| ಶ್ರೀಕಾಂತ್ ಶೇಷಾದ್ರಿ ಬೆಂಗಳೂರುಲೋಕಸಭೆ ಚುನಾವಣೆ ದೃಷ್ಟಿಯಿಂದ ವಿಪಕ್ಷಗಳೆಲ್ಲ ಸೇರಿಕೊಂಡು ರಚಿಸಿಕೊಂಡಿರುವ ‘ಐಎನ್​ಡಿಐಎ’ ಒಕ್ಕೂಟದ ಪ್ರಮುಖ ಸದಸ್ಯ ದ್ರಾವಿಡ ಮುನ್ನೇತ್ರ ಕಳಗಮ್ ನಡೆಗಳು ರಾಜ್ಯ ಕಾಂಗ್ರೆಸ್ ಪಾಲಿಗೆ ಮೂರು ವಿಷಯಗಳಲ್ಲಿ ಉಭಯ ಸಂಕಟ ತಂದೊಡ್ಡುತ್ತಿದೆ.
ತಮಿಳುನಾಡಿನಲ್​ವಿಧಾನಸಭೆಯಲ್ಲಿ ಡಿಎಂಕೆ ಜತೆ ಕಾಂಗ್ರೆಸ್ ಚುನಾವಣೆ ಮೈತ್ರಿ ಹೊಂದಿ ಗಟ್ಟಿಯಾಗಿ ಗೆಳೆತನ ಹೊಂದಿದೆ. ಹೀಗಾಗಿ ನಾಡಿನ ವಿಚಾರ ಬಂದಾಗ ಪ್ರತಿರೋಧಿಸಲು ಕಷ್ಟವಾದ ಸನ್ನಿವೇಶವಿದೆ. ಕಾವೇರಿ ನದಿ ನೀರು, ಮೇಕೆದಾಟು ಜಲಾಶಯ ನಿರ್ವಣ, ಹೊಸೂರಿಗೆ ನಮ್ಮ ಮೆಟ್ರೋ ವಿಷಯದಲ್ಲಿ ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರದ ಹಠಮಾರಿ ಧೋರಣೆ ರಾಜ್ಯ ಸರ್ಕಾರಕ್ಕೆ ಅರಗಿಸಿಕೊಳ್ಳಲಾಗುತ್ತಿಲ್ಲ. ಆದರೂ ಕಾವೇರಿ ವಿಚಾರದಲ್ಲಿ ನೀರು ಬಿಡಲು ಸಾಧ್ಯವಿಲ್ಲವೆಂದೇ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳಿಬ್ಬರು ತಿರುಗೇಟು ನೀಡಿದ್ದಾರೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಕೊರತೆಯಿಂದ ಕಾವೇರಿ ನದಿ ನೀರನ್ನು ನಿರ್ದಿಷ್ಟ ಪ್ರಮಾಣದಲ್ಲಿ ತಮ್ಮ ರಾಜ್ಯಕ್ಕೆ ಹರಿಸಿಲ್ಲ ಎಂದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ರಾಜ್ಯದ ಮೇಲೆ ಒತ್ತಡ ತರುತ್ತಿದೆ.
ನೀರಿನ ವಿಚಾರಕ್ಕೆ ಬಂದಾಗ, ತಮಿಳುನಾಡಿನ ಮೆಟ್ಟೂರು ಡ್ಯಾಮ್ಲ್ಲಿ ಈ ವರ್ಷ 83.831 ಟಿಎಂಸಿ ನೀರಿದ್ದು, ಆ ರಾಜ್ಯದ ಕುರುವೈ ಬೆಳೆಗೆ 32 ಟಿಎಂಸಿ ಬಳಸಬೇಕು. ಆದರೆ, ಆಗಸ್ಟ್ ಮೊದಲ ವಾರದ ಅಂತ್ಯಕ್ಕೆ 60.97 ಟಿಎಂಸಿ ನೀರು ಕುರುವೈ ಬೆಳೆಗೆ ಬಳಸಲಾಗಿದೆ. ಈ ಸಂಗತಿಯನ್ನು ರಾಜ್ಯ ಸರ್ಕಾರ ಎತ್ತಿ ಹಿಡಿಯಬೇಕಾಗುತ್ತದೆ. ರಾಜಕೀಯ ಸ್ನೇಹಿತನ ವಿರುದ್ಧ ದನಿ ಎತ್ತಿದರೆ ಬೇರೆ ರೀತಿ ಪರಿಣಾಮ ಬೀರಬಹುದೆಂಬ ಅಳುಕೂ ರಾಜ್ಯದ ಆಡಳಿತ ಪಕ್ಷಕ್ಕಿದೆ.
ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಡ್ಯಾಮ್ಳ ಪ್ರಸ್ತುತ ನೀರಿನ ಮಟ್ಟ ಗಮನಿಸಿದರೆ ಬೆಂಗಳೂರು ನಗರ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ನಗರ ಮತ್ತು ಗ್ರಾಮಗಳ ಕುಡಿಯುವ ನೀರಿಗೆ ಕೊರತೆಯಾಗುತ್ತದೆ. ಹೀಗಾಗಿ ಈ ಅಂಶವನ್ನು ತನ್ನ ‘ರಾಜಕೀಯ ಸ್ನೇಹಿತ’ನಿಗೆ ಅರ್ಥ ಮಾಡಿಸುವ ಅನಿವಾರ್ಯತೆ ಕಾಂಗ್ರೆಸ್​ಗಿದೆ.
ಒಂದೊಮ್ಮೆ, ರಾಜಕೀಯ ಸ್ನೇಹಕ್ಕೆ ಮಣೆ ಹಾಕಿದರೆ ಕಾವೇರಿ ಜಲಾನಯನ ಭಾಗದಲ್ಲಿ ನೀರಿನ ಕೊರತೆ ಎದುರಿಸುವ ಜತೆ ಸಾಲುಸಾಲು ಚುನಾವಣೆ ಹೊತ್ತಲ್ಲಿ ಜನರ ಆಕ್ರೋಶಕ್ಕೂ ತುತ್ತಾಗಬೇಕಾಗುತ್ತದೆ.
ಎರಡನೇಯ ಸಂಗತಿ ಎಂದರೆ ಮೇಕೆದಾಟು ಯೋಜನೆ ವಿಷಯದಲ್ಲಿ ತಮಿಳುನಾಡು ಮನವೊಲಿಕೆ ಅನಿವಾರ್ಯ. ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಮೇಕೆದಾಟು ಯೋಜನೆ ಜಾರಿ ಮಾಡಿಯೇ ತೀರುವುದಾಗಿ ಹೇಳಿಕೊಂಡು ಬಂದಿದ್ದಾರೆ. ಅವರೇ ಜಲಸಂಪನ್ಮೂಲ ಸಚಿವರೂ ಆಗಿದ್ದಾರೆ. ಈ ಯೋಜನೆ ಜಾರಿಯಿಂದ ತಮಿಳುನಾಡಿಗೆ ಯಾವುದೇ ತೊಂದರೆಯಾಗಲ್ಲ ಎಂಬ ಸಂಗತಿಯನ್ನು ಮನವರಿಕೆ ಮಾಡಿ ಕೊಡುವ ಹೊಣೆಗಾರಿಕೆಯೂ ಡಿ.ಕೆ. ಶಿವಕುಮಾರ್ ಹೆಗಲೇರಿದೆ. ತನ್ನ ರಾಜಕೀಯ ಲೆಕ್ಕಾಚಾರದಲ್ಲಿ ಈ ಬೇಡಿಕೆಗೆ ಒಪ್ಪಿದರೆ ಡಿಎಂಕೆಗೆ ತನ್ನ ನೆಲೆಯಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ. ಜತೆಗೆ ಅಷ್ಟು ಸಲೀಸಾಗಿ ಒಪ್ಪಿಕೊಳ್ಳುವ ಮನಸ್ಥಿತಿಯಲ್ಲೂ ಡಿಎಂಕೆ ನಾಯಕರಿಲ್ಲ.
