ನವದೆಹಲಿ:ಕಳೆದ 30 ವರ್ಷಗಳ ಹಿಂದೆ ಪ್ರಸಾರವಾಗುತ್ತಿದ್ದ ರಾಮಾಯಣ ಮತ್ತು ಮಹಾಭಾರತ ಧಾರಾವಾಹಿ ಇಂದಿನಿಂದ ಮತ್ತೆ ಡಿಡಿ ನ್ಯಾಷನಲ್​​ನಲ್ಲಿ ಪ್ರಸಾರವಾಗುತ್ತಿದೆ.
ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಕೋಟ್ಯಂತರ ಜನರಿಗೆ ಮನೆ ಬಿಟ್ಟು ಹೋಗದ ಸ್ಥಿತಿ ಎದುರಾಗಿದೆ. ಅಂತಹವರಿಗೆ ಮನರಂಜನೆ ನೀಡುವ ಉದ್ದೇಶದಿಂದ ಧಾರಾವಾಹಿಗಳನ್ನು ಡಿಡಿ ನ್ಯಾಷನಲ್​​ನಲ್ಲಿ ಮರುಪ್ರಸಾರ ಮಾಡಲಾಗುತ್ತಿದೆ. ಬೆಳಗ್ಗೆ 9ಕ್ಕೆ ರಾಮಾಯಣ ಮತ್ತು ಸಂಜೆ 7ಗಂಟೆಗೆ ಮಹಾಭಾರತ ಧಾರಾವಾಹಿ ಪ್ರಸಾರವಾಗಲಿದೆ. ಈ ಬಗ್ಗೆ ಶುಕ್ರವಾರ ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವ ಪ್ರಕಾಶ್​ ಜಾವಡೇಕರ್​ ಟ್ವೀಟ್​ ಮಾಡಿ ತಿಳಿಸಿದ್ದರು.
ಆದರೆ ಶನಿವಾರ ಕೇಂದ್ರ ಸಚಿವರು ಶನಿವಾರ ಟ್ವೀಟ್​ವೊಂದನ್ನು ಮಾಡಿ, ನೆಟ್ಟಿಗರಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಬಳಿಕ ಆ ಟ್ವಿಟರ್​ ಪೋಸ್ಟ್​ನ್ನು ಅವರು ಡಿಲೀಟ್​ ಮಾಡಿದ್ದಾರೆ.
ಇಂದು ಬೆಳಗ್ಗೆ 9.41ರ ಹೊತ್ತಿಗೆ ಜಾವಡೇಕರ್​ ಒಂದು ಫೋಟೋವನ್ನು ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ್ದರು. ತಾವು ಡಿಡಿ ನ್ಯಾಷನಲ್​ ಪ್ರಸಾರವಾಗುತ್ತಿದ್ದ ರಾಮಾಯಣ ಪೌರಾಣಿಕ ಧಾರಾವಾಹಿಯನ್ನು ನೋಡುತ್ತಿರುವ ಫೋಟೋವನ್ನು ಟ್ವಿಟರ್​ನಲ್ಲಿ ಪೋಸ್ಟ್ ಮಾಡಿ, ನಾನು ರಾಮಾಯಣ ವೀಕ್ಷಿಸುತ್ತಿದ್ದೇನೆ…ನೀವು? ಎಂದು ಕ್ಯಾಪ್ಷನ್​ ಹಾಕಿದ್ದರು.
ಆದರೆ ಅವರ ಪೋಸ್ಟ್​ಗೆ ಬಹುತೇಕ ನೆಗೆಟಿವ್​ ಕಾಮೆಂಟ್​ಗಳೇ ಬಂದಿವೆ. ಅನೇಕರು ಆ ಟ್ವೀಟ್​ನ ರೀಟ್ವೀಟ್ ಮಾಡಿಕೊಂಡು ಸಚಿವರ ವಿರುದ್ಧ ಕಿಡಿಕಾರಿದ್ದಾರೆ.
ಎಲ್ಲೆಲ್ಲೂ ಲಾಕ್​ಡೌನ್​ ಇದೆ. ಅದೆಷ್ಟೋ ಜನರಿಗೆ ಊಟ-ತಿಂಡಿ ಸಿಗುತ್ತಿಲ್ಲ, ನೀವು ರಾಮಾಯಣ, ಮಹಾಭಾರತ ನೋಡಿಕೊಂಡು ಕಾಲಕಳೆಯುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಪ್ರಕಾಶ್​ ಜಾವಡೇಕರ್​ ಟ್ವೀಟ್​ಗೆ ಪ್ರತಿಯಾಗಿ ವಲಸಿಗರು ರಾತ್ರೋರಾತ್ರಿ ನಡೆದುಕೊಂಡೇ ಒಂದು ಸ್ಥಳದಿಂದ, ಇನ್ನೊಂದು ಸ್ಥಳಕ್ಕೆ ಹೋಗುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿದ ಟ್ವಿಟರ್ ಬಳಕೆದಾರನೋರ್ವ..