ಹೈದರಾಬಾದ್​:ಸುಮಾರು 30 ಕುರಿಮರಿಗಳನ್ನು 20 ಮಂಗಗಳು ಸೇರಿ ಕೊಂದ ಘಟನೆ ತೆಲಂಗಾಣದ ಸೂರ್ಯಪೇಟ್​​ನಲ್ಲಿ ನಡೆದಿದೆ.
ಇವೆಲ್ಲವೂ ಚಿಂತಲಪಾಲೆಂ ಮಂಡಲದಲ್ಲಿರುವ ಶೋಬಾನಾದ್ರಿಗುಡಂ ಎಂಬ ಹಳ್ಳಿಯ ನಿವಾಸಿಯಾದ ತೊಕಲಾ ಸೈದುಲು ಎಂಬುವರಿಗೆ ಸೇರಿದ್ದಾಗಿದ್ದವು. ಈತ ತನ್ನ ಕುರಿಗಳನ್ನು ಮೇಯಲು ಹಳ್ಳಿಯ ಹೊರವಲಯದಲ್ಲಿರುವ ಹೊಲದಲ್ಲಿ ಬಿಡುತ್ತಿದ್ದ. ಆದರೆ ಮರಿಗಳನ್ನು ಕಳಿಸುತ್ತಿರಲಿಲ್ಲ. ಮನೆಯಲ್ಲಿ ನಿರ್ಮಿಸಿದ ಶೆಡ್​ನಲ್ಲೇ ಇರುತ್ತಿದ್ದವು.
ಹೀಗೆ ಒಂದು ದಿನ ಸೈದುಲು ಕುರಿಗಳನ್ನು ಮೇಯಿಸಲು ಹೊಲಕ್ಕೆ ಹೋಗಿದ್ದಾಗ, ಇತ್ತ ಸುಮಾರು 20 ಮಂಗಗಳು ಅವನ ಮನೆಯ ಶೆಡ್​​ಗೆ ಲಗ್ಗೆಯಿಟ್ಟು, ಕುರಿಮರಿಗಳ ಮೇಲೆ ದಾಳಿ ಮಾಡಿ, ಕೊಂದು ಹಾಕಿವೆ. ಒಟ್ಟು 30 ಕುರಿಮರಿಗಳು ಕೋತಿಗಳಿಂದಾಗಿ ಪ್ರಾಣಕಳೆದುಕೊಂಡಿವೆ.ಇದನ್ನೂ ಓದಿ:video/ ಸಂಗಾತಿ ಜತೆ ರಮಿಸೋದನ್ನು ಬಿಟ್ಟು ಕೋಳಿ ಜತೆ ಕಾಳಗಕ್ಕಿಳಿದ ಮಯೂರ!
ಅಕ್ಕಪಕ್ಕದ ಮನೆಯವರು ಕೋತಿಗಳನ್ನು ನೋಡಿದ್ದಾರೆ. ಅವುಗಳನ್ನು ಓಡಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಕುರಿಮರಿಗಳ ರಕ್ಷಣೆಗಾಗಿ ಶೆಡ್​ಗೆ ಹೋದರೂ ಕೂಡ ಮಂಗಗಳ ಕ್ರೌರ್ಯ ಮಿತಿಮೀರಿತ್ತು. ಹತ್ತಿರ ಹೋಗಲು ಅವು ಅಸ್ಪದ ಕೊಡಲಿಲ್ಲ ಎಂದು ನೆರೆಹೊರೆಯವರು ತಿಳಿಸಿದ್ದಾರೆ.
ಇತ್ತೀಚೆಗೆ ಒಂದು ದಿನ ಖಮ್ಮಮ್ ಜಿಲ್ಲೆಯ ಅಮ್ಮಾಪಾಲೆಮ್​ ಗ್ರಾಮದಲ್ಲಿ ಆಹಾರ ಹುಡುಕಿ ಬಂದ ಮಂಗಗಳನ್ನು ನೇಣು ಹಾಕಿ ಕೊಂದಿದ್ದರು. (ಏಜೆನ್ಸೀಸ್​)
VIDEO: ಹೊತ್ತಿ ಉರಿಯುತ್ತಿದ್ದ ಅಪಾರ್ಟ್​ಮೆಂಟ್​ನ ಕಿಟಕಿಯಿಂದ ಹಾರಿದ ಇಬ್ಬರು ಮಕ್ಕಳು; ಮುಂದೇನಾಯ್ತು ನೋಡಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:16 − 8 =
Remember me
