ನವದೆಹಲಿ:ರಾಷ್ಟ್ರ ರಾಜಧಾನಿಯಲ್ಲಿರುವ ಪ್ರವಾಸಿ ಭಾರತೀಯ ಕೇಂದ್ರಕ್ಕೆ ಸುಷ್ಮಾ ಸ್ವರಾಜ್​ ಭವನ ಎಂದು ಮತ್ತು ವಿದೇಶಿ ಸೇವಾ ಸಂಸ್ಥೆಗೆ ಸುಷ್ಮಾ ಸ್ವರಾಜ್​ ಇನ್ಸ್ಟಿಟ್ಯೂಟ್​ ಆಫ್ ಫಾರಿನ್​ ಸರ್ವಿಸ್​ ಎಂದು ಸರ್ಕಾರ ಘೋಷಿಸಿದೆ.
ನಾಳೆ (ಫೆ.14)ಕ್ಕೆ ಮಾಜಿ ವಿದೇಶಾಂಗ ಸಚಿವೆಯಾಗಿದ್ದ ದಿ.ಸುಷ್ಮಾ ಸ್ವರಾಜ್​ ಅವರ 68ನೇ ಜನ್ಮದಿನಾಚರಣೆಯಿದೆ. ಜನ್ಮ ದಿನದ ಮುನ್ನಾ ದಿನವಾದ ಇಂದು ಮಾಜಿ ಸಚಿವೆಯ ಸ್ಮರಣಾರ್ಥ ಪ್ರವಾಸಿ ಭವನ ಮತ್ತು ವಿದೇಶಾಂಗ ಸೇವಾ ಸಂಸ್ಥೆಗೆ ಅವರ ಹೆಸರನ್ನು ಮರುನಾಮಕರಣ ಮಾಡಿರುವುದಾಗಿ ಘೋಷಿಸಲಾಗಿದೆ.
ಈ ಕುರಿತಾಗಿ ಟ್ವೀಟ್​ ಮಾಡಿರುವ ವಿದೇಶಾಂಗ ಸಚಿವ ಎಸ್​.ಜಯಶಂಕರ್​, “ಪ್ರವಾಸಿ ಭಾರತೀಯ ಕೇಂದ್ರವನ್ನು ಸುಷ್ಮಾ ಸ್ವರಾಜ್​ ಭವನವೆಂದು ಮತ್ತು ವಿದೇಶಿ ಸೇವಾ ಸಂಸ್ಥೆಯನ್ನು ಸುಷ್ಮಾ ಸ್ವರಾಜ್​ ಇನ್ಸ್ಟಿಟ್ಯೂಟ್​ ಆಫ್​ ಫಾರಿನ್​ ಸರ್ವಿಸ್​ ಎಂದು ಮರುನಾಮಕರಣ ಮಾಡಿರುವುದಾಗಿ ಸರ್ಕಾರ ಘೋಷಿಸಿರುವುದು ಸಂತೋಷ ತಂದಿದೆ. ನಮಗೆ ಸದಾ ಸ್ಫೂರ್ತಿ ತುಂಬುತ್ತಲೇ ಬಂದಿರುವ ವ್ಯಕ್ತಿಗೆ ಇದು ಸೂಕ್ತ ಗೌರವ” ಎಂದು ತಿಳಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
