ಲಂಡನ್​:ಈಶ ಫೌಂಡೇಷನ್​ನ ಸದ್ಗುರು ಹಮ್ಮಿಕೊಂಡಿರುವ ಮಣ್ಣು ರಕ್ಷಿಸಿ ಅಭಿಯಾನಕ್ಕೆ ನಿನ್ನೆಯಷ್ಟೇ ಲಂಡನ್​ನಲ್ಲಿ ಚಾಲನೆ ಸಿಕ್ಕಿದ್ದು, ಸದ್ಗುರು ಬೈಕ್ ರ‌್ಯಾಲಿ ಮೂಲಕ ನೂರು ದಿನಗಳಲ್ಲಿ 27 ರಾಷ್ಟ್ರಗಳಲ್ಲಿ ಒಟ್ಟು 32 ಸಾವಿರ ಕಿ.ಮೀ. ಪ್ರಯಾಣಿಸಿ ಜಾಗೃತಿ ಮೂಡಿಸಲು ಹೊರಟಿದ್ದಾರೆ. ಹೀಗೆ ಹೊರಟಿರುವ ಅವರು ಇಂದು ಲಂಡನ್​ನಲ್ಲಿನ ಬಸವೇಶ್ವರ ಪುತ್ಥಳಿಗೆ ನಮಿಸಿ ತಮ್ಮ ಗೌರವಾದರಗಳನ್ನು ಸಮರ್ಪಿಸಿದ್ದಾರೆ.
ಲಂಡನ್​ನ ಲ್ಯಾಂಬೆತ್​ ಮಾಜಿ ಮೇಯರ್ ಡಾ.ನೀರಜ್ ಪಾಟೀಲ್​ ಅವರು ಸದ್ಗುರು ಅವರ ಮಣ್ಣು ರಕ್ಷಿಸಿ ಅಭಿಯಾನಕ್ಕೆ ಬೆಂಬಲಿಸಿ ಅವರನ್ನು ಸ್ವಾಗತ ಕೋರಿದರು. ಬಸವೇಶ್ವರ ಪುತ್ಥಳಿಗೆ ವಿಭೂತಿಯನ್ನು ಹಚ್ಚಿದ ಸದ್ಗುರು, ಬ್ರಿಟಿಷ್ ಸಂಸತ್ತಿನ ಎದುರು ಬಸವೇಶ್ವರರ ಪುತ್ಥಳಿಯ ದರ್ಶನ ಕನ್ನಡಿಗರಿಗೆ ಹೆಮ್ಮೆಯ ಸಂಗತಿ ಎಂದು ಸಂತೋಷ ವ್ಯಕ್ತಪಡಿಸಿದರು.
ಲಂಡನ್​ ಥೇಮ್ಸ್​ ನದಿಯ ತೀರದಲ್ಲಿ ಲ್ಯಾಂಬೆತ್ ಬಸವೇಶ್ವರ ಫೌಂಡೇಷನ್​ ಈ ಬಸವೇಶ್ವರ ಪುತ್ಥಳಿಯನ್ನು ಸ್ಥಾಪಿಸಿತ್ತು. ಸದ್ಗುರು ಅವರ ಮಣ್ಣು ರಕ್ಷಿಸಿ ಅಭಿಯಾನದಲ್ಲಿ ಲ್ಯಾಂಬೆತ್​ ಬಸವೇಶ್ವರ ಫೌಂಡೇಷನ್​ ಕೂಡ ಭಾಗಿಯಾಗಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ನೀರಜ್ ಪಾಟೀಲ್ ಹೇಳಿದರು.

ಮಣ್ಣು ಉಳಿಸಿ ಅಭಿಯಾನ ಆರಂಭ: 100 ದಿನ ಸದ್ಗುರು ಬೈಕ್​ ಯಾನ, 27 ರಾಷ್ಟ್ರಗಳಲ್ಲಿ 30 ಸಾವಿರ ಕಿ.ಮೀ. ಪ್ರಯಾಣ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
