ಅಗರ್ತಲಾ:ಐದು ತಿಂಗಳ ಹಿಂದೆಯಷ್ಟೇ ಗಂಡನನ್ನು ಕಳೆದುಕೊಂಡು, ಬಡತನದಲ್ಲಿ ಬಳಲುತ್ತಿರುವ ತ್ರಿಪುರಾದ ಧಲೈ ಜಿಲ್ಲೆಯ ಬುಡಕಟ್ಟು ಮಹಿಳೆಯೊಬ್ಬರು ತನ್ನ ನವಜಾತ ಶಿಶುವನ್ನು 5,000 ರೂ.ಗೆ ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಫೈನಲ್‌ಗೆ ಲಗ್ಗೆಯಿಟ್ಟ ಭಾರತದ ಹೆಮ್ಮೆಯ ಪಿವಿ ಸಿಂಧು..!
ತ್ರಿಪುರಾ ಜಿಲ್ಲೆಯ ಹೆಜಾಮತದ ದಂಪತಿ ಈ ನಾಲ್ಕು ದಿನದ ಹೆಣ್ಣು ಮಗುವನ್ನು ಖರೀದಿಸಿದ್ದರು. ವಿಷಯ ಗೊತ್ತಾದ ಕೂಡಲೇ ವಿರೋಧ ಪಕ್ಷದ ನಾಯಕ ಜಿತೇಂದ್ರ ಚೌಧರಿ ಅವರ ಮಧ್ಯಸ್ಥಿಕೆಯಲ್ಲಿ ಮಗುವನ್ನು ರಕ್ಷಿಸಿ ಪುನಃ ತಾಯಿ ಮಡಿಲನ್ನು ಸೇರಿಸಲಾಗಿದೆ.
ಗಂಡಚೆರ್ರಾ ಉಪವಿಭಾಗದ ತರಬನ್ ಕಾಲೋನಿಯ ಮೋರ್ಮತಿ ತ್ರಿಪುರ (39) ಬುಧವಾರ ಮನೆಯಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಐದು ತಿಂಗಳ ಹಿಂದೆ ತನ್ನ ಗಂಡನ ಮರಣದ ನಂತರ ತೀವ್ರ ಬಡತನವನ್ನು ಕಾಡುತ್ತಿತ್ತು. ಈಗಾಗಲೇ ಇಬ್ಬರು ಪುತ್ರರು ಮತ್ತು ಒಬ್ಬ ಮಗಳನ್ನು ಹೊಂದಿರುವ ಅವರಿಗೆ ಮತ್ತೊಂದು ಮಗುವಿನ ಪೋಷಣೆ ಆರ್ಥಿಕವಾಗಿ ಕಷ್ಟಕರವಾಗಿತ್ತು.
ಈ ಕಾರಣದಿಂದ ಹೆಜಾಮರದ ದಂಪತಿಗೆ 5,000 ರೂ.ಗೆ ಮಾರಿದ್ದರು ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಅರಿಂದಮ್ ದಾಸ್ ಹೇಳಿದರು. “ಈ ಪ್ರಕರಣ ಕುರಿತು ಮಾಹಿತಿ ಬಂದ ಕೂಡಲೇ ಮಗುವನ್ನು ರಕ್ಷಣೆ ಮಾಡಿ ಮತ್ತೆ ತಾಯಿಯೊಂದಿಗೆ ಸೇರಿಸಲಾಗಿದೆ. ಕುಟುಂಬಕ್ಕೆ ನಿರಂತರ ನೆರವಿನ ಭರವಸೆ ನೀಡಿದರು.
ತೀವ್ರ ಬಡತನದ ಕಾರಣದಿಂದ ತನ್ನ ನವಜಾತ ಶಿಶುವನ್ನು ಮಾರಾಟ ಮಾಡಿರುವುದಾಗಿ ಮಹಿಳೆ ತಪ್ಪೊಪ್ಪಿಕೊಂಡ ವಿಡಿಯೋವನ್ನು ಹಂಚಿಕೊಂಡಿದ್ದಾರೆ, ಮುಖ್ಯ ಕಾರ್ಯದರ್ಶಿ ಜೆಕೆ ಸಿಂಗ್ ಶುಕ್ರವಾರ ತಕ್ಷಣ ಕ್ರಮ ಕೈಗೊಳ್ಳುವಂತೆ ಪ್ರೇರೇಪಿಸಿದರು.
ಉರುವಲು ಮಾರುವ ಮೂಲಕ ಸಂಸಾರ ನಡೆಸುತ್ತಿದ್ದ ಮೋರ್ಮತಿ ಅವರ ಪತಿ ಪೂರ್ಣಾಜೋಯ್ ಅವರು ಅನಾರೋಗ್ಯದಿಂದ ಮೃತಪಟ್ಟಿದ್ದರು. ಅವರಿಗೆ ಆರ್ಥಿಕ ಸಂಕಷ್ಟ ಕೂಡ ಇತ್ತು, ಇಷ್ಟು ಬಡತನ ಇದ್ದರು ಆ ಕುಟುಂಬದ ಬಳಿ ಬಿಪಿಎಲ್​ ಪಡಿತರ ಚೀಟಿ ಇಲ್ಲ ಎಂದು ಹೊಂದಿಲ್ಲ ವಿರೋಧ ಪಕ್ಷದ ನಾಯಕ ಜಿತೇಂದ್ರ ಚೌಧರಿ ಬೇಸರ ವ್ಯಕ್ತಪಡಿಸಿದರು.
ಧ್ರುವ ಸರ್ಜಾ ಪ್ಯಾನ್ ಇಂಡಿಯಾ ‘ಮಾರ್ಟಿನ್’ ಬಿಡುಗಡೆ ದಿನಾಂಕ ಘೋಷಣೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 − one =
Remember me
