ಪುಣೆ:ಊಟ ನೀಡಿಲು ನಿರಾಕರಿಸಿದ ಕಾರಣ ಸಿಟ್ಟಿಗೆದ್ದ ಚಾಲಕ ಟ್ರಕ್​ನಿಂದ ಹೋಟೆಲ್​​ಗೆ ಡಿಕ್ಕಿ ಹೊಡೆದಿರುವ ಘಟನೆ ಮಹಾರಾಷ್ಟ್ರದ ಇಂಡಾಪುರ ತಾಲೂಕಿನಲ್ಲಿ ನಡೆದಿದೆ. ಹೋಟೆಲ್​ ಹೊರಗಿದ್ದ ಕೆಲವು ಜನರ ಈ ದೃಶ್ಯವನ್ನು ರೆಕಾರ್ಡ್​ ಮಾಡಿದ್ದು ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.
ಇದನ್ನು ಓದಿ:ರೀಲ್ಸ್​​ ಹುಡುಗ ಆದ ರಿಯಲ್​ ಹೀರೋ; ವೈರಲ್​ ವಿಡಿಯೋಗೆ ಮೆಚ್ಚುಗೆಯ ಮಹಾಪೂರ
ವೈರಲ್​ ವಿಡಿಯೋದಲ್ಲಿ ಆತ ಪದೇಪದೆ ತನ್ನ ಟ್ರಕ್​ನಿಂದ ಹೋಟೆಲ್ ಕಟ್ಟಡಕ್ಕೆ ಡಿಕ್ಕಿ ಹೊಡೆಯುತ್ತಿರುವುದನ್ನು ಕಾಣಬಹುದಾಗಿದೆ. ಅಲ್ಲದೆ ಅದೇ ಸಿಟ್ಟಿನಲ್ಲಿ ಹೋಟೆಲ್​ ಹೊರಗೆ ನಿಲ್ಲಿಸಿದ್ದ ಕಾರಿಗೂ ಡಿಕ್ಕಿ ಹೊಡೆಯುತ್ತಿರುವುದನ್ನು ನೋಡಬಹುದಾಗಿದೆ. ಚಾಲಕ ಮದ್ಯ ಸೇವಿಸಿದ್ದ ಎಂದು ಹೇಳಲಾಗುತ್ತಿದೆ.
VIDEO | Maharashtra: A truck driver rammed his vehicle into a hotel building in#Puneafter he was reportedly denied food. The truck driver was allegedly drunk. The incident took place on Friday night.#PuneNews#maharashtranews(Source: Third Party)(Full video available on…pic.twitter.com/TrPEF1ZxrA
ಚಾಲಕ ಸೊಲ್ಲಾಪುರದಿಂದ ಪುಣೆಗೆ ಪ್ರಯಾಣಿಸುತ್ತಿದ್ದು ಜನನಿಬಿಡ ಪುಣೆ-ಸೋಲಾಪುರ ಹೆದ್ದಾರಿಯಲ್ಲಿರುವ ಹೋಟೆಲ್‌ನಲ್ಲಿ ನಿಲ್ಲಿಸಿದ್ದಾನೆ. ನಂತರ ಆತ ಹೋಟೆಲ್ ಒಳಗೆ ಹೋಗಿ ಆಹಾರ ಕೇಳಿದ್ದಾನೆ. ಆದರೆ ದಿನಪೂರ್ತಿ ಉಪಾಹಾರ ಗೃಹವನ್ನು ಮುಚ್ಚಿದ್ದರಿಂದ ಮಾಲೀಕರು ಊಟ ನೀಡಲು ನಿರಾಕರಿಸಿದ್ದಾರೆ. ಅಷ್ಟರಲ್ಲಾಗಲೇ ಮದ್ಯ ಸೇವಿಸಿದ್ದ ಚಾಲಕ ಕೋಪಗೊಂಡು ತನ್ನ ಲಾರಿಯಲ್ಲಿ ಕುಳಿತು ಹೋಟೆಲ್​​ ಕಟ್ಟಡಕ್ಕೆ ಹಾನಿ ಮಾಡಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಚಾಲಕನನ್ನು ತಡೆಯಲು ಸ್ಥಳೀಯರು ಯತ್ನಿಸಿದ್ದಾರೆ. ಅವರ ಮಾತನ್ನು ಕೇಳದಿದ್ದಾಗ ಅಲ್ಲಿದ್ದ ಕೆಲವರು ಟ್ರಕ್​ಗೆ ಕಲ್ಲನ್ನು ತೂರಿದ್ದಾರೆ. ಇಷ್ಟೆಲ್ಲಾ ಗಲಾಟೆ ನಡೆದ ಬಳಿಕ ಪಾನಮತ್ತ ಟ್ರಕ್ ಚಾಲಕ ಕಾರನ್ನು ನಿಲ್ಲಿಸಿ ಹೋಟೆಲ್ ಸಿಬ್ಬಂದಿ ಮೇಲೆ ದೌರ್ಜನ್ಯ ಎಸಗಿದ್ದಾನೆ. ಈ ಘಟನೆಯ ನಡುವೆಯೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ. (ಏಜೆನ್ಸೀಸ್​​)
ಅಭ್ಯರ್ಥಿ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದಕ್ಕೆ ಗಳಗಳನೆ ಅತ್ತ ಮಾಜಿ ಶಾಸಕ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:1 × 5 =
Remember me
