮಂಡುವಿನಲ್ಲಿ ಸ್ವಲ್ಪ ವಿಭಿನ್ನ ಎನಿಸುವಂಥ ಮದುವೆ ನಡೆದಿದ್ದು ಅದೀಗ ಭಾರಿ ವೈರಲ್​ ಆಗಿದೆ.
ಅದೇನೆಂದರೆ, ಸಾಮಾನ್ಯವಾಗಿ ಇಲ್ಲಿಯ ಪದ್ಧತಿಯಲ್ಲಿ ಹಾರ ಬದಲಾವಣೆ ಜತೆಗೆ ಮದುವೆಯ ವೇಳೆ ಉಂಗುರದ ಬದಲಾವಣೆಯೂ ನಡೆಯುತ್ತದೆ. ಆದರೆ ಇಲ್ಲಿ ನಡೆದ ಒಂದು ಮದುವೆಯಲ್ಲಿ ಹಾರ ಬದಲಾವಣೆಯ ನಂತರ ಮಾಸ್ಕ್​ ಬದಲಾವಣೆಯನ್ನು ವಧು-ವರರು ಮಾಡಿಕೊಂಡಿದ್ದಾರೆ. ಇದರ ಬದಲಾವಣೆ ನಂತರ ಅಲ್ಲಿ ಇದ್ದ ಜನರು ಚಪ್ಪಾಳೆ, ಸೀಟಿಯ ಮೂಲಕ ಶುಭ ಹಾರೈಸಿದ್ದಾರೆ.
ಇದನ್ನು ಮದುವೆಯಲ್ಲಿ ಹಾಜರು ಇದ್ದ ಶ್ವೇತಾ ಅಧಿಕಾರ್​ ಎನ್ನುವವರು ತಮ್ಮ ಟ್ವಿಟರ್​ನಲ್ಲಿ ಇದರ ವಿಡಿಯೋ ಶೇರ್​ ಮಾಡಿದ್ದರು. ಇದೀಗ ಭಾರಿ ವೈರಲ್​ ಆಗಿದ್ದು, ಸಾವಿರಾರು ರೀಟ್ವೀಟ್​ಗಳನ್ನು ಕಂಡಿದೆ, ಜತೆಗೆ ಸಾವಿರಾರು ಮಂದಿ ಕಮೆಂಟ್​ ಮಾಡುತ್ತಿದ್ದಾರೆ.
ಇದನ್ನೂ ಓದಿ:‘ಜಾಲತಾಣಗಳಲ್ಲಿ ಅಪ್​ಲೋಡ್​ ಮಾಡಲು ಇನ್ಮುಂದೆ ವಿಡಿಯೋ ಮಾಡಿದ್ರೆ ಶೂಟ್ಔಟ್​!​’
ವಧು-ವರರು ಪರಸ್ಪರ ಹೂವಿನ ಹಾರದ ಬದಲು ಮಾಸ್ಕ್​ ಹಾರ ಹಾಕಿಕೊಂಡರೂ ಅಚ್ಚರಿಯಿಲ್ಲ, ಇಂಥ ದಿನ ಶೀಘ್ರವೇ ಬರಲಿದೆ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ.(ಏಜೆನ್ಸೀಸ್​)
Wow.. wermaala ki jagaah mask pehnaai ki rasam..pic.twitter.com/eOheHHupMo
— Arif Aajakia (@arifaajakia)June 4, 2020


ಪ್ರವೇಶ ಕೊಡದ ಎಂಟು ಆಸ್ಪತ್ರೆಗಳು: 13 ಗಂಟೆ ಸುತ್ತಿ ಆಂಬ್ಯುಲೆನ್ಸ್​ನಲ್ಲೇ ಪ್ರಾಣಬಿಟ್ಟ ಗರ್ಭಿಣಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 − 12 =
Remember me
