ಚೆನ್ನೈ:ಸ್ಯಾಂಡಲ್​ವುಡ್​​ ಸೇರಿದಂತೆ ಸೌತ್​ ಸಿನಿ ಇಂಡಸ್ಟ್ರಿಯಲ್ಲಿ ಮೋಸ್ಟ್​ ಎಲಿಜಬಲ್​ ಬ್ಯಾಚುಲರ್​ ಆಗಿ ಉಳಿದುಕೊಂಡಿರುವ ನಟಿ ಎಂದರೆ ಮೊದಲಿಗೆ ಕೇಳಿಬರುವ ಹೆಸರು ತ್ರಿಶಾ ಅವರದ್ದು. ಇನ್ನೂ ನಟಿ ತ್ರಿಶಾ ಮಲಯಾಳಂನ ಖ್ಯಾತ ನಿರ್ಮಾಪಕರೊಬ್ಬರನ್ನು ವಿವಾಹವಾಗಲಿದ್ದಾರೆ ಎಂಬ ವದಂತಿಗಳು ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಇದರ ಬೆನ್ನಲ್ಲೇ ಇದೀಗ ಸ್ವತಃ ನಟಿಯೇ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಉತ್ತರಿಸುವ ಮುಖೇನ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪ್ರತಿಕ್ರಿಯಿಸಿರುವ ನಟಿ ತ್ರಿಶಾ ಪ್ರಿಯರೇ ನೀವು ಯಾರು, ಏನೆಂದು ನನಗೆ ತಿಳಿದಿದೆ. ಶಾಂತವಾಗಿರಿ ಮತ್ತು ವದಂತಿಗಳನ್ನು ಹಬ್ಬಿಸುವುದನ್ನು ನಿಲ್ಲಿಸಿ ಎಂದು ಬರೆದುಕೊಂಡಿದ್ದಾರೆ. ನಟಿಯ ಪೋಸ್ಟ್​ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಪ್ರತಿಕ್ರಿಯಿಸಿದ್ದು, ನಿಮ್ಮನ್ನು ಕಂಡರೆ ಆಗಲಿಲ್ಲದವರು ಈ ರೀತಿಯ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ:ಮುಸ್ಲಿಂ ವಿರೋಧಿ ಹೇಳಿಕೆ; ಕ್ರಮ ಕೈಗೊಳ್ಳದಿದ್ದರೆ ಸಂಸತ್​ ಸ್ಥಾನ ತ್ಯಜಿಸುವೆ: ಡ್ಯಾನಿಶ್​ ಅಲಿ
ಇನ್ನೂ ತ್ರಿಷಾ ಅವರ ಮದುವೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಹರಿದಾಡುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ತ್ರಿಷಾ, ಉದ್ಯಮಿ ಮತ್ತು ನಿರ್ಮಾಪಕ ವರುಣ್ ಮಣಿಯನ್ ಅವರೊಂದಿಗೆ ಖಾಸಗಿ ಸಮಾರಂಭದಲ್ಲಿ ಆಪ್ತರು, ಸಂಬಂಧಿಕರು ಮತ್ತು ಸ್ನೇಹಿತರ ಜೊತೆ ನಿಶ್ಚಿತಾರ್ಥ ಮಾಡಿಕೊಂಡರು. ಆದರೆ, ಅಜ್ಞಾತ ಕಾರಣಗಳಿಂದ ಈ ಮದುವೆ ನಡೆಯಲಿಲ್ಲ ಎಂದು ಸುದ್ದಿಯಾಗಿತ್ತು. ಅಲ್ಲದೆ, ನಟ ರಾಣಾ ದಗ್ಗುಬಾಟಿ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವರದಿಗಳೂ ಬಂದಿದ್ದವು.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮದುವೆಯ ಬಗ್ಗೆ ಕೇಳಿದಾಗ, ತ್ರಿಷಾ ತಾನು ಯಾವುದೇ ಆಲೋಚನೆ ಮಾಡಿಲ್ಲ ಎಂದು ಹೇಳಿದ್ದರು. ಸಾಮಾಜಿಕ ಒತ್ತಡದಲ್ಲಿ ಮದುವೆಯಾಗುವುದನ್ನು ಮತ್ತು ನಂತರ ವಿಚ್ಛೇದನದ ಪಡೆಯುವುದನ್ನು ಬಯಸುವುದಿಲ್ಲ ಎಂದು ಹೇಳಿದ್ದರು. ತಾನು ಮದುವೆಯಾಗುವ ಆದರ್ಶ ಸಂಗಾತಿ ಇನ್ನೂ ಸಿಕ್ಕಿಲ್ಲ ಎಂದು ತ್ರಿಷಾ ಸ್ಪಷ್ಟಪಡಿಸಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + ten =
Remember me
