ದರ್ಭಾಂಗಾ:ತ್ರಿವಳಿ ತಲಾಖ್‌ನ ಹೊಸ ಪ್ರಕರಣ ಬೆಳಕಿಗೆ ಬಂದಿದ್ದು, ಮಹಿಳೆಯ ದೂರಿನ ಮೇರೆಗೆ ಪೊಲೀಸರು ಆರೋಪಿ ಯುವಕನನ್ನು ಬಂಧಿಸಿರುವ ಘಟನೆ ಬಿಹಾರದ ದರ್ಭಾಂಗಾ ಜಿಲ್ಲೆಯಲ್ಲಿ ನಡೆದಿದೆ.
ಲಹೇರಿಯಾಸರೈ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು. ಖುಷ್ಬೂ ಪರ್ವೀನ್ ಎಂಬಾಕೆಯಕೇ ತನ್ನ ಪತಿ ಮೊಹಮ್ಮದ್ ಮಕ್ಸೂದ್​ ವಿರುದ್ಧ ದೂರು ನೀಡಿದ ಮಹಿಳೆಯಾಗಿದ್ದಾಳೆ. ಸದ್ಯ ಮಕ್ಸೂದ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ವರದಕ್ಷಿಣೆಗಾಗಿ ತನ್ನ ಅತ್ತೆಯ ಮನೆಯವರು ಪೀಡಿಸುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಇದನ್ನೂ ಓದಿ:ಮೇವಿನ ಹಣ ವಾಪಸ್ಸು ಕೇಳಿದ್ದಕ್ಕೆ ಮಹಿಳೆಗೆ ಅಡ್ಡರಸ್ತೆಯಲ್ಲೇ ದೊಣ್ಣೆಯಿಂದ ಥಳಿಸಿ ಕ್ರೌರ್ಯ..
ಖುಷ್ಬು ಪರ್ವೀನ್ ಪುರ್ನಿಯಾ ಜಿಲ್ಲೆಯ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ಗುಲಾಬ್ ಬಾಗ್ ಪ್ರದೇಶದ ನಿವಾಸಿ ಮೊಹಮ್ಮದ್ ಶಕುರ್ ಎಂಬುವರ ಪುತ್ರಿಯಾಗಿದ್ದು, ಆಕೆಗೆ 2022ರ ಜೂನ್​ನಲ್ಲಿ ಮೊಹಮ್ಮದ್ ಮಕ್ಸೂದ್ ಎಂಬಾತನ ಜತೆಗೆ ವಿವಾಹವಾಗಿತ್ತು. ಅಂದಿನಿಂದಲೇ ಪತಿ ಮತ್ತು ಅತ್ತೆಯಂದಿರು ತನಗೆ ಕಿರುಕುಳ ನೀಡುತ್ತಿದ್ದು, ಆತ ಮೂರು ಬಾರಿ ತಲಾಖ್ ಹೇಳಿ ವಿಚ್ಛೇದನ ನೀಡಿದ್ದಾನೆ ಎಂದು ಖುಷ್ಬು ಪತಿ ವಿರುದ್ಧ ಆರೋಪಿಸಿದ್ದಾಳೆ.
ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯ ಮುಖ್ಯಸ್ಥೆ ನುಸ್ರತ್ ಜಹಾನ್ ಮಾತನಾಡಿ, ಸಂತ್ರಸ್ತೆಯ ತನ್ನ ಪತಿ ಮೊ ಮಕ್ಸೂದ್ ತಲಾಖ್ ಹೇಳಿ ಮೂರು ಬಾರಿ ವಿಚ್ಛೇದನ ನೀಡಿದ್ದಾನೆ. ಪತಿ ಮತ್ತು ಅತ್ತೆಯಂದಿರು ತನಗೆ ಚಿತ್ರಹಿಂಸೆ ನೀಡುತ್ತಿದ್ದು, ಮನೆಯಲ್ಲಿ ನೆಮ್ಮದಿಯಾಗಿ ಇರಲು ಬಿಡುತ್ತಿಲ್ಲ ಎಂದಿದ್ದಾಳೆ. ಈ ಹಿನ್ನೆಲೆ ಮಹಿಳೆಯ ದೂರಿನ ಮೇರೆಗೆ ಶನಿವಾರ ತಡರಾತ್ರಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಜೈಲಿಗೆ ಕಳುಹಿಸಿದ್ದಾಗಿ ತಿಳಿಸಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