ಮೂರನೇ ಸಂಗತಿ ನಮ್ಮ ಮೆಟ್ರೋ ರೈಲು ಯೋಜನೆಯನ್ನು ಹೊಸೂರಿಗೆ ವಿಸ್ತರಿಸಿಕೊಳ್ಳಲು ತಮಿಳುನಾಡು ಸರ್ಕಾರ ವಿಶೇಷ ಆಸಕ್ತಿ ವಹಿಸಿದೆ. ಆ ರಾಜ್ಯಕ್ಕೆ ಸೇರಿದ ಮತ್ತು ಬೆಂಗಳೂರಿಗೆ ಹೊಂದಿಕೊಂಡಂತೆ ಇರುವ ಹೊಸೂರಿಗೆ ಮೆಟ್ರೋ ರೈಲು ವಿಸ್ತರಣೆಗೊಂಡರೆ ತಮಿಳುನಾಡಿಗೆ ಹೂಡಿಕೆ ಬರಲಿದೆ ಎಂಬ ಲೆಕ್ಕಾಚಾರವಿದೆ. ಈಗಾಗಲೇ ಮೆಟ್ರೋ ವಿಸ್ತರಣೆ ಸಂಬಂಧ ತಮಿಳುನಾಡು ಸರ್ಕಾರ ಕೇಂದ್ರ ಮಟ್ಟದಲ್ಲಿ ದೊಡ್ಡ ಲಾಬಿ ನಡೆಸಿದೆ. ಯೋಜನೆ ವಿಸ್ತರಣೆಯ ಬಗ್ಗೆ ಸಾಧ್ಯತಾ ವರದಿಗೆ ತಾತ್ವಿಕ ಒಪ್ಪಿಗೆಯನ್ನೂ ಪಡೆದುಕೊಂಡಿದೆ. ನಮ್ಮ ಮೆಟ್ರೋ ಮಾರ್ಗದಿಂದ 11 ಕಿಲೋ ಮೀಟರ್ ವಿಸ್ತರಣೆಗೊಂಡರೆ ನೆರೆಯ ತಮಿಳುನಾಡು ಗಡಿ ದಾಟಲಿದೆ. ಈ ವಿಸ್ತರಿತ ಯೋಜನೆಗೆ ತಾನೂ ಹಣ ಹಾಕುವುದಾಗಿ ಆ ಸರ್ಕಾರ ತುದಿಗಾಲಲ್ಲಿ ನಿಂತಿದೆ.
ಒಂದು ವೇಳೆ ತಮಿಳುನಾಡಿಗೆ ಮೆಟ್ರೋ ವಿಸ್ತರಣೆಗೊಂಡರೆ ಕರ್ನಾಟಕಕ್ಕೆ ಪ್ರಯೋಜನ ಎಳ್ಳಷ್ಟೂ ಇರದು. ಬೆಂಗಳೂರು ಸುತ್ತಮುತ್ತ ಸ್ಥಾಪನೆಯಾಗಬೇಕಾದ ಅನೇಕ ಯೋಜನೆಗಳು ಸಹಜವಾಗಿ ನೆರೆಯ ಹೊಸೂರಿಗೆ ವರ್ಗವಾಗುವ ಸಾಧ್ಯತೆಗಳೇ ಹೆಚ್ಚು. ಹೀಗಾಗಿ ರಾಜ್ಯ ಸರ್ಕಾರ ತನ್ನ ನಿಲುವನ್ನು ಅಚಲಗೊಳಿಸಿಕೊಳ್ಳಬೇಕಾಗಿದೆ. ಈ ವರೆಗೂ ಕರ್ನಾಟಕ ಸರ್ಕಾರದ ಕಡೆಯಿಂದ ಈ ಬಗ್ಗೆ ಸ್ಪಷ್ಟನೆ ಬಂದಿಲ್ಲ.
ಒಟ್ಟಾರೆ ಈ ಮೂರು ವಿಷಯದಲ್ಲಿ ರಾಜ್ಯ ಸರ್ಕಾರದ ಸ್ಪಷ್ಟತೆ ಏನೆಂಬುದು ಪ್ರಮುಖವಾಗಲಿದೆ. ಈ ವಿಷಯದಲ್ಲಿ ತಡಮಾಡುವಂತೆಯೂ ಇಲ್ಲ. ಒಂದು ವೇಳೆ ರಾಜಕೀಯ ಲೆಕ್ಕಾಚಾರದಲ್ಲಿ ಮೃದು ಧೋರಣೆ ಅನುಸರಿಸಿದರೆ ನಾಡಿನ ಮೇಲೆ ದೂರದೃಷ್ಟಿಯ ಪರಿಣಾಮ ಬೀರಲಿದೆ.
