ಭೋಪಾಲ್ :ಸಾಕಷ್ಟು ಲಸಿಕೆಗಳ ಪೂರೈಕೆಯಾಗಿಲ್ಲ ಎಂದು ಮಧ್ಯಪ್ರದೇಶ ಸರ್ಕಾರ ಇಂದು ಆರಂಭವಾಗಬೇಕಿದ್ದ 18 ವರ್ಷ ಮೇಲ್ಪಟ್ಟವರ ಕರೊನಾ ಲಸಿಕಾ ಅಭಿಯಾನವನ್ನು ಮುಂದೂಡಿದೆ. ಆದರೆ, ಸುಮಾರು ಎರಡೂವರೆ ಲಕ್ಷ ಡೋಸ್​ ಕೋವಾಕ್ಸಿನ್ ಲಸಿಕೆಯನ್ನು ಸಾಗಿಸುತ್ತಿದ್ದ ಟ್ರಕ್​ ಒಂದು ರಾಜ್ಯದ ಪಟ್ಟಣವೊಂದರಲ್ಲಿ ರಸ್ತೆ ಬದಿಯಲ್ಲಿ ಅನಾಥವಾಗಿ ಸಿಕ್ಕಿರುವುದು ವರದಿಯಾಗಿದೆ.
ಮಧ್ಯಪ್ರದೇಶದ ನರಸಿಂಗಪುರ ಜಿಲ್ಲೆಯ ಕರೇಲಿ ಬಸ್​ ನಿಲ್ದಾಣದ ಬಳಿ ಬಹಳಷ್ಟು ಸಮಯದಿಂದ ರಸ್ತೆಯ ಬದಿಯಲ್ಲಿ ಯಾರೋ ಟ್ರಕ್​ ಒಂದನ್ನು ಬಿಟ್ಟು ಹೋಗಿದ್ದಾರೆ. ಅದರ ಚಾಲಕ ಅಥವಾ ಕ್ಲೀನರ್​ ಸ್ಥಳದಲ್ಲಿ ಎಲ್ಲೂ ಕಾಣುತ್ತಿಲ್ಲ ಎಂದು ಕರೇಲಿ ಪೊಲೀಸರಿಗೆ ಇಂದು ಬೆಳಿಗ್ಗೆ ಮಾಹಿತಿ ಬಂದಿದೆ. ಸ್ಥಳ ತಲುಪಿದ ಪೊಲೀಸರು ಟ್ರಕ್​ಅನ್ನು ಪರಿಶೀಲಿಸಿದಾಗ ಅದರಲ್ಲಿ ಭಾರತ್​ ಬಯೋಟೆಕ್​​ ಕಂಪೆನಿಯ ಕೋವಾಕ್ಸಿನ್ ಲಸಿಕೆಗಳ 2,40,000 ಡೋಸ್​​ಗಳ ದಾ​​ಸ್ತಾನು ಕಂಡು ಆಶ್ಚರ್ಯಗೊಂಡಿದ್ದಾರೆ.
ಇದನ್ನೂ ಓದಿ:ಉಗ್ರರಿಂದ ಟ್ರಕ್‌ ಬಾಂಬ್‌ ದಾಳಿ-ಪರೀಕ್ಷೆಯ ಸಿದ್ಧತೆಯಲ್ಲಿ ತೊಡಗಿದ್ದ 21 ವಿದ್ಯಾರ್ಥಿಗಳ ದುರಂತ ಅಂತ್ಯ
“ಈ ಲಸಿಕೆಗಳ ಬೆಲೆ ಸುಮಾರು 8 ಕೋಟಿ ರೂ.ಗಳಿರಬಹುದು. ಡ್ರೈವರ್​ನ ಮೊಬೈಲ್ ನಂಬರನ್ನು ಟ್ರೇಸ್​ ಮಾಡಿದಾಗ ಅದು ಹೆದ್ದಾರಿ ಬಳಿಯ ಪೊದೆಗಳಲ್ಲಿ ಸಿಕ್ಕಿತು. ನಾವು ಡ್ರೈವರ್ ಮತ್ತು ಕಂಡಕ್ಟರ್​ಅನ್ನು ಹುಡುಕುತ್ತಿದ್ದೇವೆ. ಆದರೆ ಸದ್ಯಕ್ಕೆ ಅವರು ನಾಪತ್ತೆಯಾಗಿದ್ದಾರೆ. ಟ್ರಕ್​ನ ಏರ್ ಕಂಡೀಷನ್ ಕೆಲಸ ಮಾಡುತ್ತಿತ್ತು. ಆದ್ದರಿಂದ ಲಸಿಕೆಯ ಡೋಸ್​​ಗಳು ಸುರಕ್ಷಿತವಾಗಿವೆ ಎಂದು ಭಾವಿಸಿದ್ದೇವೆ” ಎಂದು ಸಬ್​ಇನ್ಸ್​​ಪೆಕ್ಟರ್ ಆಶೀಶ್ ಬೊಪಾಚೆ ಹೇಳಿದ್ದಾರೆ. ತನಿಖೆ ಮುಂದುವರೆದಿದೆ.(ಏಜೆನ್ಸೀಸ್)
ಕೆಲವು ವಾರ ಇಡೀ ದೇಶ ಬಂದ್​ ಮಾಡಿ ಎನ್ನುತ್ತಾರೆ ಅಮೆರಿಕದ ವೈದ್ಯಕೀಯ ಸಲಹೆಗಾರ

ಮದುವೆ ಮಂಟಪ ದಾಳಿ : ಎರ್ರಾಬಿರ್ರಿ ವರ್ತಿಸಿದ ಡಿಎಂ ಸಸ್ಪೆಂಡ್

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × 2 =
Remember me
