ಶ್ರೀನಗರ:ಕೇಂದ್ರ ಕಾನೂನು ಸಚಿವ ಕಿರಣ್​ ರಿಜುಜು ಅವರ ಕಾರು ಜಮ್ಮು-ಕಾಶ್ಮೀರದಲ್ಲಿ ಅಪಘಾತಕ್ಕಿಡಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.
ಜಮ್ಮು-ಕಾಶ್ಮೀರದ ಶ್ರೀನಗರ ಹೆದ್ದಾರಿಯ ರಾಂಬನ್​ ಬಳಿ ಘಟನೆ ನಡೆದಿದ್ದು ಲೋಡ್​ ತುಂಬಿಕೊಂಡು ಹೊರಟಿದ್ದ ಲಾರಿಯೂ ಸಚಿವರ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್​ ಅಧಿಕಾರಿಗಳು ಅಪಘಾತದಲ್ಲಿ ಯಾವುದೇ ತರಹದ ಅಹಿತಕರ ಘಟನೆಗಳು ನಡೆದಿಲ್ಲ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಚಿವರಿಗೆ ಬದಲಿ ವಾಹನದ ವ್ಯವಸ್ಥೆಯನ್ನು ಮಾಡಿ ಕೊಡಲಾಗಿದ್ದು ಅವರು ಕಾರ್ಯಕ್ರಮಕ್ಕೆ ತೆರಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Today while going from Jammu to Srinagar by road, Union Minister for Law and Justice Kiran Rijiju's car met with a minor accident. No one was injured in the accident. Kiren Rijiju was driven safely to his destination: Ramban Policepic.twitter.com/6bQcE1X5N7
ಇದನ್ನೂ ಓದಿ:ರಾಜ್ಯದಲ್ಲಿ 2 ದಿನ ಮಳೆ ಸಾಧ್ಯತೆ; ಹವಾಮಾನ ಇಲಾಖೆ ಸೂಚನೆ
ರಾಜಸ್ಥಾನದ ಉಧಮ್​ಪುರದಲ್ಲಿ ಲೀಗಲ್​ ಸರ್ವೀಸ್​ ಕ್ಯಾಂಪ್​ಗೆ ಜಮ್ಮುವಿನಿಂದ ತೆರಳುತ್ತಿದ್ದ ಸಚಿವರು ಅಪಘಾತವಾಗುವ ಕೆಲ ಹೊತ್ತಿನ ಮುಂಚೆ ವಿಡಿಯೋ ಒಂದನ್ನು ಪೋಸ್ಟ್​​​ ಮಾಡಿದ್ದರು. ರಸ್ತೆಯುದ್ದಕ್ಕೂ ಸುಂದರವಾದ ಪ್ರಯಾಣವನ್ನು ಆನಂದಿಸಬಹುದು ಎಂದು ಟ್ವೀಟ್​ ಮಾಡಿದ್ದರು.
Going from Jammu to Udhampur in Jammu & Kashmir to attend Legal Services Camp. Many beneficiaries of the Central Govt Schemes are attending the function along with Judges and NALSA team. Now, one can enjoy the beautiful road throughout the journey.pic.twitter.com/5yg43aJX1C
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 3 =
Remember me
