ಕಣ್ಣೂರು:ಕೆಲವೊಮ್ಮೆ ಜತೆಗಿದ್ದ ಫ್ರೆಂಡ್ಸ್​ಗಳನ್ನೇ ನಂಬಲು ಹಿಂದು-ಮುಂದು ನೋಡುವ ಕಾಲದಲ್ಲಿ ಫೇಸ್​ಬುಕ್​ ಮೂಲಕ ಪರಿಚಯವಾದವರನ್ನು ಯೋಚಿಸದೇ ನಂಬುವ ಮುನ್ನ ಒಮ್ಮೆ ಸ್ಟೋರಿ ಓದಿ.
ಬುಡಕಟ್ಟು ಜನಾಂಗದ ಯುವತಿಯೊಬ್ಬಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಟೋ ಚಾಲಕನೊಬ್ಬನನ್ನು ಕೇರಳದ ಕಣ್ಣೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಕೆಲಕಮ್​ ಪೆರುವಾ ನಿವಾಸಿ ಬಿಬಿನ್​ ಎಂದು ಗುರುತಿಸಲಾಗಿದ್ದು, ಕೆಲಕಮ್​ ಠಾಣಾ ಪೊಲೀಸರು ಗುರುವಾರ ಸಂಜೆ ಬಂಧಿಸಿದ್ದಾರೆ.
ಇದನ್ನೂ ಓದಿ:17,500 ಅಡಿ ಎತ್ತರ ಪ್ರದೇಶದಲ್ಲಿ ದಿಕ್ಕು ತೋಚದೆ ಪರದಾಟ: ಚೀನಾ ಪ್ರಜೆಗಳನ್ನು ರಕ್ಷಿಸಿದ ಭಾರತೀಯ ಸೇನೆ!
ಮಂಡಮ್​ಚೇರಿ ನಿವಾಸಿ ಶೋಭಾ ಮೃತದೇಹ ಆಗಸ್ಟ್​ 28 ರಂದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಳಿಕ ಶವಪರೀಕ್ಷೆ ನಡೆಸಿದ ವೈದ್ಯರು ನೇಣಿಗೆ ಹಾಕಿದ್ದರಿಂದ ಯುವತಿ ಸಾವಿಗೀಡಾಗಿದ್ದಾಳೆಂದು ವರದಿ ನೀಡಿದರು. ಇದೇ ಸುಳಿವಿಟ್ಟುಕೊಂಡ ಪೊಲೀಸರು ಇದರಲ್ಲಿ ಬಿಬಿನ್​ ಕೈವಾಡ ಇದೆ ಎಂದು ಅನುಮಾನಗೊಂಡು ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣ ಬಯಲಾಗಿದೆ.
ಅಂದಹಾಗೆ ಬಿಬಿನ್​ ಫೇಸ್​ಬುಕ್​ ಮೂಲಕ ಶೋಭಾಳನ್ನು ಪರಿಚಯ ಮಾಡಿಕೊಂಡಿದ್ದಾನೆ. ಆತನನ್ನು ತುಂಬಾ ನಂಬಿದ್ದ ಶೋಭಾ ತನ್ನ ಒಡವೆಗಳನ್ನೆಲ್ಲಾ ಅಡಮಾನ ಇಡಲು ಆತನಿಗೆ ನೀಡಿದ್ದಾಳೆ. ಆದರೆ, ಒಡವೆಗಳನ್ನು ಮರಳಿ ನೀಡಿದ್ದಾಗ ಇಬ್ಬರ ನಡುವೆ ವಾಗ್ವಾದ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ.(ಏಜೆನ್ಸೀಸ್​)
ಮೇಘನಾ ರಾಜ್​ ಬಳಿ ಕ್ಷಮೆಯಾಚಿಸಿ ಇಂದ್ರಜಿತ್ ಹೇಳಿದ್ದು ಹೀಗೆ…​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + thirteen =
Remember me