ಕರ್ನಾಟಕದ ಜಲಾಶಯಗಳಲ್ಲಿ ಸಾಕಷ್ಟು ನೀರಿದೆ. ಶೇ.82ರಷ್ಟು ಸಂಗ್ರಹವಿದೆ. ಕರ್ನಾಟಕಕ್ಕೆ ನೀರಿನ ಕೊರತೆ ಇಲ್ಲ. ಆದರೆ ನೀರು ಬಿಡಲು ಮನಸ್ಸು ಮಾಡುತ್ತಿಲ್ಲ.
| ದೊರೈಮುರುಗನ್, ತಮಿಳುನಾಡು ಜಲಸಂಪನ್ಮೂಲ ಸಚಿವ
ತಮಿಳುನಾಡು ವಾದವೇನು?:ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕಳೆದ ವಾರ ನೀಡಿದ್ದ ಸೂಚನೆಯನ್ನು ಕರ್ನಾಟಕ ಪಾಲಿಸಿಲ್ಲ. ತನ್ನ ರಾಜ್ಯದಲ್ಲಿ ಬೆಳೆಗಾಗಿ ತಕ್ಷಣದಿಂದಲೇ 24 ಸಾವಿರ ಕ್ಯೂಸೆಕ್ ನೀರನ್ನು ತಕ್ಷಣವೇ ಬಿಡುಗಡೆ ಮಾಡಬೇಕು.
ರಾಜ್ಯದಲ್ಲಿ ಮಳೆ ಕೊರತೆ ಉಂಟಾಗಿದೆ. ತಮಿಳು ನಾಡು ಕೂಡ ಸಮಸ್ಯೆ ಅರ್ಥ ಮಾಡಿಕೊಳ್ಳಬೇಕು. ಕಷ್ಟವನ್ನು ಸಮಾನವಾಗಿ ಹಂಚಿಕೊಂಡು ಸಹಕರಿಸಬೇಕು.
| ಸಿದ್ದರಾಮಯ್ಯ ಮುಖ್ಯಮಂತ್ರಿ
ಮಂಡ್ಯ:ಕೆ.ಆರ್.ಸಾಗರ ಅಣೆಕಟ್ಟೆಯಲ್ಲಿ ಸೋಮವಾರ ರಾತ್ರಿಯಿಂದ ಹೊರಹರಿವು ಹೆಚ್ಚಳ ಮಾಡಲಾಗಿದೆ. 11,589 ಕ್ಯೂಸೆಕ್ ನೀರನ್ನು ಡ್ಯಾಂನಿಂದ ಹೊರಬಿಡಲಾಗಿದೆ. ಒಳಹರಿವು 4,753 ಕ್ಯೂಸೆಕ್ ಇದ್ದು, ಪ್ರಸ್ತುತ ಅಣೆಕಟ್ಟೆಯಲ್ಲಿ 111.80 ಅಡಿ (33.570 ಟಿಎಂಸಿ) ನೀರಿನ ಸಂಗ್ರಹವಿದೆ. ಸೋಮವಾರ ಬೆಳಗ್ಗೆ 7,500 ಕ್ಯೂಸೆಕ್ ಇದ್ದ ಹೊರಹರಿವಿನ ಪ್ರಮಾಣವನ್ನು ರಾತ್ರಿ ವೇಳೆಗೆ ಅಂದಾಜು 4 ಸಾವಿರ ಕ್ಯೂಸೆಕ್​ನಷ್ಟು ಹೆಚ್ಚಿಸಲಾಗಿದೆ. ಇದರಲ್ಲಿ 9 ಸಾವಿರ ಕ್ಯೂಸೆಕ್ ನದಿಗೆ ಅಂದರೆ, ತಮಿಳುನಾಡು ಪಾಲಿನ ನೀರು ಬಿಡಲಾಗುತ್ತಿದೆ. ನಾಲೆಗಳು ಮತ್ತು ಕುಡಿಯುವ ನೀರಿಗಾಗಿ 2,589 ಕ್ಯೂಸೆಕ್ ಹರಿಸಲಾಗುತ್ತಿದೆ.
ಸದ್ಯ ಈ ಬಿಯರ್ ಕುಡಿಯಬೇಡಿ!; ಸೆಡಿಮೆಂಟ್ ಶೇಖರಣೆ ಆಗಿರುವುದರಿಂದ ತಡೆ ಹಿಡಿದ ಅಬಕಾರಿ ಇಲಾಖೆ

ಹೇಗಿದೆ ನೋಡಿ ಕಾಕತಾಳೀಯ!: ಇಂದಿರುವುದೂ ಸ್ವಾತಂತ್ರ್ಯ ಸಿಕ್ಕಿದ್ದ ದಿನದಂದು ಇದ್ದ ತಿಥಿ-ನಕ್ಷತ್ರವೇ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + ten =
Remember me
