ಕೋಲ್ಕತ:ಪಶ್ಚಿಮ ಬಂಗಾಳದ ನಾಲ್ಕನೇ ಹಂತದ ಮತದಾನದ ನಡುವೆಯೇ ಗುಂಡಿನ ದಾಳಿ ನಡೆದಿದ್ದು, ತೃಣಮೂಲ ಕಾಂಗ್ರೆಸ್​ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಜಟಾಪಟಿ ಶುರುವಾಗಿದೆ. ಗುಂಡೇಟಿಗೆ ಐವರು ಬಲಿಯಾಗಿದ್ದಾರೆಂದು ಟಿಎಂಸಿ ಆರೋಪಿಸಿದ್ದು, ಬಂಗಾಳದ ಕೂಚ್​ ಬೆಹರ್​ನಲ್ಲಿ ಘಟನೆ ನಡೆದಿದೆ.
ಕೂಚ್​ ಬೆಹರ್​ನ ಸಿತಾಲ್ಕುಚಿಯ ಪಥಂತುಲಿ ಪ್ರದೇಶದ ಬೂತ್​ ನಂಬರ್​ 85ರಲ್ಲಿ ಮತದಾನ ನಡೆಯುವಾಗ ಯುವಕನೊಬ್ಬನನ್ನು ಹೊರಗೆಳೆದು ತಂದು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಪೊಲೀಸ್​​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿರಿ:‘ದೆಹಲಿಯಲ್ಲೊಬ್ಬರು ಪಾಳೆಯಗಾರ, ಕರ್ನಾಟಕದಲ್ಲೊಬ್ಬರು ಮಾಂಡಲಿಕ’! ರಾತ್ರಿ ಕರ್ಫ್ಯೂ ನಾಟಕ ಎಂದ ಸಿದ್ದರಾಮಯ್ಯ
ಈ ಘಟನೆ ಬೆನ್ನಲ್ಲೇ ಬಿಜೆಪಿ ಮತ್ತು ಟಿಎಂಸಿ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದೆ. ಘಟನೆ ಹಿಂದೆ ಬಿಜೆಪಿ ಕೈವಾಡ ಇದೆ ಎಂದು ಟಿಎಂಸಿ ಆರೋಪಿಸಿದರೆ, ಮೃತ ಯುವಕ ನಮ್ಮ ಬೂತ್​ ಏಜೆಂಟ್​ ಎಂದು ಬಿಜೆಪಿ ಟಿಎಂಸಿಯತ್ತ ಬೊಟ್ಟು ಮಾಡಿದೆ.
ಘಟನೆ ಸಂಬಂಧ ವರದಿ ನೀಡುವಂತೆ ಚುನಾವಣಾ ಆಯೋಗ ಕೇಳಿದ್ದು, ಮತದಾನದ ನಡುವೆಯೇ ಗುಂಡಿನ ಮೊರೆತ ಕೇಳಿಬಂದಿರುವುದು ಮತದಾರರಲ್ಲಿ ಆತಂಕ ಸೃಷ್ಟಿಸಿದೆ.
ನಾಲ್ಕನೇ ಹಂತದಲ್ಲಿ 44 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಇನ್ನು ನಾಲ್ಕು ಹಂತಗಳು ಬಾಕಿ ಇವೆ. ಮೇ 2ರಂದು ಫಲಿತಾಂಶ ಹೊರಬೀಳಲಿದೆ.(ಏಜೆನ್ಸೀಸ್​)
ಕಳ್ಳನನ್ನು ಹಿಡಿಯಲು ಬಂದ ಪೊಲೀಸ್​ ಅಧಿಕಾರಿಯನ್ನು ಹಿಗ್ಗಾಮುಗ್ಗಾ ಥಳಿಸಿ ಕೊಂದ ಗ್ರಾಮಸ್ಥರು!

ರೈಲು ನಿಲ್ದಾಣದಲ್ಲಿ ನೀರು ತರಲು ಹೋದ ಪತ್ನಿ ಮರಳಲೇ ಇಲ್ಲ: ಸಿಸಿಟಿವಿ ನೋಡಿದ ಪತಿಗೆ ಶಾಕ್​!

ರಾತ್ರೋರಾತ್ರಿ ಸ್ಟಾರ್​ ಆದ ಬಳಿಕ ಅನುಭವಿಸಿದ ನೋವಿನ ಕತೆ ಬಿಚ್ಚಿಟ್ಟ ಆರ್​ಸಿಬಿ ಗರ್ಲ್​..!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen + 5 =
Remember me