ಸಚಿವರೇ ನಾವು ಈ ರಾಮಾಯಣವನ್ನು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ರಾಮಾಯಣದ ಜತೆಗೆ ಮಹಾಭಾರತ ಪ್ರಸಾರವೂ ಶುರು; ಪ್ರತಿದಿನ ಮಧ್ಯಾಹ್ನ 12 ಮತ್ತು ಸಂಜೆ 7ಕ್ಕೆ
ಹೀಗೆ ಅನೇಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಂತೆ ಪ್ರಕಾಶ್​ ಜಾವ್ಡೇಕರ್​ ತಮ್ಮ ಟ್ವೀಟ್​ನ್ನು ಡಿಲೀಟ್ ಮಾಡಿದ್ದಾರೆ.ಸ್ವಲ್ಪ ಹೊತ್ತಿನ ನಂತರ ಮತ್ತೊಂದು ಟ್ವೀಟ್​ ಮಾಡಿ, ತಾವು ಮನೆಯಿಂದಲೇ ಕೆಲಸ ಮಾಡುತ್ತಿರುವ ಫೋಟೋ ಪೋಸ್ಟ್ ಮಾಡಿದ್ದಾರೆ. ಲಾಕ್​ಡೌನ್​ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಪೂರೈಕೆಗೆ ಸಂಬಂಧಪಟ್ಟಂತೆ ನನ್ನ ಇಲಾಖೆಯ ಕಾರ್ಯಗಳನ್ನು ಮನೆಯಲ್ಲೇ ಕುಳಿತು ಮಾಡುತ್ತಿದ್ದೇನೆ, ಅಧಿಕಾರಿಗಳೊಂದಿಗೆ ಫೋನ್​ನಲ್ಲಿ ಕೋ ಆರ್ಡಿನೇಟ್​ ಮಾಡುತ್ತಿದ್ದೇನೆ. ನನಗೀಗ ಮನೆಯೇ ಕಚೇರಿಯಾಗಿದೆ ಎಂದು ಕ್ಯಾಪ್ಷನ್​ ಬರೆದಿದ್ದಾರೆ. (ಏಜೆನ್ಸೀಸ್​)

Yes sir@PrakashJavdekar, we are watching Ramayana, Lanka lagi hui system ki.pic.twitter.com/Dfbw53uKoK
— Rofl Gandhi 2.0 🏹 (@RoflGandhi_)March 28, 2020


First hunger death. Eleven year old Rahul Musahar.It’s ok@PrakashJavdekar..Let's watch Ramayan on TV#DDNational#Ramayana#21daysLockdown#CoronaChainScarepic.twitter.com/1YxK8vbxSf
— Rajeev Jain ✋ (@gallerygrandeur)March 28, 2020

Home has become office ! Connecting and coordinating with Officers of my Ministries for facilitation during the lockdown!#StayHomeStaySafe#IndiaFightsCorona#WashYourHandspic.twitter.com/NHM4bInUr5
— Prakash Javadekar (@PrakashJavdekar)March 28, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
