ನವದೆಹಲಿ:ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್​(Reels)ಗಳದ್ದೇ ಪಾರುಪತ್ಯ. ವಾವ್ ಎಂದೆನಿಸುವಂತಹ ರೀಲ್ಸ್​ಗಳು ಜಾಲತಾಣಗಳಲ್ಲಿ ಸದಾ ಟ್ರೆಂಡಿಂಗ್​ನಲ್ಲಿರುತ್ತವೆ. ಇದೀಗ ಯುವತಿಯೊಬ್ಬಳು ನೀರಿನಾಳದಲ್ಲಿ ಮೊಸಳೆಯನ್ನು ಸ್ಪರ್ಶಿಸುತ್ತಿರುವ ರೀಲ್ಸ್ ವೈರಲ್ ಆಗುತ್ತಿದೆ. ಕ್ರಿಸ್ಟೋಫರ್ ಜಿಲೆಟ್ ಎಂಬುವರ ಇನ್​ಸ್ಟಾಗ್ರಾಂನಲ್ಲಿ ಈ ರೀಲ್ಸ್ ಅಪ್ಲೋಡ್ ಆಗಿದ್ದು, ನೆಟ್ಟಿಗರ ಹುಬ್ಬೇರಿಸುವಂತಿದೆ.
A post shared by Christopher Gillette (@gatorboys_chris)
ಯುವತಿಯೊಬ್ಬಳು ಬಿಕಿನಿ ಧರಿಸಿ ನೀರಿನಾಳದಲ್ಲಿ ಈಜುತ್ತಿದ್ದಾರೆ. ಈ ವೇಳೆ ದೈತ್ಯಾಕಾರದ ಮೊಸಳೆಯೊಂದು ಬರುತ್ತದೆ. ಈ ವೇಳೆ ಸ್ವಲ್ಪವೂ ವಿಚಲಿತಗೊಳ್ಳದ ಯುವತಿ, ಮೊಸಳೆಯ ಎದುರಲ್ಲೇ ಈಜಾಡುತ್ತಾಳೆ. ಅಷ್ಟೇ ಅಲ್ಲದೆ ಮೊಸಳೆಯನ್ನು ಸ್ಪರ್ಶಿಸುತ್ತಾಳೆ. ಈ ವಿಡಿಯೋ ಭಯಾನಕವಾಗಿದ್ದು, ಯುವತಿಯ ಧೈರ್ಯಕ್ಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇನ್ಸ್​​ಟಾಗ್ರಾಂನಲ್ಲಿ ವಿಡಿಯೋವನ್ನು 3,75,000ಕ್ಕೂ ಜನರು ಲೈಕ್ ಮಾಡಿದ್ದಾರೆ. ವಿಡಿಯೋ ನೋಡಿ ಭಯಗೊಂಡ ಕೆಲ ನೆಟ್ಟಿಗರು, ಇದು ಕೆಲ ಸಿನಿಮಾಗಳ ಸಾಹಸಮಯ ದೈಶ್ಯಗಳನ್ನು ನೆನಪಿಸುತ್ತಿವೆ ಎಂದು ಕಮೆಂಟ್ ಮಾಡಿದ್ದಾರೆ.
https://www.vijayavani.net/dg-igp-praveen-sood-appreciate-policeman-who-returned-on-election-work-after-cremating-mother-sparked
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − eleven =
Remember me
