ನವದೆಹಲಿ:ವಯಸ್ಸು ಕೇವಲ ಸಂಖ್ಯೆ ಅಷ್ಟೇ ಎಂದು ಅನೇಕರು ಹೇಳುತ್ತಾರೆ. ಆ ಮಾತು ನಿಜವೆಂದು ಇದೀಗ ರಾಜೇಶ್ ರವಾನಿ ಎಂಬುವರು ಸಾಬೀತುಪಡಿಸಿದ್ದಾರೆ. ರಾಜೇಶ್ ಅವರು ಕಳೆದ 25 ವರ್ಷಗಳಿಂದ ಟ್ರಕ್ ಡ್ರೈವರ್ ಆಗಿದ್ದು, ಈಗ ಹಳ್ಳಿಗಾಡಿನ ಮತ್ತು ಸರಳ ಭಾಷೆಯಲ್ಲಿ ವ್ಲಾಗ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿಯನ್ನು ಗಳಿಸಿದ್ದಾರೆ.
ರಾಜೇಶ್​ ಅವರು ಯೂಟ್ಯೂಬ್​ ಮತ್ತು ಇನ್​ಸ್ಟಾಗ್ರಾಂನಲ್ಲಿ ಖಾತೆಯನ್ನು ತೆರೆದಿದ್ದು, ನಿರಂತರವಾಗಿ ವಿಡಿಯೋ ಅಪ್​ಲೋಡ್​​ ಮಾಡುವುದು ಅವರ ಕೆಲಸವಾಗಿದೆ. ದೇಶಾದ್ಯಂತ ಪ್ರವಾಸ ಮಾಡುವ ರಾಜೇಶ್​, ತಮ್ಮ ಟ್ರಕ್​ ಒಳಗೆ ವಿವಿಧ ಬಗೆಯ ಅಡುಗೆ ಮಾಡುತ್ತಾರೆ. ಟ್ರಕ್​ ಕೆಲಸ ಮತ್ತು ಅಡುಗೆ ಈ ಎರಡು ರಾಜೇಶ್​ ಅವರ ವಿಡಿಯೋದ ಕೇಂದ್ರ ಬಿಂದುವಾಗಿದೆ.
ತಮ್ಮ ವಿಡಿಯೋದಿಂದಲೇ ರಾಜೇಶ್ ತುಂಬಾ ಖ್ಯಾತಿಯನ್ನು ಗಳಿಸಿದ್ದಾರೆ. ಯೂಟ್ಯೂಬ್‌ನಲ್ಲಿ ಸುಮಾರು 1.5 ಮಿಲಿಯನ್ ಸಬ್​ಸ್ಕ್ರೈಬರ್​ಗಳನ್ನು ಹೊಂದಿದ್ದಾರೆ. ಗಮನಾರ್ಹ ಸಂಗತಿ ಏನೆಂದರೆ, ರಾಜೇಶ್ ಇತ್ತೀಚೆಗಷ್ಟೇ ತನ್ನ ಸಂಪಾದನೆಯಲ್ಲಿ ಹೊಸ ಮನೆಯನ್ನು ಸಹ ಖರೀದಿಸಿದ್ದಾರೆ. ಈ ಸಂಗತಿಯನ್ನು ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಕೂಡ ತಮ್ಮ ಎಕ್ಸ್ ಖಾತೆಯಲ್ಲಿ ಸೋಮವಾರ ಹಂಚಿಕೊಂಡಿದ್ದಾರೆ.
Rajesh Rawani, who’s been a truck driver for over 25 years, added food & travel vlogging to his profession and & is now a celebrity with 1.5M followers on YouTube.
He just bought a new home with his earnings.
He’s demonstrated that no matter your age or how modest your…pic.twitter.com/5ccfwjYOff
— anand mahindra (@anandmahindra)April 8, 2024

25 ವರ್ಷಗಳಿಂದ ಟ್ರಕ್ ಡ್ರೈವರ್ ಆಗಿರುವ ರಾಜೇಶ್ ರವಾನಿ, ತಮ್ಮ ಡ್ರೈವಿಂಗ್​ ವೃತ್ತಿಗೆ ಆಹಾರ ಮತ್ತು ಪ್ರಯಾಣದ ವ್ಲಾಗಿಂಗ್​ ಅನ್ನು ಸೇರಿಸಿದ್ದಾರೆ ಮತ್ತು ಈಗ ಯೂಟ್ಯೂಬ್‌ನಲ್ಲಿ 1.5 ಮಿಲಿಯನ್ ಅನುಯಾಯಿಗಳನ್ನು ಹೊಂದುವ ಮೂಲಕ ಪ್ರಸಿದ್ಧರಾಗಿದ್ದಾರೆ. ತಮ್ಮ ಸಂಪಾದನೆಯಿಂದ ಹೊಸ ಮನೆಯನ್ನು ಖರೀದಿಸಿದ್ದಾರೆ ಎಂದು ಆನಂದ್​ ಮಹೀಂದ್ರಾ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.
ಇದೀಗ ರಾಜೇಶ್ ಅವರ ಕತೆಯು ಸಾಕಷ್ಟು ಜನರಿಗೆ ಪ್ರೇರಣೆಯಾಗಿದೆ. ಏಕೆಂದರೆ ಟ್ರಕ್ ಡ್ರೈವರ್ ಕೆಲಸವನ್ನು ಸಾಧಾರವಾಗಿ ನೋಡುತ್ತಾರೆ. ಅಲ್ಲದೆ, ರಾಜೇಶ್​ ಅವರಿಗೆ ವಯಸ್ಸು ಸಹ ಆಗಿದೆ. ಆದರೆ, ವೃತ್ತಿ ಎಷ್ಟೇ ಸಾಧಾರಣವಾಗಿದ್ದರೂ, ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಲು ಮತ್ತು ನಿಮ್ಮನ್ನು ನೀವು ಮರುಶೋಧಿಸಲು ಎಂದಿಗೂ ಹಿಂದೇಟು ಹಾಕಬಾರದು ಎಂಬುದಕ್ಕೆ ರಾಜೇಶ್​ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ.(ಏಜೆನ್ಸೀಸ್​)
ಬೇಡ ಅಂದ್ರು ಓಡಿ ಹೋಗಿ ಪ್ರಿಯಕರನನ್ನು ವರಿಸಿದ ಮಗಳು! ಶ್ರದ್ಧಾಂಜಲಿ ಫ್ಲೆಕ್ಸ್​ ಅಳವಡಿಸಿ ಗೋಳಿಟ್ಟ ತಂದೆ

ಎಲೆಕ್ಷನ್​ಗೆ ಮದ್ಯದ ಘಾಟು:ಸಿಎಂ,ಡಿಸಿಎಂ ತವರಲ್ಲಿ ಅಧಿಕ ಪ್ರಕರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 13 =
Remember me
