ಕೊಚ್ಚಿ:ವಿದ್ಯಾರ್ಥಿನಿಯರ ಹಾಸ್ಟೆಲ್​ ಒಳಗಡೆ ಅತಿಕ್ರಮ ಪ್ರವೇಶ ಮಾಡಿ ಹುಡುಗಿಯರ ಜತೆ ಮಲಗಲು ಯತ್ನಿಸಿದ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ ಕೇರಳದ ತೋಡಪುಳದಲ್ಲಿ ನಡೆದಿದೆ.
ಬಂಧಿತ ಯುವಕನನ್ನು 23 ವರ್ಷದ ಅಖಿಲ್​ ಎಂದು ಗುರುತಿಸಲಾಗಿದೆ. ಈತ ಅರಕ್ಕುಲಂ ಗ್ರಾಮದ ನಿವಾಸಿ. ಬುಡಕಟ್ಟು ಹುಡುಗಿಯರ ವಸತಿ ನಿಲಯದಲ್ಲಿ ಜೂನ್​ 15ರ ಬೆಳಗಿನ ಜಾವ ಈ ಘಟನೆ ನಡೆದಿದೆ.
ಇದನ್ನೂ ಓದಿ:ಸಿಕ್ಕಸಿಕ್ಕ ಲಿಂಕ್ ಮೇಲೆ ಒತ್ತಿದರೆ ಕನ್ನ ಗ್ಯಾರಂಟಿ: ಸೇವಾಸಿಂಧು ಹೆಸರಿನಲ್ಲಿ ನಕಲಿ ವೆಬ್​ಸೈಟ್/ಲಿಂಕ್ ಸೃಷ್ಟಿಸಿ ಹರಿಬಿಟ್ಟ ಸೈಬರ್ ಕಳ್ಳರು
ಹಾಸ್ಟೆಲ್​ ಪ್ರವೇಶಿಸಿ ಅಖಿಲ್​, ಹುಡುಗಿಯರ ಪಕ್ಕದಲ್ಲಿ ಹೋಗಿ ಮಲಗಲು ಯತ್ನಿಸಿದ್ದಾನೆ. ಈ ವೇಳೆ ಆತನನ್ನು ನೋಡಿದ ಹುಡುಗಿಯರು ಗಾಬರಿಗೆ ಒಳಗಾಗಿ ಜೋರಾಗಿ ಕಿರುಚಿಕೊಂಡಿದ್ದಾರೆ. ಇದರಿಂದ ಭಯಗೊಂಡ ಅಖಿಲ್​ ಅಲ್ಲಿಂದ ಪರಾರಿಯಾಗಿದ್ದ.
ಪ್ರಕರಣ ದಾಖಲಾದ ಬಳಿಕ ಸಿಸಿಟಿವಿ ದೃಶ್ಯಾವಳಿ ನೆರವಿನೊಂದಿಗೆ ಆರೋಪಿ ಅಖಿಲ್​ನನ್ನು ಕಂಜಾರ ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಪೊಕ್ಸೊ ಕಾಯ್ದೆ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಖಿಲ್​ ಓರ್ವ ಬಸ್​ ಕ್ಲೀನರ್​ ಆಗಿ ಕೆಲಸ ಮಾಡುತ್ತಿದ್ದ. ಪೂಮಲಾ-ಮುವಾಟ್ಟುಪುಳ ಮಾರ್ಗವಾಗಿ ಸಂಚರಿಸುವ ಬಸ್‌ನ ಕ್ಲೀನರ್. ವರದಿಗಳ ಪ್ರಕಾರ ಈತ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.(ಏಜೆನ್ಸೀಸ್​)
ಬೈಡೆನ್​ ಭೋಜನಕೂಟದಲ್ಲಿ ಬಗೆ ಬಗೆಯ ಖಾದ್ಯ: ಪ್ರಧಾನಿ ಮೋದಿಗಾಗಿ ಸಿದ್ಧವಾದ ಊಟ ಮೆನು ಹೀಗಿದೆ…

ಸಿಕ್ಕಸಿಕ್ಕ ಲಿಂಕ್ ಮೇಲೆ ಒತ್ತಿದರೆ ಕನ್ನ ಗ್ಯಾರಂಟಿ: ಸೇವಾಸಿಂಧು ಹೆಸರಿನಲ್ಲಿ ನಕಲಿ ವೆಬ್​ಸೈಟ್/ಲಿಂಕ್ ಸೃಷ್ಟಿಸಿ ಹರಿಬಿಟ್ಟ ಸೈಬರ್ ಕಳ್ಳರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
